Advertisement

ಫಲಿತಾಂಶದ ಗುಣಮಟ್ಟದಲ್ಲಿ ಗಮನಾರ್ಹ ಏರಿಕೆ: ಡಾ|ಆಳ್ವ

03:39 AM Jul 16, 2020 | Hari Prasad |

ಮೂಡುಬಿದಿರೆ: ಪಿಯುಸಿ ಪರೀಕ್ಷೆಗೆ ಹಾಜರಾದ ಆಳ್ವಾಸ್‌ ಪದವಿ ಪೂರ್ವ ಕಾಲೇಜಿನ 2,779 ವಿದ್ಯಾರ್ಥಿಗಳ ಪೈಕಿ 2,753 ಮಂದಿ ಉತ್ತೀರ್ಣರಾಗಿ ಶೇ. 99.06 ಫಲಿತಾಂಶ ಬಂದಿದೆ. ರಾಜ್ಯದ ಟಾಪ್‌10ರಲ್ಲಿ ಆಳ್ವಾಸ್‌ನ 24 ಮಂದಿ ಇದ್ದಾರೆ ಎಂದು ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ನ ಅಧ್ಯಕ್ಷ ಡಾ| ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ವಿಜ್ಞಾನ ವಿಭಾಗದ 2,229 ಮಂದಿಯ ಪೈಕಿ 2,209 (ಶೇ. 99.10), ವಾಣಿಜ್ಯ ವಿಭಾಗದ 502 ಮಂದಿಯ ಪೈಕಿ 496 (ಶೇ. 98.80) ಹಾಗೂ ಕಲಾ ವಿಭಾಗದ ಎಲ್ಲ 48 ಮಂದಿ (ಶೇ. 100) ಉತ್ತೀರ್ಣರಾಗಿದ್ದಾರೆ.

1,767 ಡಿಸ್ಟಿಂಕ್ಷನ್‌, 2,658 ಪ್ರಥಮ, 74 ದ್ವಿತೀಯ, 21 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅನರ್ಘ್ಯಾ ಕೆ. (ಬೆಳ್ತಂಗಡಿ), ರಘುವೀರ ಮಠದ್‌ (ಧಾರವಾಡ), ಲಿಶಾನ್‌ ಎ.ಎ. (ಕೊಡಗು) ಅವರು ವಿಜ್ಞಾನ ವಿಭಾಗದಲ್ಲಿ 592 ಅಂಕ ಗಳಿಸಿ ದ.ಕ. ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕಾಮರ್ಸ್‌ನಲ್ಲಿ ಹರ್ಷ ಜೆ. ಆಚಾರ್ಯ 593 ಅಂಕ ಗಳಿಸಿ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಒಟ್ಟು 747 ಪೇಪರ್‌ಗಳಲ್ಲಿ 100 ಅಂಕಗಳು ಬಂದಿವೆ. (ಕನ್ನಡ 5, ಹಿಂದಿ 1, ಸಂಸ್ಕೃತ 16, ಫಿಸಿಕ್ಸ್‌ 21, ಕೆಮಿಸ್ಟ್ರಿ 15, ಮ್ಯಾಥಮ್ಯಾಟಿಕ್ಸ್‌ 298, ಬಯೋಲಜಿ 55, ಕಂಪ್ಯೂಟರ್‌ ಸೈನ್ಸ್‌ 46, ಸ್ಟಾಟಿಸ್ಟಿಕ್ಸ್‌ 75, ಇಕಾನಾಮಿಕ್ಸ್‌ 22, ಬಿಸಿನೆಸ್‌ ಸ್ಟಡೀಸ್‌ 45, ಅಕೌಂಟೆನ್ಸಿ 94 ಹಾಗೂ ಬೇಸಿಕ್‌ ಮ್ಯಾಥ್ಸ್ 54).

ಗುಣಮಟ್ಟದಲ್ಲಿ ಗಮನಾರ್ಹ ಏರಿಕೆ
ಫಲಿತಾಂಶದ ಗುಣಮಟ್ಟದಲ್ಲಿ ಗಮನಾರ್ಹ ಏರಿಕೆಯಾಗಿದ್ದು 747ರಷ್ಟು ಪೇಪರ್‌ಗಳಲ್ಲಿ 100 ಅಂಕಗಳು ಪ್ರಾಪ್ತವಾಗಿವೆ. ವಿದ್ಯಾರ್ಥಿಗಳು ಎಸೆಸೆಲ್ಸಿಯಲ್ಲಿ ಪಡೆದ ಅಂಕಗಳಿಗಿಂತ ಪಿಯುಸಿಯಲ್ಲಿ ಶೇ. 10ರಿಂದ 20ರ ವರೆಗೆ ಹೆಚ್ಚಿನ ಅಂಕ ಪಡೆದಿದ್ದಾರೆ ಎಂಬುದು ನಿಜಕ್ಕೂ ಖುಷಿ ತಂದ ವಿಚಾರ’ ಎಂದು ಡಾ| ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದರು.

ಪ್ರಾಚಾರ್ಯ ರಮೇಶ ಶೆಟ್ಟಿ, ಕಾಮರ್ ಡೀನ್‌ ಪ್ರಶಾಂತ್‌ ಎಂ.ಡಿ., ಆರ್ಟ್ಸ್ ಡೀನ್‌ ವೇಣುಗೋಪಾಲ ಶೆಟ್ಟಿ, ಪಿಆರ್‌ಒ ಡಾ| ಪದ್ಮನಾಭ ಶೆಣೈ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next