Advertisement

ಭೂಪಟದಲ್ಲಿ ಅಮರಾವತಿ ನಾಪತ್ತೆ: ಟಿಡಿಪಿ, ವೈಎಸ್‌ಆರ್‌ ವಾಕ್ಸಮರ

09:42 AM Nov 05, 2019 | Hari Prasad |

ಹೈದರಾಬಾದ್‌: ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗಳನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಅಸ್ತಿತ್ವಕ್ಕೆ ತಂದ ಅನಂತರ, ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಭಾರತದ ಹೊಸ ಭೂಪಟದಲ್ಲಿ ಆಂಧ್ರಪ್ರದೇಶದ ಅಮರಾವತಿ ನಗರ ನಾಪತ್ತೆಯಾಗಿದೆ. ಇದು, ಅಲ್ಲಿನ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಾರ್ಟಿ (ವೈಎಸ್‌ಆರ್‌ಸಿಪಿ) ಹಾಗೂ ವಿಪಕ್ಷ ತೆಲುಗುದೇಶಂ ಪಾರ್ಟಿ (ಟಿಡಿಪಿ) ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

Advertisement

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಟಿಡಿಪಿ ವಕ್ತಾರ ವಾರ್ಲಾ ರಾಮಯ್ಯ, ‘ಅಮರಾವತಿಗೆ ಇರುವ ರಾಜಧಾನಿ ಸ್ಥಾನಮಾನವನ್ನು ಬೇರೆ ನಗರಕ್ಕೆ ವರ್ಗಾಯಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಹಾಗಾಗಿ, ಆ ನಗರವನ್ನು ಭೂಪಟದಿಂದ ನಾಪತ್ತೆ ಮಾಡಲಾಗಿದೆ” ಎಂದಿದ್ದಾರೆ.

ಮತ್ತೂಂದೆಡೆ, ಅಮರಾವತಿ ಜಿಲ್ಲೆಯ ಮಂಗಳಗಿರಿ ಕ್ಷೇತ್ರದ ಶಾಸಕ, ವೈಎಸ್ಸಾರ್‌ಸಿ ನಾಯಕ ಅಲ್ಲಾ ರಾಮಕೃಷ್ಣಾ ರೆಡ್ಡಿ ಮಾತನಾಡಿ, ‘ಭೂಪಟದಲ್ಲಿ ನಮ್ಮ ಜಿಲ್ಲೆ ನಾಪತ್ತೆಯಾಗಿರುವುದು ಬೇಸರ ತರಿಸಿದೆ. ಆದರೆ, ಈ ಎಲ್ಲ ಬೆಳವಣಿಗೆಗೆ ಈ ಹಿಂದಿನ ಸಿಎಂ ಚಂದ್ರಬಾಬು ನಾಯ್ಡುರವರೇ ಕಾರಣ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next