Advertisement

ಇಂದಿನಿಂದ ಅಮರನಾಥ ಯಾತ್ರೆ ಶುರು… ಮೊದಲ ಬ್ಯಾಚ್‌ನಲ್ಲಿ 3,400 ಭಕ್ತರು

09:15 PM Jun 30, 2023 | Team Udayavani |

ಜಮ್ಮು: ಪ್ರಸಕ್ತ ಸಾಲಿನ ಅಮರನಾಥ ಯಾತ್ರೆ ಜು.1ರಿಂದ ಶುರುವಾಗಲಿದೆ. ಅದಕ್ಕೆ ಪೂರಕವಾಗಿ ಶುಕ್ರವಾರ ದಕ್ಷಿಣ ಕಾಶ್ಮೀರದ ಭಗವತಿ ನಗರ ಬೇಸ್‌ ಕ್ಯಾಂಪ್‌ನಿಂದಯಾತ್ರೆಯ ಮೊದಲ ಬ್ಯಾಚ್‌ಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಚಾಲನೆ ನೀಡಿದರು. 3,880 ಮೀಟರ್‌ ಎತ್ತರದಲ್ಲಿರುವ ಅಮರನಾಥ ದೇಗುಲಕ್ಕೆ ಮೊದಲ ಬ್ಯಾಚ್‌ನಲ್ಲಿ 3,400ಕ್ಕೂ ಹೆಚ್ಚು ಮಂದಿ ಯಾತ್ರೆ ಆರಂಭಿಸಿದ್ದಾರೆ.

Advertisement

ಐಟಿಬಿಪಿ ಯೋಧರು ಅಮರನಾಥ ಯಾತ್ರೆಯ ಸಂಪೂರ್ಣ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಭಾರತೀಯ ಸೇನೆ ಮತ್ತು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಜು.1ರಿಂದ ಆ.31ರವರೆಗೆ 62 ದಿನಗಳವರೆಗೆ ಈ ವರ್ಷದ ಅಮರನಾಥ ಯಾತ್ರೆ ನಡೆಯಲಿದೆ. ಎರಡು ಮಾರ್ಗಗಳಲ್ಲಿ, ಅನಂತ್‌ನಾಗ್‌ ಜಿಲ್ಲೆಯ ನನ್ವಾನ್‌-ಪಹಲ್ಗಾಮ್‌ 48 ಕಿ.ಮೀ. ಮಾರ್ಗ ಹಾಗೂ ಗಂಡೆರ್‌ಬಾಲ್‌ ಜಿಲ್ಲೆಯ ಬಲ್ತಾಳ್‌ನ 14 ಕಿ.ಮೀ. ಮಾರ್ಗವಾಗಿ ಯಾತ್ರೆ ಕೈಗೊಳ್ಳಲಿದ್ದಾರೆ. “ಇದುವರೆಗೂ 3.5 ಲಕ್ಷ ಯಾತ್ರಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ. 33 ಸ್ಥಳಗಳಲ್ಲಿ ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಇದೇ ವೇಳೆ, ಉಧಂಪುರದಲ್ಲಿ ಭದ್ರತಾ ಕರ್ತವ್ಯದಲ್ಲಿ ನಿರತವಾಗಿದ್ದ ವಾಹನ ಅಪಘಾತಕ್ಕೀಡಾದಿ ಮೂವರು ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next