Advertisement

ಪ್ರೇಮಿಗಳ ದಿನಕ್ಕೆ “ಅಮರ್‌’ಟೀಸರ್‌

05:48 AM Jan 23, 2019 | Team Udayavani |

ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ನಾಯಕರಾಗಿ ನಟಿಸುತ್ತಿರುವ “ಅಮರ್‌’ ಚಿತ್ರದ ಮೊದಲ ಟೀಸರ್‌ ಪ್ರೇಮಿಗಳ ದಿನ (ಫೆ. 14)ದಂದು ಬಿಡುಗಡೆಯಾಗಲಿದೆ. “ಅಮರ್‌’ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಮಣಿಪಾಲ, ಊಟಿ, ಕೇರಳ, ಕೊಯಮತ್ತೂರು, ಸ್ವಿಟ್ಜರ್‌ಲ್ಯಾಂಡ್‌ ಮೊದಲಾದ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.

Advertisement

ಫೆಬ್ರವರಿ ರಡನೇ ವಾರದಿಂದ ಬಾಕಿಯಿರುವ ಚಿತ್ರೀಕರಣವನ್ನು ಸಿಂಗಾಪುರದಲ್ಲಿ ನಡೆಸಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ. ಸಂದೇಶ್‌ ಕಂಬೈನ್ಸ್‌ ಮೂಲಕ ಸಂದೇಶ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಾಗಶೇಖರ್‌ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಿದ್ದು, ಸತ್ಯ ಹೆಗಡೆ ಛಾಯಾಗ್ರಹಣ, ಜೊ.ನಿ ಹರ್ಷ ಸಂಕಲನ ಕಾರ್ಯವಿದೆ.

ಚಿತ್ರದ ಹಾಡುಗಳಿಗೆ ಧನಂಜಯ್‌, ಇಮ್ರಾನ್‌, ಕಲೈ ನೃತ್ಯ ಸಂಯೋಜನೆ ಮಾಡುತ್ತಿದ್ದು, ರವಿವರ್ಮ, ಥ್ರಿಲ್ಲರ್‌ ಮಂಜು, ಅಂಬು ಅರಿವು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಅಭಿಷೇಕ್‌ಗೆ ನಾಯಕಿಯಾಗಿ ತಾನ್ಯಾ ಹೋಪ್‌ ಜೋಡಿಯಾಗಿದ್ದಾರೆ. ಉಳಿದಂತೆ ಸುಧಾರಾಣಿ, ದೇವರಾಜ್‌, ದೀಪಕ್‌ ಶೆಟ್ಟಿ, ಅರುಣ್‌ ಸಾಗರ್‌, ಚಿಕ್ಕಣ್ಣ, ಸಾಧುಕೋಕಿಲ, ನಿರೂಪ್‌ ಭಂಡಾರಿ ಮುಂತಾದ ಕಲಾವಿದರ ತಾರಾಗಣವಿದೆ.ನ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೂಡ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next