ನವ ದೆಹಲಿ: ವಕ್ಫ್ ಬೋರ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯ ವೇಳೆ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಬೆಂಬಲಿಗರು ಎಸಿಬಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಬೆದರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಸೆ 16 ರಂದು ದೆಹಲಿಯ ಓಖ್ಲಾ ಶಾಸಕ ಖಾನ್ ಜಾಮಿಯಾ ನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದಾಗ ಈ ಘಟನೆ ನಡೆದಿದೆ.
ದೆಹಲಿ ವಕ್ಫ್ ಬೋರ್ಡ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ದೆಹಲಿ ಎಸಿಬಿ ಶುಕ್ರವಾರ ಸಂಜೆ ಬಂಧಿಸಿತ್ತು.
ಇದನ್ನೂ ಓದಿ: ದೇಶದ ವಿರೋಧಿ ಚಟುವಟಿಕೆ ಆರೋಪ: ಆಂಧ್ರಪ್ರದೇಶದ ಹಲವೆಡೆ ಎನ್ ಐಎ ದಾಳಿ
ಶನಿವಾರ ನಡೆದ ವಿಚಾರಣೆಯ ವೇಳೆ ಎಸಿಬಿ, ತಮ್ಮ ಎಸಿಪಿ ಮೇಲೆ ಖಾನ್ ಸಂಬಂಧಿಕರು ಮತ್ತು ಬೆಂಬಲಿಗರು ದಾಳಿ ನಡೆಸಿದ್ದರು ಎಂದು ರೂಸ್ ಅವೆನ್ಯೂ ಕೋರ್ಟ್‌ಗೆ ಮಾಹಿತಿ ನೀಡಲಾಗಿದೆ. ದಾಳಿಯ ಛಾಯಾಚಿತ್ರಗಳು ಮತ್ತು ವಿಡಿಯೋ ಸಾಕ್ಷ್ಯಗಳನ್ನು ಸಹ ನ್ಯಾಯಾಲಯಕ್ಕೆ ತೋರಿಸಲಾಗಿದೆ.
ಎಸಿಬಿಯ ಎಸಿಪಿ ಮೇಲೆ ದಾಳಿ ಮಾಡಿದ್ದಕ್ಕಾಗಿ ಮತ್ತು ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಜೀವಂತ ಕಾಟ್ರಿಡ್ಜ್‌ಗಳನ್ನು ಹೊಂದಿದ್ದಕ್ಕಾಗಿ ಖಾನ್ ಬೆಂಬಲಿಗರ ವಿರುದ್ಧ ದೆಹಲಿ ಪೊಲೀಸರು ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಎಎಪಿ ಶಾಸಕ ಹಮೀದ್ ಅಲಿ ಮತ್ತು ಕೌಸರ್ ಇಮಾಮ್ ಸಿದ್ದಿಕ್ ಅವರ ಸಹಾಯಕರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಎಸಿಬಿ ನಡೆಸಿದ ದಾಳಿಗೆ ಅಡ್ಡಿಪಡಿಸಿದಕ್ಕಾಗಿ ಮೂರನೇ ಎಫ್‌ಐಆರ್ ದಾಖಲಿಸಲಾಗಿದೆ.