Advertisement

ಬಾರಕೂರು: ನಾಳೆಯಿಂದ ಆಳುಪೋತ್ಸವ, ಕಾರ್ಯಕ್ರಮ ವೈವಿಧ್ಯ

12:50 AM Jan 24, 2019 | Team Udayavani |

ಬ್ರಹ್ಮಾವರ: ಜಿಲ್ಲಾಡಳಿತ, ಪ್ರವಾ ಸೋದ್ಯಮ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಆಳುಪೋತ್ಸವ-2019 

Advertisement

ಜ. 25ರಿಂದ 27ರ ವರೆಗೆ ಬಾರಕೂರು ಕೋಟೆಯಲ್ಲಿ ಜರಗಲಿದೆ. 

ಜ. 25ರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಕಾರ್ಯಕ್ರಮವನ್ನು ಉದ್ಘಾಟಿ ಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್‌, ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್‌, ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಗಣ್ಯರು ಉಪಸ್ಥಿತರಿರುವರು.

ಶೋಭಾಯಾತ್ರೆ, ಹೆರಿಟೇಜ್‌ ವಾಕ್‌
ಜ. 25ರ ಸಂಜೆ 4.30ಕ್ಕೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧ್ವಜ ಪೂಜೆಯೊಂದಿಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದೆ. 

ಸಿಂಹಾಸನ ಗುಡ್ಡೆಯಲ್ಲಿ ಹೆರಿಟೇಜ್‌ ವಾಕ್‌ ಉದ್ಘಾಟನೆ ಹಾಗೂ ಹೆರಿಟೇಜ್‌ ವಾಕ್‌ ಆ್ಯಂಡ್ರಾಯಿಡ್‌ ಆ್ಯಪ್‌ ಬಿಡುಗಡೆಗೊಳ್ಳಲಿದೆ. ಸಂಜೆ 5.30ಕ್ಕೆ ಫಲ, ಪುಷ್ಪ ಪ್ರದರ್ಶನ ಉದ್ಘಾಟನೆ, ಸಭಾ ಕಾರ್ಯಕ್ರಮ ಕೋಟೆಯ ಮುಖ್ಯ ವೇದಿಕೆಯಲ್ಲಿ ನಡೆಯಲಿದೆ.

Advertisement

ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಮಂಜುಳಾ ಪರಮೇಶ್‌ ಅವರಿಂದ ನೃತ್ಯ-ವೈವಿಧ್ಯ, ಚಿಂತನ್‌ ವಿಕಾಸ್‌ ಮತ್ತು ರಾಮ್‌ ಅಗ್ನಿ ತಂಡದವರಿಂದ ವರ್ಲ್ಡ್ ಮ್ಯೂಸಿಕ್‌, ಕೋಟೆಯ ಉಪ ವೇದಿಕೆಯಲ್ಲಿ ಸಂಜೆ 6ರಿಂದ ಗಣೇಶ್‌ ಯಕ್ಷಗಾನ ಗೊಂಬೆಯಾಟ ಮಂಡಳಿಯಿಂದ ಚೂಡಾಮಣಿ ಲಂಕಾದಹನ, ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯಿಂದ ಸುಧನ್ವ ಮೋಕ್ಷ ಯಕ್ಷಗಾನ ನಡೆಯಲಿದೆ.

ಬಸದಿಯಲ್ಲಿ ಕಾರ್ಯಕ್ರಮ
ಜ.26ರ ಸಂಜೆ 5.30ರಿಂದ ಕತ್ತಲೆ ಬಸದಿಯಲ್ಲಿ ದೀಪಾಲಂಕಾರ ಹಾಗೂ ತುಳುನಾಡಿನ ಸೊಗಡು ಕಾರ್ಯಕ್ರಮ, ಸಂಜೆ 5.30ರಿಂದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉಡುಪಿಯ ದನಿ ವೇವ್ಸ್‌ ಅವರಿಂದ ಮಧುರ ಸಂಜೆ, ರಾತ್ರಿ 7ರಿಂದ ನಾಡಿನ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಜಾನಪದ ಜಾತ್ರೆ, ರಾತ್ರಿ 10ರಿಂದ ಉಪ ವೇದಿಕೆಯಲ್ಲಿ ಪೆರ್ಡೂರು ಮತ್ತು ಹಾಲಾಡಿ ಮೇಳಗಳಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ವಿಚಾರ ಸಂಕಿರಣ
ಜ. 27ರ ಬೆಳಗ್ಗೆ 10ರಿಂದ ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಳುಪರ ಕುರಿತು ವಿಚಾರ ಸಂಕಿರಣ ನಡೆಯಲಿದೆ ಸಂಜೆ 4.30ರಿಂದ ಯಕ್ಷಗಾನದ ಧೀಮಂತ ಕಲಾವಿದರ ಕೊಡುವಿಕೆಯಿಂದ ಮಹಾದೈವ ಮಹಿಸಂದಾಯ ಕಥಾನಕವನ್ನು ಬಾಕೂìರು ಸಂಸ್ಥಾನದಲ್ಲಿ ಆಯೋಜಿಸಲಾಗಿದೆ. ಸಂಜೆ 6ರಿಂದ ಶ್ರೀ ಸೋಮೇಶ್ವರ ಸ್ವಾಮಿಯ ಪುರಮೆರವಣಿಗೆ ಅನಂತರ ಮೂಡುಕೇರಿ ಪುಷ್ಕರಣಿಯಲ್ಲಿ  ಮನಮೋಹಕ ಗಂಗಾ ಆರತಿ ನಡೆಯಲಿದೆ.

