Advertisement

ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿಗೆ ಸಮಗ್ರ ಪ್ರಶಸ್ತಿ

10:20 AM Apr 14, 2018 | Team Udayavani |

ಮೂಡಬಿದಿರೆ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಆಶ್ರಯದಲ್ಲಿ ಬೆಳಗಾವಿಯ ಅಂಗಡಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್ಮೆಂಟ್‌ನಲ್ಲಿ ಎ. 10ರಿಂದ 13ರವರೆಗೆ ನಡೆದ ಅಂತರ್‌ – ಕಾಲೇಜು ಸಾಂಸ್ಕೃತಿಕ ಉತ್ಸವದಲ್ಲಿ ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳ ತಂಡ ಮೂರನೇ ಬಾರಿಗೆ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ವಿಟಿಯು ವ್ಯಾಪ್ತಿಯ ಎಂಜಿನಿಯರಿಂಗ್‌ ಕಾಲೇಜುಗಳಿಗಾಗಿ ನಡೆದ ಈ ಉತ್ಸವದಲ್ಲಿ 150ಕ್ಕೂ ಅಧಿಕ ಕಾಲೇಜುಗಳು ಭಾಗವಹಿಸಿದ್ದವು. ಆಳ್ವಾಸ್‌ ಕಾಲೇಜು ಜನಪದ ನೃತ್ಯ-ಡೊಳ್ಳು ಕುಣಿತ, ಜೀವನ್‌ರಾಮ್‌ ಸುಳ್ಯ ನಿರ್ದೇ ಶನದ ಜನಪದ ವಾದ್ಯಮೇಳ, ಪ್ರಹಸನ ಮತ್ತು ಏಕಾಂಕ ನಾಟಕ ಪ್ರಥಮ, ಕೊಲಾಜ್‌ ಸ್ಪರ್ಧೆಯಲ್ಲಿ ಆಶ್ರಿತಾ ಪ್ರಥಮ ಹಾಗೂ ಇನ್‌ಸ್ಟಾಲೇಶನ್ಸ್‌ ವಿಭಾಗ (ಗುಂಪು ಸ್ಪರ್ಧೆ)ದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.

Advertisement

ಮಂಗಳೂರು ವಿ.ವಿ., ರಾಜೀವ್‌ ಗಾಂಧಿ ಆರೋಗ್ಯ ವಿ.ವಿ. ಸಾಂಸ್ಕೃತಿಕ ರಂಗದಲ್ಲಿ ಕಳೆದ 14 ವರ್ಷಗಳಿಂದ ಸಮಗ್ರ ಚಾಂಪಿಯನ್‌ಶಿಪ್‌ ಗಳಿಸುತ್ತ ಬಂದಿರುವ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯಲ್ಲಿ ಮೂರನೇ ಬಾರಿಗೆ ಸಮಗ್ರ ಪ್ರಶಸ್ತಿ ಗೆದ್ದಿದೆ. ವಿದ್ಯಾರ್ಥಿಗಳ ಸಾಧನೆಗೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮ್ಯಾನೇಜಿಂಗ್‌ ಟ್ರಸ್ಟಿ ವಿವೇಕ್‌ ಆಳ್ವ ಸಂತಸ ವ್ಯಕ್ತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next