Advertisement

ಯಾವಾಗಲೂ ಧನಾತ್ಮಕ ಚಿಂತನೆ ಮಾಡಿ

10:48 AM May 03, 2019 | Suhan S |

ಧಾರವಾಡ: ನಾವು ಮಾಡುವ ವಿಚಾರಧಾರೆಯಿಂದ ಆರೋಗ್ಯ-ಅನಾರೋಗ್ಯ ಎರಡನ್ನೂ ಪಡೆಯಬಹುದಾಗಿದ್ದು, ಯಾವಾಗಲೂ ಧನಾತ್ಮಕ ಚಿಂತನೆ ಮಾಡಬೇಕು ಎಂದು ಕವಿವಿ ಮನೋವಿಜ್ಞಾನ ವಿಭಾಗದ ಮಾಜಿ ಡೀನ್‌ ಡಾ| ವಿಜಯಲಕ್ಷ್ಮೀ ಅಮ್ಮಿನಬಾವಿ ಹೇಳಿದರು.

Advertisement

ನಗರದ ಅಂಜುಮನ್‌ ಇಸ್ಲಾಂ ಸಂಸ್ಥೆ ಸಭಾಭವನದಲ್ಲಿ ಅಂಜುಮನ್‌ ಇನ್‌ಸ್ಟಿಟ್ಯೂಟ್ ಆಫ್‌ ಇನ್‌ಫಾರ್ಮೇಶನ್‌ ಸೈನ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನ 23ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು,

ಯಾವುದೂ ಅಸಾಧ್ಯವಿಲ್ಲ. ಏನಾದರೂ ಸಾಧಿಸಬೇಕಾದರೆ ಮನ ಮಂಥನ, ಕಠಿಣ ಪರಿಶ್ರಮ ಅವಶ್ಯ ಎಂದರು.

ನಿಮಗೆ ಯಾವುದೇ ಸಮಸ್ಯೆಗಳು ಇದ್ದಲ್ಲಿ ಮುಚ್ಚು ಮರೆ ಇಲ್ಲದೆ ಪಾಲಕರ-ಶಿಕ್ಷಕರ ಜತೆ ವಿಚಾರ ವಿಮರ್ಶೆ ಮಾಡಿ ಪರಿಹಾರ ಕಂಡುಕೊಳ್ಳಬೇಕು. ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಬೇಕು ಎಂದರು.

ಧಾರವಾಡ ಉಪ ವಿಭಾಗೀಯ ಅಧಿಕಾರಿ ಮೊಹಮದ್‌ ಜುಬೇರ್‌ ಮಾತನಾಡಿ, ಪದವಿ ಪಡೆದರೆ ಸಾಲದು. ಅದರೊಂದಿಗೆ ಜ್ಞಾನ ಭಂಡಾರ ಹೆಚ್ಚಿಸಲು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕು. ಕಲಿಕೆ ನಿರಂತರವಾಗಿದ್ದು, ವಿದ್ಯೆ ಕಲಿಯಲು ಜಾತಿ, ಧರ್ಮ, ಬಡತನ ಅಡ್ಡಿ ಬರದು. ಸತತ ಪರಿಶ್ರಮದಿಂದ ಯಶಸ್ಸು ಕಾಣಬೇಕು. ಕಲಿತ ಸಂಸ್ಥೆ ತಂದೆ-ತಾಯಿಯರಿಗೆ ನಿಮ್ಮ ಮೇಲೆ ಹೆಮ್ಮೆ ಬರುವ ಹಾಗೆ ಕೆಲಸ ಕಾರ್ಯ ಮಾಡಬೇಕು ಎಂದರು.

Advertisement

ಇದೇ ಸಂದರ್ಭದಲ್ಲಿ 2018-19ರ ಕಾಲೇಜ್‌ ಪುಸ್ತಕ ಬಿಡುಗಡೆ ಮಾಡಲಾಯಿತು. ಇದಲ್ಲದೇ ಪ್ರೊ|ಅಬ್ದುಲ್ ಕಿತ್ತೂರ, ಮೊಹಮದ್‌ ಅಲ್ತಾಫ ಶೇಖ್‌, ಅಶ್ಪಾಕ ಬೆಟಗೇರಿ, ಜಮೀತ ಬೆಟಗೇರಿ ಅವರನ್ನು ಸನ್ಮಾನಿಸಲಾಯಿತು.

ರೆಡ್‌ಕ್ರಾಸ್‌ ವಿಂಗ್‌ದಿಂದ ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪಠ್ಯ ಪುಸ್ತಕ ಉಚಿತವಾಗಿ ನೀಡಲಾಯಿತು. ಬಿಸಿಎ, ಬಿಬಿಎ ಸೆಮಿಸ್ಟರ್‌ನಲ್ಲಿ ಹೆಚ್ಚು ಅಂಕ ಪಡೆದ 15 ವಿದ್ಯಾಥಿಗಳಿಗೆ ನಗದು ಪುರಸ್ಕಾರ ಹಾಗೂ ಪಾರಿತೋಷಕ ನೀಡಲಾಯಿತು.

ಅಂಜುಮನ್‌ ಇಸ್ಲಾಂ ಸಂಸ್ಥೆಯ ಆಡಳಿತ ಅಧಿಕಾರಿ ನಿಸಾರ್‌ ಅಹ್ಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಎಮ್‌.ಎಲ್ ಕಿಲ್ಲೆದಾರ, ಜಿಮ್‌ಖಾನಾ ಚಟುವಟಿಕೆಗಳ ಚೇರ್‌ಮನ್‌ ಪ್ರೊ| ಎನ್‌.ಎಚ್ ಪಾಟೀಲ, ಬುರಾನ್‌.ಎಮ್‌.ಬಗ್ಧಾದಿ, ಆಪ್ರೀನ್‌.ಎನ್‌.ಘೊಡೆವಾಲೆ, ಮಹ್ಮದರಫಿಕ ಎಮ್‌.ಜವಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next