Advertisement

Alva’s: ವಿರಾಸತ್‌ 2023- ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ, ಚಿತ್ರ ಪ್ರದರ್ಶನ

01:42 AM Nov 17, 2023 | Team Udayavani |

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಡಿ. 14ರಿಂದ 17ರ ವರೆಗೆ ನಡೆಯುವ ಆಳ್ವಾಸ್‌ ವಿರಾಸತ್‌ – 2023ರ ಭಾಗವಾಗಿ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರಗ್ರಹಣ ಸ್ಪರ್ಧೆ ಹಾಗೂ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜಕರಾದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

1.25 ಲಕ್ಷ ರೂ. ನಗದು ಪ್ರಶಸ್ತಿ

ಛಾಯಾಚಿತ್ರಗ್ರಹಣದಲ್ಲಿ ಪ್ರಮಾಣ ಪತ್ರ ಸಹಿತ ಪ್ರಥಮ 25 ಸಾವಿರ ರೂ., ಚಿನ್ನದ ಪದಕ, ದ್ವಿತೀಯ 15 ಸಾವಿರ ರೂ., ಬೆಳ್ಳಿಯ ಪದಕ, ತೃತೀಯ 10 ಸಾವಿರ ರೂ. ಕಂಚಿನ ಪದಕ; ತೀರ್ಪುಗಾರರ ಆಯ್ಕೆಗೆ ಪಾತ್ರವಾಗುವ ಮೂರು ಚಿತ್ರಗಳಿಗೆ ತಲಾ 5 ಸಾವಿರ ರೂ. ಹಾಗೂ ಸಂಸ್ಥೆಯ ಅಧ್ಯಕ್ಷರ ಆಯ್ಕೆಯಲ್ಲಿ ತಲಾ 5 ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು. 15 ಪ್ರವೇಶಿಕೆಗಳಿಗೆ 2 ಸಾವಿರ ರೂ. ಸಹಿತ ಮೆರಿಟ್‌ ಸರ್ಟಿಫಿಕೆಟ್‌ ನೀಡಲಾಗುವುದು.

5 ವಿಭಾಗಗಳಲ್ಲಿ ಪ್ರಶಸ್ತಿ
ಉತ್ತಮ ಆ್ಯಕ್ಷನ್‌ ಫೋಟೋ, ಉತ್ತಮ ಪಕ್ಷಿ ಫೋಟೋ, ಉತ್ತಮ ಸಸ್ತನಿ ಫೋಟೋ, ಉತ್ತಮ ಮ್ಯಾಕ್ರೋ ಫೋಟೋ ಹಾಗೂ ಉತ್ತಮ ಪರಿಸರ ಫೋಟೋ ಎಂಬ ವಿಭಾಗಗಳಲ್ಲಿ ತಲಾ 5 ಸಾವಿರ ರೂ. ನಗದು ಬಹುಮಾನವಿದೆ.

ಛಾಯಾಚಿತ್ರಗಳನ್ನು ಕಳುಹಿಸಿಕೊಡಲು ನವೆಂಬರ್‌ 20 ಕೊನೆಯ ದಿನಾಂಕವಾಗಿದೆ. //alvasvirasat2023photoexhibition.com ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next