Advertisement

ರೈತರ ಆರ್ಥಿಕ ಬೆಳವಣಿಗೆಗೆ ಶ್ರಮಿಸಲು ಸದಾ ಬದ್ಧ: ಹುಕ್ಕೇರಿ

06:21 PM Feb 08, 2022 | Team Udayavani |

ಚಿಕ್ಕೋಡಿ: ಹಿರೇಕೋಡಿ ಗ್ರಾಮದಲ್ಲಿ ರೈತರ ಬಹುದಿನಗಳ ಕನಸಾಗಿದ್ದ 1.95 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡ ಶ್ರೀ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯನ್ನು ವಾಸ್ತು ಶಾಂತಿ ನೆರವೇರಿಸುವ ಮೂಲಕ ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕೇರಿ ಲೋಕಾರ್ಪಣೆಗೊಳಿಸಿದರು.

Advertisement

ನಂತರ ಮಾತನಾಡಿದ ಅವರು, ನೀರಿನ ಮಿತಬಳಕೆ ಮೂಲಕ ಎಲ್ಲರ ಪ್ರಗತಿ ಸಾಧ್ಯ. ನಾವು ಸಬಲರಾಗಿ ಬದುಕಬೇಕಾದರೆ ಆರ್ಥಿಕವಾಗಿ ಸಬಲರಾಗಬೇಕು. ಆ ನಿಟ್ಟಿನಲ್ಲಿ ನಾನು ಹಾಗೂ ನಮ್ಮ ನಾಯಕ ಪ್ರಕಾಶ ಹುಕ್ಕೇರಿ ನೀರಾವರಿ ಯೋಜನೆ ಮೂಲಕ ರೈತರ ಬೆಳವಣಿಗೆಗೆ ಶ್ರಮಿಸುತ್ತಿದ್ದೇವೆ. ಯಾವ ಕಾಲದಲ್ಲಿ, ಯಾವ ಪ್ರದೇಶದಲ್ಲಿ, ಯಾವ ಬೆಳೆ ಬೆಳೆಯಬೇಕು? ಎಂಬುದನ್ನು ಅರಿತು ರೈತರು ನೀರಿನ ಸಂರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

ನೀರು ಮಿತವಾಗಿ ಬಳಸಿ, ನೀರಿನ ದುರ್ಬಳಕೆ ಮಾಡಬೇಡಿ, ಅವಶ್ಯಕವಾಗಿರುವಷ್ಟೇ ನೀರು ಬಳಸಿ. ಈ ನಿಟ್ಟಿನಲ್ಲಿ ನೀರಿನ ಮಿತಬಳಕೆ ಬಗ್ಗೆ ರೈತರು ಮನಗಾಣಬೇಕು. ಮುಂದಿನ ದಿನಗಳಲ್ಲಿ ಇತರೆ ಗ್ರಾಮಗಳಲ್ಲೂ ನೀರಾವರಿ ಯೋಜನೆ ಮಾಡುವ ಮೂಲಕ ರೈತರ ಬದುಕು ಹಸನಾಗಿಸಲು ಶ್ರಮಿಸುವೆ ಎಂದ ಅವರು, ಶ್ರೀ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಮೂಲಕ ಭೂಮಿಗೆ ನೀರುಣಿಸುವ ಮಹತ್ತರ ಕೆಲಸವು ಪೂರ್ಣಗೊಂಡಿದ್ದಕ್ಕೆ ರೈತರ
ಮೊಗದಲ್ಲಿ ಸಂತಸ ತಂದಿರುವುದು ನನಗೆ ಖುಷಿ ತರಿಸಿದೆ ಎಂದರು.

ಈ ಸಂದರ್ಭಧಲ್ಲಿ ಬಾಬರ ಪಟೇಲ್‌, ಸುರೇಶ ಚೌಗಲಾ, ಉಮೇಶ ಸಾತವಾರ, ಗುಡಿಮನಿ ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next