Advertisement

ಬಾರ್ಕೂರು: ಸಂಭ್ರಮದ ಆಳುಪೋತ್ಸವ‌ಕ್ಕೆ  ಕ್ಷಣಗಣನೆ…

12:50 AM Jan 25, 2019 | Harsha Rao |

ಬ್ರಹ್ಮಾವರ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ  ವತಿಯಿಂದ ಜ. 25ರಿಂದ 27ರ ವರೆಗೆ ನಡೆಯುವ ಆಳುಪೋತ್ಸವಕ್ಕೆ ಬಾರ್ಕೂರಿನ ಕೋಟೆ ಸಜ್ಜುಗೊಂಡಿದೆ.

Advertisement

ಇತ್ತೀಚಿನವರೆಗೆ ಗಿಡಗಂಟಿಗಳಿಂದ ಕೂಡಿದ್ದ ಕೋಟೆಯ 14.12 ಎಕ್ರೆ ಜಾಗ ವನ್ನು ಸುಮಾರು 20 ದಿನಗಳಿಂದ ಸ್ವತ್ಛ ಗೊಳಿಸಲಾಗಿದೆ. ತೆರೆಮರೆಯಲ್ಲಿದ್ದ ಕೋಟೆ ಸಾರ್ವಜನಿಕರಿಗಾಗಿ ತೆರೆದುಕೊಳ್ಳುತ್ತಿದೆ.  ಕೋಟೆಯ ಕಲ್ಯಾಣಿಯಲ್ಲಿ ತುಂಬಿದ್ದ ಹೂಳು ಸ್ವತ್ಛಗೊಳಿಸಿದ್ದು, ನೀರು ಬರಲಾರಂಭಿಸಿದೆ. ನಂದರಾಯನ ಕೋಟೆಯ ಅರಮನೆಯ ಭಾಗ ಸ್ವತ್ಛಗೊಳಿಸಲಾಗಿದೆ. 

ಬೃಹತ್‌ ವೇದಿಕೆ 
ಭೂತಾಳ ಪಾಂಡ್ಯ ವೇದಿಕೆ  ಆಳುಪೋತ್ಸವದ ಮುಖ್ಯ ವೇದಿಕೆಯಾಗಿದೆ. 36 ಅಡಿ ಎತ್ತರದ 80×60 ಅಳತೆಯ ವಿಶಾಲ ವೇದಿಕೆಯನ್ನು ಸುಮಾರು 40 ಮಂದಿ ಕಾರ್ಮಿಕರು ನಿರ್ಮಿಸಿದ್ದಾರೆ. ವೇದಿಕೆ ಅಲಂಕಾರಕ್ಕಾಗಿ ಜಂಬೂ ಸವಾರಿ ಮಾದರಿಯ ಪ್ರತಿಮೆ ಹಾಗೂ ಇನ್ನಿತರ ಪ್ರತಿಮೆಗಳು ಸಿದ್ಧಗೊಂಡಿವೆೆ.  ಕೋಟೆಯ ಮಹಾದ್ವಾರ ಕೂಡ ಸಿದ್ಧಗೊಳುತ್ತಿದ್ದು, ಎಲ್ಲೆಡೆ ಆಕರ್ಷಕ ವಿದ್ಯುತ್‌ ಅಲಂಕಾರವನ್ನೂ ಮಾಡಲಾಗಿದೆ.  

ವಸ್ತು ಪ್ರದರ್ಶನ
ಬಾಕೂìರು ಸಂಸ್ಥಾನದಲ್ಲಿ ಆಳುಪರ ಕಾಲದ ಅನಂತರದ  ಬೀಡಿನ ಮನೆ, ಗುತ್ತುಮನೆಯಲ್ಲಿ ಇದ್ದಂತಹ ತುಳು ಸಂಸ್ಕೃತಿಯ ಕೃಷಿ ಮತ್ತು ಸಾಮಾಜಿಕ ಜೀವನದಲ್ಲಿ ಬಳಸುತ್ತಿದ್ದ ವಸ್ತುಗಳ ಪ್ರದರ್ಶನ ಸಹ ನಡೆಯಲಿದೆ. ಕೋಟೆ ಯಲ್ಲಿ ಕುದುರೆ ಲಾಯ, ಮಾಸ್ತಿಕಲ್ಲು ಹಾಗೂ ವೀರಗಲ್ಲುಗಳಿಗೆ ದೀಪಾಲಂಕಾರ ಮಾಡಲಾಗಿದೆ. 

