Advertisement
ಕಳೆದ ಮೂರು ದಿನಗಳಿಂದ ಈ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಈ ಮಳೆಗೆ ಹಳ್ಳದ ಮೂಲಕ ಅಪಾರ ಪ್ರಮಾಣದಲ್ಲಿ ನೀರು ಜಮೆಯಾಗಿದ್ದು, ಕೆರೆ ಕೋಡಿ ಹಾಗೂ ಒಡ್ಡಿನ ಮೇಲೆ ಹರಿದ ಪರಿಣಾಮ ಕೆರೆಕಟ್ಟೆ ಒಡೆದು, ಸಂಗ್ರಹವಾದ ಅಪಾರ ಪ್ರಮಾಣದ ನೀರು ಹಳ್ಳ ಸೇರಿದೆ.
ಈ ಹಿಂದೆ ಸದರಿ ಕೆರೆಯಲ್ಲಿ ನಿಂತಿರುವ ನೀರಿನಲ್ಲಿ ಗ್ರಾಮ ಪಂಚಾಯತಿ ಹಾಗೂ ಸಣ್ಣ ನೀರಾವರಿ ಇಲಾಖೆ ಅನುಮತಿ ಪಡೆಯದೇ ಖಾಸಗಿ ಮೀನು ಸಾಕಾಣಿಕೆಗೆ ಮೀನು ಮರಿಗಳನ್ನು ಬಿಟ್ಟಿದ್ದರು. ಮೀನುಗಳ ಕೆರೆಯ ಒಳಗಟ್ಟೆಯ ಮೂಲಕ ಹೊರಗೆ ಹೋಗಬಾರದು ಎನ್ನುವ ಉದ್ದೇಶದ ಹಿನ್ನೆಲೆಯಲ್ಲಿ ಒಳ್ಳಗಟ್ಟಿ ಬಂದ್ ಮಾಡಿದ್ದರಿಂದಲೇ ಕೆರೆ ಒಡೆಯಲು ಕಾರಣ ಅನುಮಾನ ಸಾರ್ವಜನಿಕವಾಗಿ ದಟ್ಟವಾಗಿದೆ. ಆದರೆ ಸಣ್ಣ ನೀರಾವರಿ ಅಧಿಕಾರಿಗಳು ಈ ಅನುಮಾನ ಅಲ್ಲಗಳೆದಿದ್ದು, ಜಾಸ್ತಿ ಮಳೆಯಿಂದ ಕೆರೆ ಒಡೆದಿರುವ ಸಮಾಜಾಯಿಷಿಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಅಮರಾಪೂರ ಕೆರೆಯ ನೀರು, ಹಳ್ಳದ ಪಾಲಾಗಿರುವುದರಿಂದ ಅಂತರ್ಜಲ ಕುಸಿಯುವ ಆತಂಕ ರೈತರದ್ದಾಗಿದೆ.
Related Articles
Advertisement