ನವದೆಹಲಿ: ದೇಶದ ಪ್ರತಿಷ್ಠಿತ ಕಾರು ತಯಾರಿಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾದ ಆಲ್ಟೋ ಬ್ರ್ಯಾಂಡ್ ಆರಂಭ ದಿನದಿಂದ ಇಂದಿಗೆ (ನ.26) 38 ಲಕ್ಷಕ್ಕೂ ಅಧಿಕ ಭಾರತೀಯ ಕುಟುಂಬಗಳನ್ನು ಹೊಂದುವ ಮೂಲಕ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ದಾಖಲೆ ನಿರ್ಮಿಸಿದೆ.
ಆಲ್ಟೋ ಸಾಧನೆ ಕುರಿತು ಮಾತನಾಡಿ ಸಂಸ್ಥೆಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ, ಸತತ 15 ವರ್ಷಗಳಿಂದ ಸಾಟಿಯಿಲ್ಲದ ಕಾರ್ಯಕ್ಷಮತೆಯಿಂದ ಆಲ್ಟೋ ಭಾರತದಲ್ಲಿ ಹೆಚ್ಚು ಮಾರಾಟ ವಾದ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ನಮ್ಮ ಸಂಸ್ಥೆಯಲ್ಲಿ ಪ್ರಮುಖವಾಗಿ ಗ್ರಾಹಕರ ಸಲಹೆಗಳಿಗೆ ಮಾನ್ಯತೆ ನೀಡಲಾಗುತ್ತದೆ.
ಅವರ ಬೇಡಿಕೆಗನುಣವಾಗಿ ತಂತ್ರಜ್ಞಾನ ಹಾಗೂ ಸೌಲಭ್ಯಗಳನ್ನು ಅಳವಡಿಸಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆಲ್ಟೋ ಗ್ರಾಹಕರಲ್ಲಿ ಶೇ.54 ರಷ್ಟು ಮಂದಿ ಮೊದಲ ಬಾರಿಗೆ ಕಾರು ಕೊಳ್ಳುವವರಾಗಿದ್ದು, ಅವರ ಆರ್ಥಿಕ ಸ್ಥಿತಿಗೆ ತಕ್ಕಂಕೆ ಕಾಂಪ್ಯಾಕ್ಟ್ ವಿನ್ಯಾಸ, ಸುಲಭ ಕುಶಲತೆ, ಹೆಚ್ಚಿನ ಮೈಲೇಜ್, ನವೀಕರಿಸಿದ ಸುರಕ್ಷತಾ ವ್ಯವಸ್ಥೆ ಮುಂತಾದ ಅಂಶಗಳಿಂದ ರೂಪಿಸಲಾಗಿದೆ.
ಖರೀದಿದಾರರಿಗೆ ಆಲ್ಟೋ ಆದ್ಯತೆಯಾಗಿರುವುದರಿಂದ 38 ಲಕ್ಷ ಆಲ್ಟೋ ಕುಟುಂಬಕ್ಕೆ ಅತ್ಯುತ್ತಮ ಉತ್ಪನ್ನಗಳನ್ನು ಒದಗಿಸಿರುವುದಕ್ಕೆ ಇದು ಸಾಕ್ಷಿಯಾಗಿದೆ. ಆಲ್ಟೋ ಬ್ರ್ಯಾಂಡಿನ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆ ಮತ್ತು ಕಳೆದ ಒಂದೂವರೆ ದಶಕದಿಂದ ಸತತ ಮಾರಾಟವಾದ ಕಾರು ಎಂಬ ಕೀರ್ತಿ ತಂದುಕೊಟ್ಟಿದ್ದಕ್ಕೆ ಮೊದಲು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಭಾರತದ ಮೊದಲ ಬಿಎಸ್6: ಹೊಸ ಆಲ್ಟೋ ದೇಶದ ಮೊದಲ ಬಿಎಸ್6 ಕಂಪ್ಲೈಂಟ್ ಎಂಟ್ರಿ ಸೆಗ್ಮೆಂಟ್ ಕಾರು ಹಾಗೂ ಪ್ರತಿ ಲೀಟರ್ ಪೆಟ್ರೋಲ್‌ಗೆ 22.05 ಕಿ.ಮೀ. ಮೈಲೇಜ್ ನೀಡುವ ಇಂಧನ ದಕ್ಷತೆಯನ್ನೂ ಹೊಂದಿದೆ. ಕ್ರಿಯಾತ್ಮಕ ಏರೋ ಎಡ್ಜ್ ವಿನ್ಯಾಸ ಹಾಗೂ ಸುರಕ್ಷತಾ ವೈಶಿಷ್ಟಗಳೊಂದಿಗೆ ಗ್ರಾಹಕರಿಗೆ ಗೌರವ ತಂದುಕೊಡುವ ಅನುಭವ ನೀಡಲಿದೆ.
ಡ್ರೈವರ್ ಏರ್‌ಬ್ಯಾಗ್‌ನೊಂದಿಗೆ ಪ್ಯಾಸೆಂಜರ್ ಏರ್‌ಬ್ಯಾಗ್ ಅನ್ನು ಹೊಂದಿರುವ ಈ ಕಾರಿನಲ್ಲಿ ಎಬಿಎಸ್, ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀ³ಡ್ ಅಲರ್ಟ್ ಸಿಸ್ಟಂ, ಸೀಟ್ ಬೆಲ್ಟ್ ರಿಮೈಂಡರ್, ಸುಧಾರಿತ ಬಾಹ್ಯ ವಿನ್ಯಾಸ, ಸುಂದರ ಒಳಾಂಗಣ ಹಾಗೂ ಉತ್ತಮ ಪವರ್‌ಟ್ರೇನ್ ಒಳಗೊಂಡಿದೆ. ಸಿಎನ್‌ಜಿ ಇಂಧನ ರೂಪಾಂತರಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.