ಜೈಪುರ : ಕಳೆದ ಎಪ್ರಿಲ್ ನಲ್ಲಿ ಮಹಿಳೆಯ ಮೇಲೆ ಅಲ್ವಾರ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದ್ದ ಸಂದರ್ಭದಲ್ಲಿ ಥಾನಾಗಾಜಿ ಎಸ್‌ಎಚ್‌ಓ ಆಗಿದ್ದ ಅಧಿಕಾರಿಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ರಾಜಸ್ಥಾನ ಸರಕಾರ ಕೊನೆಗೂ ಆದೇಶ ಹೊರಡಿಸಿದೆ.
Advertisement
ಇದೇ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಜಗ್‌ಮೋಹನ್ ಶರ್ಮಾ ಅವರನ್ನು ಅಲವಾರ್ ಜಿಲ್ಲೆಯ ಹೊರಗೆ ವರ್ಗಾಯಿಸಲಾಗುವುದು ಎಂದು ಸರಕಾರ ಬಿಡುಗಡೆ ಮಾಡಿರುವ ಪ್ರಕಟನೆ ತಿಳಿಸಿದೆ.
ಈ ಗ್ಯಾಂಗ್ ರೇಪ್ ಕೇಸಿಗೆ ಸಂಬಂಧಿಸಿ ವಿಭಾಗೀಯ ಆಯುಕ್ತರು ನಡೆಸಿರುವ ತನಿಖೆಯಲ್ಲಿ ತಪ್ಪುಗಾರರೆಂದು ಕಂಡು ಬಂದಿರುವ ಇತರ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆಯೂ ರಾಜ್ಯ ಸರಕಾರ ಆದೇಶಿಸಿದೆ.