Advertisement

ಆಳ್ವಾಸ್‌ ವರ್ಣ ವಿರಾಸತ್‌ ಪ್ರಾರಂಭ

03:45 AM Jan 12, 2017 | Team Udayavani |

ಮೂಡಬಿದಿರೆ: ವಿದ್ಯಾಗಿರಿಯಲ್ಲಿ ಬುಧವಾರ ಪ್ರಾರಂಭವಾದ “ಆಳ್ವಾಸ್‌ ವರ್ಣ ವಿರಾಸತ್‌ – 2017′ ರಾಷ್ಟ್ರಮಟ್ಟದ ಕಲಾವಿ ದರ ಐದು ದಿನಗಳ ಶಿಬಿರವನ್ನು ಕೋಟೇಶ್ವರದ ಗುರುಕುಲ ಪಬ್ಲಿಕ್‌ ಸ್ಕೂಲ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಅನುಪಮಾ ಹೆಗ್ಡೆ ಉದ್ಘಾಟಿಸಿದರು.

Advertisement

“ಶಿಕ್ಷಣ ಮತ್ತು ಚಿತ್ರಕಲೆ ಅವಿನಾಭಾವ ಸಂಬಂಧ ಹೊಂದಿವೆ. ಆಳ್ವಾಸ್‌ ಶಿಕ್ಷಣಾಲಯದಲ್ಲಿ ಶಿಕ್ಷಣ, ಕಲೆ, ಕ್ರೀಡೆ, ಸಂಸ್ಕೃತಿಗಳ ಸಮನ್ವಯದ ಶಿಕ್ಷಣ ದೊರೆಯುತ್ತಿರುವುದರಿಂದಾಗಿ ಈ ಸಂಸ್ಥೆ ಶಿಕ್ಷಣದ ಪರಮ ಉದ್ದೇಶವನ್ನು ಸಾಧಿಸಿ ತೋರುವಂತಾಗಿದೆ’ ಎಂದು ಅವರು ಹೇಳಿದರು.

ಮೂಡಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನವಿತ್ತರು. “ಭಾರತೀಯ ಕಲೆ ಮತ್ತು ಸಂಸ್ಕೃತಿ ಮಹತ್ವಪೂರ್ಣವಾಗಿದೆ. ಭಾರತ, ಆಫ್ರಿಕಾ, ರೋಮ್‌, ಚೀನ ಇಂಥ ಕೆಲವೇ ದೇಶಗಳು ಇಂಥ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದ್ದು ಇವುಗಳನ್ನು ಸಂರಕ್ಷಿಸಿ ಬೆಳೆಸಬೇಕಾಗಿದೆ. ಧರ್ಮ, ಸಂಸ್ಕೃತಿ, ಸಾಮಾಜಿಕ ಜೀವನದ ಪ್ರಗತಿ ಕಲೆಯಿಂದ ಆಗಬೇಕಾಗಿದೆ’ ಎಂದು ಅವರು ಹೇಳಿದರು.

“ಮಾಸ್ಟರ್‌ ಸ್ಟ್ರೋಕ್‌’ ಬಿಡುಗಡೆ
ಹಿರಿಯ ಚಿತ್ರಕಲಾವಿದ ದೇವುದಾಸ್‌ ಶೆಟ್ಟಿ ಅವರು ತಮ್ಮ ಕಲಾ ಜೀವನದ ಬಗ್ಗೆ ಚಿತ್ರಿಸಿದ “ಮಾಸ್ಟರ್‌ಸ್ಟ್ರೋಕ್‌’ ಕೃತಿಯನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಬಿಡುಗಡೆಗೊಳಿಸಿದರು ಹಾಗೂ 20 ಮಂದಿ ಕಲಾವಿದರನ್ನು ಶಿಬಿರಕ್ಕೆ ಬರಮಾಡಿಕೊಂಡರು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ಕೋಟಿ ಪ್ರಸಾದ್‌ ಆಳ್ವ, ಗಣೇಶ ಸೋಮಯಾಜಿ ಉಪಸ್ಥಿತರಿದ್ದರು. ತೇಜಸ್ವಿನಿ ಸ್ವಾಗತಿಸಿ ನಿರೂಪಿಸಿದರು.

ಶಿಬಿರದಲ್ಲಿ
ಮುಂಬಯಿಯ ಅಮಿ ಪಟೇಲ್‌, ದೇವುದಾಸ್‌ ಶೆಟ್ಟಿ, ನೀಲೇಶ್‌ ಡಿ. ಭಾರ್ತಿ, ರಮೇಶ್‌ ಹರಿ ಪಚ³ಂಡೆ, ಸಾಗರ್‌ ಬೊಂಡ್ರು, ಹೈದರಾಬಾದಿನ ಪಾಲಕ್‌ ದುಬೆ, ಪ್ರೀತಿ ಸಂಯುಕ್ತ, ಕೇರಳದ ಧ್ರುವರಾಜ ಎನ್‌.ವಿ., ಸ್ಮಿತಾ ವಿಜಯನ್‌, ಶ್ರೀಜಾ ಪಲ್ಲಮ್‌, ವಿಜಯ ಕುಮಾರ್‌, ಒಡಿಶಾದ ಸಂಗ್ರಾಮ್‌ ಕುಮಾರ್‌ ಮಝಿ, ಬೆಂಗಳೂರಿನ ಗಣಪತಿ ಹೆಗ್ಡೆ,
ಕಾಂತರಾಜು, ತಮಿಳ್ನಾಡಿನ ಗಂಗಾಥರನ್‌ ಜಿ., ಚೆನ್ನೈಯ ಕಣ್ಣನ್‌, ಮೈಸೂರಿನ ಸಚ್ಚಿದಾನಂದ, ಗುಜರಾತ್‌ನ ಕಿಶೋರ್‌ ನರ್ಖಾಡಿವಾಲ,  ತ್ರಿಪುರಾದ ರಮೆÂàಂದು ಕೆ. ದಾಸ್‌ ಪಾಲ್ಗೊಳ್ಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next