ಮುಖ್ಯ ವೇದಿಕೆಯಲ್ಲಿ
ಸಂಜೆ 5.30ರಿಂದ ಮುಖ್ಯ ವೇದಿಕೆಯಲ್ಲಿ ಸರ್ವ ಮಹಿಳಾ ಸಂಗೀತ ತಂಡದವರಿಂದ ಘಲ್‌-ಝಲ್‌, ರಾತ್ರಿ 6.30ರಿಂದ ಕೊರಗರ ಸಂಗೀತ ನಾವಿನ್ಯ, ರಾತ್ರಿ 8ರಿಂದ ಸಮಾರೋಪ ಸಮಾರಂಭ, 8.30ರಿಂದ ಆಳುಪ-ಬಾಕೂìರು ಗತ ವೈಭವದ ನೃತ್ಯ ರೂಪಕ ನಡೆಯಲಿದೆ.

ಉಪ ವೇದಿಕೆಯಲ್ಲಿ
ಸಂಜೆ 6ರಿಂದ ಉಪ ವೇದಿಕೆಯಲ್ಲಿ ರಾಘವೇಂದ್ರ ಜನ್ಸಾಲೆ ತಂಡದಿಂದ ಯಕ್ಷ-ಗಾನ-ವೈಭವ ಜುಗಲ್‌ಬಂದಿ, ರಾತ್ರಿ 8ರಿಂದ ಕಾಳಿಂಗ ರಾವ್‌ ಪ್ರತಿಷ್ಠಾನದವರಿಂದ ಭಾವ ಬೆಳದಿಂಗಳ ಗೀತಾ ಗಾಯನ ನಡೆಯಲಿದೆ.

ಇತರ ಕಾರ್ಯಕ್ರಮಗಳು
ಜ. 25, 26 ಮತ್ತು 27ರಂದು ರಾಘವೇಂದ್ರ ಕೆ. ಅಮೀನ್‌ ಅವರಿಂದ ಬಾಕೂìರು ಸಂಸ್ಥಾನದ ಒಳಾಂಗಣದಲ್ಲಿ ಚಿತ್ರಕಲಾ ಪ್ರದರ್ಶನ, ಹೆರಿಟೇಜ್‌ ವಾಕ್‌ ಉಡುಪಿ ಟೂರಿಸಂ ಅಫೀಶಿಯಲ್‌ ಆ್ಯಪ್‌ ಡೌನ್‌ ಲೋಡ್‌ ಮಾಡಿ ಬಾಕೂìರಿನ ಪ್ರಸಿದ್ಧ 17 ದೇವಸ್ಥಾನಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ.

ಆಕರ್ಷಣೆಗಳು
– ಬಾಕೂìರಿನ 40 ದೇವಸ್ಥಾನಗಳಲ್ಲಿ  ಆಡಳಿತ ಮಂಡಳಿಯಿಂದ ವಿಶೇಷ ಅಲಂಕಾರ ಮತ್ತು ಪೂಜೆ
– ಬಾಕೂìರು ನಗರಾಲಂಕಾರ ಸ್ಪರ್ಧೆ ಹಾಗೂ ಮನೆಗಳ ಸಾಂಪ್ರದಾಯಿಕ ಅಲಂಕಾರಕ್ಕೆ ಪ್ರಥಮ ಮತ್ತು ದ್ವಿತೀಯ

ಬಹುಮಾನ
– ಭೂತಾಳಪಾಂಡ್ಯ ವೇದಿಕೆ ಹಾಗೂ ನಂದರಾಯನ ಕೋಟೆ ಮಹಾದ್ವಾರ 
– ರಾಜ-ರಾಣಿ ಕಲ್ಯಾಣಿ, ಕುದುರೆ ಲಾಯ, ಮಾಸ್ತಿಕಲ್ಲು  ಹಾಗೂ ವೀರಗಲ್ಲುಗಳ ದೀಪಾಲಂಕಾರ
– ಕತ್ತಲೆ ಬಸದಿಯಲ್ಲಿ ವಿಶೇಷ ದೀಪಾಲಂಕಾರ
– ಉಡುಪಿ ತೋಟಗಾರಿಕೆ ಇಲಾಖೆಯಿಂದ ಫಲ ಪುಷ್ಪ ಪ್ರದರ್ಶನ
–  ಕೃಷಿ ಇಲಾಖೆಯಿಂದ ಸಾವಯವ ಹಾಗೂ ಸಿರಿಧಾನ್ಯ ಮೇಳ.

Advertisement

Udayavani is now on Telegram. Click here to join our channel and stay updated with the latest news.

Next