ನಂಜನಗೂಡು: ಬದನವಾಳಿನಲ್ಲಿ ಭಾನು ವಾರ ಕಾಣಿಸಿಕೊಂಡ ಸೌಹಾರ್ದತೆಯ ಮನೋಭಾವ ಸದಾ ಮುಂದು ವರಿಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು. ಪಟ್ಟಣಕ್ಕೆ ಆಗಮಿಸಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದರ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿ, ಮಹಾತ್ಮ ಗಾಂಧಿ ಕಾಲಿಟ್ಟ ಈ ಊರಿಗೆ ತನ್ನದೇ ಆದ ಇತಿಹಾಸವಿದೆ. ಇಂತಹ ಇತಿಹಾಸ ಹೊಂದಿರುವ ಈ ಗ್ರಾಮ ಅಭಿವೃದ್ಧಿಗಾಗಿ ತಾವು ಪ್ರಧಾನಿ ನರೇಂದ್ರ ಮೋದಿಗೆ ಮೊರೆ ಹೋಗುವುದಾಗಿ ಘೋಷಿಸಿದರು.
ಮಾನ ನಷ್ಠ ಮೂಕದ್ದಮೆ: ನ್ಯಾಯಾಲಯವೇ ಈ ಯಡಿಯೂರಪ್ಪ ನಿರ್ದೋಷಿ ಎಂದು ತೀರ್ಪಿತ್ತ ಮೇಲೂ ತಮ್ಮನ್ನು ಭ್ರಷ್ಟ ರಾಜಕಾರಣಿ ಜೈಲಿಗೆ ಹೋದವನು ಎಂದು ಹೇಳುತ್ತಿರುವ ಮುಖ್ಯಮಂತ್ರಿ ಹಾಗೂ ಸಂಸದ ಆರ್.ಧ್ರುವನಾರಾಯಣರ ವಿರುದ್ಧ ತಾವು ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದರು. ಈ ಚುನಾವಣೆ ಭ್ರಷ್ಟಾಚಾರ ಹಾಗೂ ಪ್ರಾಮಾಣಿಕತೆಯ ಸಮರ.
ನೀವು ಪ್ರಾಮಾಣಿಕ ರಾಜಕಾರಣಿ ಪ್ರಸಾದರನ್ನು ಗೆಲ್ಲಿಸಿ ಕೊಡಿ ನಾನು ಇವರನ್ನು ವಿಧಾನ ಸಭೆಯಲ್ಲಿ ಸಿದ್ದರಾಮಯ್ಯರ ಮುಂದೆ ನಿಲ್ಲಿಸಿ ಮುಖ್ಯಮಂತ್ರಿ ಹಾಗೂ ಅವರ ಮಂತ್ರಿಮಂಡಳದ ಭ್ರಷ್ಟಾಚಾರದ ಹೂರಣವನ್ನು ಹೊರಹಾಕಿಸ್ತೇನೆ ಎಂದು ಜನತೆ ಕೇಳಿಕೊಂಡರು. ಸಂಸದೆ ಶೋಬಾ ಕರಂದ್ಲಾಜೆ ಮಾತನಾಡಿ, ಕ್ಷೇತ್ರದಲ್ಲಿ ಇಂದು ಕಾಣಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗೆ ಪ್ರಸಾದರೇ ಕಾರಣ ಎಂದರು.
ಪ್ರಸಾದ್ ಬಿಜೆಪಿಗೆ ಸೇರುತ್ತಾರೆ ಎಂದು ತಿಳಿದಿದ್ದರೆ ಸಿದ್ದರಾಮಯ್ಯ ಅವರ ತಂಟೆಗೆ ಹೋಗುತ್ತಿರಲಿಲ್ಲ. ಪ್ರಾಮಾಣಿಕ ಸಚಿವರನ್ನು ಅವಮಾನಿಸುವುರ ಮುಖಾಂತರ ಧೀಮಂತ ರಾಜಕಾರಣಿ ಯಡಿಯೂರಪ್ಪ ಹಾಗೂ ಸ್ವಾಭಿಮಾನಿ ಪ್ರಸಾದ್‌ರನ್ನು ಒಗ್ಗೂಡಿಸಿ ಬಿಜೆಪಿಗೆ ಹಾಗೂ ರಾಜ್ಯಕ್ಕೆ ಒಳಿತು ಮಾಡಿದ್ದಾರೆ ಎಂದು ಹೇಳಿದರು. ಮುಖಂಡರಾದ ವೀರಯ್ಯ, ಕೋಟೆ ಶಿವಣ್ಣ ಮಹದೇವು ಅಳಿಯ ಕೆಕೆ ಜಯದೇವು, ಎಸ್ ಮಹದೇವಯ್ಯ, ಅಶೋಕ ಇತರರು ಇದ್ದರು.