Advertisement

ಆಳ್ವಾಸ್‌ ವರ್ಣ ವಿರಾಸತ್‌: ರಾಷ್ಟ್ರೀಯ ಚಿತ್ರಕಲಾ ಶಿಬಿರ ಪ್ರಾರಂಭ

11:15 AM Jan 10, 2018 | Team Udayavani |

ಮೂಡಬಿದಿರೆ: “ಶುಷ್ಕ ಮನಸ್ಸು ಮರಣವಿದ್ದಂತೆ. ಮನಸ್ಸನ್ನು ಜೀವಂತವಿರಿಸಲು ಕಲೆ, ಸಂಸ್ಕೃತಿ, ಸಾಹಿತ್ಯ ಸಂಸರ್ಗ ಅವಶ್ಯ. ನಮ್ಮ ಉದ್ದೇಶ ಮರಣವಾಗಬಾರದು. ಸಕಲ ಜೀವಿಗಳ ಪ್ರೀತಿಸಿ ಬದುಕುವಂತಹ ಜಾಯಮಾನ ನಮ್ಮದಾಗಬೇಕು. ಕಲೆಗೆ ಜೀವ ನೀಡುವ ಕಲಾವಿದರು ಅಸೀಮ ಭಾವನೆಯಿಂದ ಪ್ರಕೃತಿಯಲ್ಲಿರುವ ನೈಜ ಸಂಸ್ಕೃತಿ ಯನ್ನು ಕಲೆಯ ರೂಪದಲ್ಲಿ ಮೂಡಿಸಲಿ’ ಎಂದು ಮೂಡ ಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾ ರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.

Advertisement

ಆಳ್ವಾಸ್‌ ವಿರಾಸತ್‌ 2018ರ ಅಂಗವಾಗಿ ಜ. 9ರಿಂದ 14ರ ವರೆಗೆ ನಡೆಯಲಿರುವ “ಆಳ್ವಾಸ್‌ ವರ್ಣವಿರಾಸತ್‌ 2018′ ರಾಷ್ಟ್ರಮಟ್ಟದ ಸಮಕಾಲೀನ ಚಿತ್ರಕಲಾ ಶಿಬಿರಕ್ಕೆ ಮಂಗಳವಾರ ಅವರು ಚಾಲನೆ ನೀಡಿದರು. ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ  ವಹಿಸಿದ್ದರು. ಕರ್ನಾಟಕ ಲಲಿತ ಅಕಾಡೆಮಿಯ ಸದಸ್ಯ ರಾಜೇಂದ್ರ ಕೇದಿಗೆ, ಮಂಗಳೂರು ಕೆಎಂಸಿಯ ಪ್ರಾಧ್ಯಾಪಕ ಡಾ| ಸಿ.ಕೆ. ಬಲ್ಲಾಳ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ದೇಶದ ವಿವಿಧ ರಾಜ್ಯಗಳ ಸುಮಾರು 20 ಮಂದಿ ಹಿರಿಯ ಹಾಗೂ ಯುವ ಕಲಾವಿದರಿಗೆ ಕುಂಚ ಪರಿಕರ ಗಳನ್ನು ನೀಡುವ ಮೂಲಕ ಶಿಬಿರಕ್ಕೆ ಸ್ವಾಗತಿಸಲಾಯಿತು. ಶಿಬಿರ ಸಲಹಾ ಸಮಿತಿಯ ಸದಸ್ಯರಾದ ಕೋಟಿ ಪ್ರಸಾದ್‌ ಆಳ್ವ, ಗಣೇಶ್‌ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ಲಿಖೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next