ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ “ಆಳ್ವಾಸ್ ಪ್ರಗತಿ-2022′ ಬೃಹತ್ ಉದ್ಯೋಗ ಮೇಳ ಅ. 14, 15ರಂದು ಮೂಡುಬಿದಿರೆ ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
12ನೇ ಆವೃತ್ತಿಯಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್‌ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ನೇಮಕಾತಿ ನಡೆಸಲಿವೆ. ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ, ಎಸೆಸೆಲ್ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ ಎಂದರು.
200ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಅವುಗಳ ವಿವರಗಳನ್ನು www.alvaspragati.com ನಲ್ಲಿ ಪ್ರಕಟಿಸಲಾಗುವುದು. ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಐಸಿಐಸಿಐ, ಆ್ಯಕ್ಸಿಸ್, ಕೋಟಕ್ ಮಹೀಂದ್ರಾದಂತಹ ಪ್ರತಿಷ್ಠಿತ ಬ್ಯಾಂಕ್‌ಗಳು ಅವಕಾಶ ನೀಡಲಿವೆ. ಅಮೆಝಾನ್, ನೆಟ್‌ಮೆಡ್ಸ್, ಅವಿನ್ ಸಿಸ್ಟಮ್ಸ್, ಮೆಡ್ ಪ್ಯಾಕ್ ಸಿಸ್ಟಮ್ಸ್‌ನಂತಹ ಪ್ರಮುಖ ಐಟಿ ಕಂಪೆನಿಗಳು, ಮಂಗಳೂರು ಮೂಲದ ಐಟಿ ಕಂಪೆನಿಗಳಾದ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್, ವಿನ್‌ಮ್ಯಾನ್ ಸಾಫ್ಟ್‌ವೇರ್, ದಿಯಾ ಸಿಸ್ಟಮ್ಸ್, ಅದ್ವೆ„ತ ಸಿಸ್ಟಮ್ಸ್ ಮುಂತಾದವುಗಳು ಉದ್ಯೋಗಾವಕಾಶಗಳನ್ನು ನೀಡಲಿವೆ ಎಂದರು.
ಉತ್ಪಾದನ ವಲಯದಲ್ಲಿ ಏಸ್ ಮ್ಯಾನುಫ್ಯಾಕ್ಚರಿಂಗ್, ಸನ್ಸೆರಾ ಎಂಜಿನಿಯರಿಂಗ್, ಸ್ಟಂಪ್ ಶೂಲೆ ಆ್ಯಂಡ್ ಸೋಮಪ್ಪ ಸ್ಪ್ರಿಂಗ್ಸ್ , ಸ್ವಿಚ್‌ಗೇರ್ ಆ್ಯಂಡ್ ಕಂಟ್ರೋಲ್, ಓರಿಯೆಂಟ್ ಬೆಲ್ ಸೇರಿದಂತೆ ಈ ವರ್ಷ ಮೆಕ್ಯಾನಿಕಲ್ ಎಂಜಿನಿಯರ್‌ಗಳಿಗಾಗಿ 100ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇರಲಿವೆ. ಗಲ್ಫ್ನ “ಎಕ್ಸ$³ಟೈìಸ್’ ಬಹುರಾಷ್ಟ್ರೀಯ ಕಂಪೆನಿ ಮೆಕ್ಯಾನಿಕಲ್ ಎಂಜಿನಿಯರ್‌ಗಳ ನೇಮಕಾತಿ ನಡೆಸಲಿದೆ. ಬಿಕಾಂ ಪದವೀಧರರಿಗೆ ಉತ್ಪಾದನ ವಲಯದಲ್ಲಿ ಹೆಚ್ಚಿನ ಅಕೌಂಟೆಂಟ್ ಹುದ್ದೆಗಳು ಹಾಗೂ ಇತರ ಪದವೀಧರರಿಗೆ ವಿವಿಧ ವಲಯಗಳಲ್ಲಿ ವಿಪುಲ ಉದ್ಯೋಗಾವಕಾಶಗಳು ಇರಲಿವೆ. ನರ್ಸಿಂಗ್, ಬಿ.ಫಾರ್ಮಾ, ಎಂ.ಫಾರ್ಮಾ, ಬಿಎನ್‌ವೈಎಸ್ ಹಾಗೂ ಬಿಪಿಟಿ ವಿದ್ಯಾರ್ಹತೆಗಳ ಅಭ್ಯರ್ಥಿಗಳಿಗೆ ನಾರಾಯಣ ಹೃದಯಾಲಯ ಸ್ಪೆಷಾಲಿಟಿ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆ ನಾರಾಯಣ ಹೆಲ್ತ್ ಕೇರ್, ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್‌ಸ್ಟಿಟ್ಯೂಟ್, ಕೆಎಂಸಿ ಆಸ್ಪತ್ರೆ, ಗೋವಾದ ಮಣಿಪಾಲ್ ಆಸ್ಪತ್ರೆ ಮುಂತಾದ ಆಸ್ಪತ್ರೆಗಳು ಉದ್ಯೋಗ ನೀಡಲಿವೆ ಎಂದರು.
ನರ್ಸಿಂಗ್ ಪದವೀಧರ ಅಭ್ಯರ್ಥಿಗಳೂ ಹೆಚ್ಚಿನ ಅವಕಾಶಗಳನ್ನು ಪಡೆಯಲಿದ್ದಾರೆ. ಮಹೀಂದ್ರಾ, ಮಾಂಡೋವಿ ಮೋಟಾರ್ಸ್, ಆಟೋ ಮ್ಯಾಟ್ರಿಕ್ಸ್, ತಿರುಮಲ ಮೋಟಾರ್ಸ್ ಮುಂತಾದ ಆಟೋಮೊಬೈಲ್ ಶೋರೂಂಗಳು ಡಿಪ್ಲೊಮಾ ಮತ್ತು ಪದವಿ ಪದವೀಧರರಿಗೆ ಅವಕಾಶ ನೀಡಲಿವೆ ಎಂದರು.
ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಅಭ್ಯರ್ಥಿಗಳು //alvaspragati.com/CandidateRegistrationPage ಮತ್ತು ಕಂಪೆನಿಗಳ //alvaspragati.com/CompanyRegistrationPage ನಲ್ಲಿ ನೋಂದಣಿ ಮಾಡಬಹುದು. ಅಭ್ಯರ್ಥಿಗಳು 5-10 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು, ಅಂಕ ಪಟ್ಟಿಗಳು (ಜೆರಾಕ್ಸ್), ಆನ್‌ಲೈನ್ ನೋಂದಣಿ ನಂಬರ್/ಐಡಿ ಇರಬೇಕು ಎಂದು ತಿಳಿಸಿದರು.
ಸುಶಾಂತ್ ಅನಿಲ್ ಲೋಬೊ, ಪ್ರಸಾದ್ ಶೆಟ್ಟಿ, ಪದ್ಮನಾಭ ಶೆಣೈ, ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿದ್ದರು.