ಜಾನಪದ ಜಾತ್ರೆ
ಉತ್ಸವದಲ್ಲಿ ರಾಜ್ಯದ ವಿವಿಧ ಜಾನಪದ ತಂಡಗಳಿಂದ ಮೆರವಣಿಗೆ ಹಾಗೂ ಜಾನಪದ ಜಾತ್ರೆ, ತೋಟಗಾರಿಕೆ ಇಲಾಖೆಯಿಂದ ಫ‌ಲಪುಷ್ಪ ಪ್ರದರ್ಶನ, ವಿಧ ಕರಕುಶಲ ವಸ್ತುಗಳ ಮಳಿಗೆ, ಸ್ಥಳೀಯ ಖಾದ್ಯಗಳ ಆಹಾರ ಮಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಯಕ್ಷಗಾನ ಹಾಗೂ ಬಾಕೂìರು ಗತವೈಭವ ನƒತ್ಯ ರೂಪಕ, ಕೊರಗರ ನಾವೀನ್ಯ, ಆಳುಪೋತ್ಸವ ವಿಶೇಷ ಅಂಚೆ ಲಕೋಟೆ ಬಿಡುಗಡೆ, ಕತ್ತಲೆ ಬಸದಿಯಲ್ಲಿ ದೀಪೋತ್ಸವ, ಭಂಡಾರ್‌ಕರ್‌ ಕಂಪೌಂಡ್‌ನ‌ಲ್ಲಿ ಪ್ರಾಚೀನ ವಸ್ತುಗಳ ಪ್ರದರ್ಶನ ನಡೆಯಲಿದೆ.

Advertisement

ತುಳು ಸಂಸ್ಕೃತಿ ಅನಾವರಣ, ಬಾಕೂìರಿನ ವಿವಿಧ ದೇವಾಲಯಗಳಲ್ಲಿ ಸ್ಥಳೀಯ ಸಮಿತಿಗಳಿಂದ ಅಲಂಕಾರ ಹಾಗೂ ನಗರಾಲಂಕಾರ ಸ್ಪರ್ಧೆ,  ಆಳುಪರ ಕುರಿತ ವಿಚಾರ ಸಂಕಿರಣ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸರಕಾರದ ಸಾಧನೆ ಸಾರುವ ವಸ್ತು ಪ್ರದರ್ಶನ ಕಾರ್ಯಕ್ರಮ ಸಹ ನಡೆಯಲಿದೆ.

ಕೋಟೆ ಮಾಹಿತಿ
ಕೋಟೆಯಲ್ಲಿ ಆಳ್ವಿಕೆ ಮಾಡುತ್ತಿದ್ದ ರಾಜ್ಯಪಾಲರ ಕುದುರೆ ಮತ್ತು ಆನೆಯನ್ನು ಕಟ್ಟಿ ಹಾಕುತ್ತಿದ್ದ ಲಾಯದ ಕುರುಹುಗಳನ್ನು ಕಾಣಬಹುದು. ವಿಜಯನಗರ ಸಾಮ್ರಾಜ್ಯಕ್ಕೆ ಅವಶ್ಯವಿದ್ದ ಕುದುರೆಗಳನ್ನು ಪರ್ಶಿಯಾದಿಂದ ಬಾಕೂìರಿನ ಈ  ಕೋಟೆಗೆ ತರಲಾಗುತ್ತಿತ್ತು.  ಕೋಟೆಯಲ್ಲಿ ಒಂದು ಅರಮನೆ ಇದ್ದು, ಪ್ರಸ್ತುತ ಈ ಅರಮನೆಯ ಅಡಿಪಾಯ ಮಾತ್ರ ಗೋಚರಿಸುತ್ತಿದೆ. ಕೋಟೆ ಸ್ವತ್ಛಗೊಳಿಸಿದ ಬಳಿಕ ಇದರ ಕುರುಹು ಕಂಡಿದೆ.  

ಕೋಟೆಯ ಕುರುಹು 
ಕೋಟೆಯ ಭದ್ರತೆಯ ದೃಷ್ಟಿಯಿಂದ ಕೋಟೆಯ ಸುತ್ತಲೂ  ಕಂದಕವನ್ನು  ನಿರ್ಮಿಸಿ ಅದಕ್ಕೆ ನೀರು ತುಂಬಿಸಿ ಮೊಸಳೆಗಳನ್ನು ಬಿಡಲಾಗುತ್ತಿತ್ತು. ಇದು ಕೋಟೆಯನ್ನು ಇತರರ ಆಕ್ರಮಣದಿಂದ ಕಾಪಾಡುವ ಸಲುವಾಗಿ ನಿರ್ಮಿಸಲಾಗಿತ್ತು. ಇದರ ಜತೆಗೆ ಕೋಟೆಯಲ್ಲಿ  ಸಣ್ಣ  ಸಣ್ಣ ಕಲ್ಲಿನ ಅವಶೇಷಗಳನ್ನೂ ಕಾಣಬಹುದು. ಕೋಟೆಯ ಹೊರ ಭಾಗದಲ್ಲಿ ಭೈರವನ ಮೂರ್ತಿಯನ್ನು ಕಾಣಬಹುದು. ಇದುವರೆಗೆ ಕೋಟೆಯ ಒಟ್ಟು ವಿಸ್ತೀರ್ಣದ ಶೇ.10 ರಷ್ಟು ಮಾತ್ರ ಉತVನನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next