Advertisement

‘ನೀಟ್‌’: ಆಳ್ವಾಸ್‌ ಪ.ಪೂ. ಕಾಲೇಜಿಗೆ ಶೇ. 93.70 ಫ‌ಲಿತಾಂಶ 

03:15 AM Jul 04, 2017 | Team Udayavani |

ಮೂಡಬಿದಿರೆ: ರಾಷ್ಟ್ರ ಮಟ್ಟದಲ್ಲಿ ನಡೆದ ‘ನೀಟ್‌’ ಪರೀಕ್ಷೆಗೆ ಹಾಜರಾದ ಆಳ್ವಾಸ್‌ ಪದವಿಪೂರ್ವ ಕಾಲೇಜಿನ 3,241 ವಿದ್ಯಾರ್ಥಿಗಳ ಪೈಕಿ 3,037 ಮಂದಿ ತೇರ್ಗಡೆಯಾಗಿ ಶೇ. 93.70 ಫಲಿತಾಂಶ ಲಭಿಸಿದೆ. ರಾಜ್ಯ ಮಟ್ಟದ ವೈದ್ಯಕೀಯ, ದಂತ ವೈದ್ಯಕೀಯ ಪ್ರವೇಶಾತಿ ಸೀಟು ಹಂಚಿಕೆಯಲ್ಲಿ ಸಾಮಾನ್ಯ ವರ್ಗ, ಎಸ್‌ಸಿ, ಎಸ್‌ಟಿ, ಒಬಿಸಿ, ಹೈದರಾಬಾದ್‌ ಕರ್ನಾಟಕ ಹಾಗೂ ಕನ್ನಡ ಮಾಧ್ಯಮ ಈ ಕೋಟಾಗಳಡಿ ಆಳ್ವಾಸ್‌ನ 500 ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವುದು ಬಹುತೇಕ ಖಚಿತವಾಗಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

‘ನೀಟ್‌’ ರಾಜ್ಯ ರ್ಯಾಕಿಂಗ್‌ ಪಟ್ಟಿಯಲ್ಲಿ 100ರ ರ್‍ಯಾಂಕ್‌ ಒಳಗಡೆ ಆಳ್ವಾಸ್‌ನ ನಾಲ್ವರು, 200 ರ್‍ಯಾಂಕ್‌ ಒಳಗಡೆ 12, 300 ರ್‍ಯಾಂಕ್‌ ಒಳಗಡೆ 24, 400 ಒಳಗಡೆ 31, 500 ಒಳಗಡೆ 36, 1000 ರ್‍ಯಾಂಕ್‌ ಒಳಗಡೆ 64 ಮಂದಿ, 2000 ರ್‍ಯಾಂಕ್‌ ಒಳಗಡೆ 157, 3000 ಒಳಗಡೆ 253, 4000 ರ್‍ಯಾಂಕ್‌ ಒಳಗಡೆ 345, 5000 ಒಳಗಡೆ 420 ಹಾಗೂ 10,000 ಒಳಗಡೆ 750 ಮಂದಿ ವಿದ್ಯಾರ್ಥಿಗಳು ರ್‍ಯಾಂಕ್‌ ಗಳಿಸಿದ್ದಾರೆ.


500ರ ಒಳಗಿನ ರ್‍ಯಾಂಕ್‌ ಗಳಿಸಿದವರು

1. ಶ್ರೀನಾಥ್‌ ರಾವ್‌ (39ನೇ ರ್‍ಯಾಂಕ್‌), 2. ಭರತ್‌ ಕುಮಾರ್‌ (63), 3. ನಕುಲ್‌ ಎನ್‌. ರಾವ್‌ (80), 4. ವಿಕಾಸ್‌ ಜಿ.ಎಸ್‌. (90), 5. ಸೌಮ್ಯಾ ಶಶಿಧರ್‌ ಕಟ್ಟೀಮನಿ (117), 6. ನೇಸರ (161), 7. ನಿತಿನ್‌ ಟಿ.ಕೆ. (171), 8. ನಿಹಾಕೌಸರ್‌ ಅಬ್ದುಲ್‌ ರಶೀದ್‌ (181), 9. ಗೋಕುಲ್‌ ರೆಡ್ಡಿ (186), 10. ಅನಸೂಯ (192), 11. ವೈಭವ್‌ ಎನ್‌. ಹೆಬ್ಟಾಳ್‌ (197), 12. ಸಂದೀಪ್‌ ಪೂಜಾರ್‌ (207), 13. ವಿನಯ್‌ ಜಿ.ಕೆ. (208), 14. ನವೀನ್‌ ಕುಮಾರ್‌ ಎಂ. ಕಡಕೊಲ್‌ (221), 15. ರೋಹಿತ್‌ ಸಿ. (228), 16. ಹರ್ಷಾ ಟಿ.ಎಸ್‌. (232), 17. ಅಭಿಷೇಕ್‌ ಈರಯ್ಯ (239), 18. ಸಚಿನ್‌ ಬಾಳಿಕಾಯಿ (243), 19. ಮದನ್‌ ಟಿ.ಎನ್‌. (278), 20. ನಿಹಾರಿಕಾ ಎಚ್‌.ಆರ್‌. (282), 21. ಉಮೇಶ್‌ ಎನ್‌. ಪಟ್ಟದ್‌ (285), 22. ಸಂಕೇತ್‌ ಡಿ.ಎ. (292), 23. ದ್ರುವಿಕಾ ಎಂ.ಆರ್‌. (297), 24. ಶ್ರವಣ್‌ ವೈ.ಆರ್‌. (302), 25. ಆಕಾಶ್‌ ಈಶ್ವರ್‌ ಮಟ್ಟಿ (315), 26. ಪ್ರಜ್ವಲ್‌ ಗೌಡ ಎಚ್‌.ಎಸ್‌. (341), 27. ಶ್ರೇಯಸ್‌ ಜೆ. (351), 28. ಶಶಾಂಕ್‌ ಯು. (365), 29. ದಿವ್ಯಾ ವಿ. (376), 30. ರಘುವೀರ್‌ ನಾಯಕ್‌ (380), 31. ಸಂಪದಾ ಕನಿ (398), 32. ಸಂಜಯ್‌ ಬಿ. (404), 33. ಕಾರ್ತಿಕ್‌ ಸ್ವಾಮಿ ಬಿ.ಆರ್‌. (411), 34. ಶತಕ್‌ ಎಂ.ಪಿ. (467), 35. ಮೇಘನಾ ಆರ್‌. (480), 36. ಶಿವಕುಮಾರ್‌ ವಿ.ಕೆ. (495). ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್‌ ಪಿಆರ್‌ಒ ಡಾ| ಪದ್ಮನಾಭ ಶೆಣೈ, “ನೀಟ್‌’ ಸಂಯೋಜಕ ಕೇಶವ ಮೂರ್ತಿ ಎಸ್‌.ಜಿ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next