Advertisement

ಲಾಕ್‌ಡೌನ್‌ ನಡುವೆ ಪರ್ಯಾಯ ವ್ಯಾಪಾರ!

04:28 PM Jun 14, 2021 | Team Udayavani |

ವರದಿ: ಶಶಿಧರ್‌ ಬುದ್ನಿ

Advertisement

ಧಾರವಾಡ: ಹೊಸ ಮೊಬೈಲ್‌, ಲ್ಯಾಪ್‌ಟಾಪ್‌ ಬೇಕೆ? ಅಥವಾ ರಿಪೇರಿ ಆಗಬೇಕೆ? ಇಲೆಕ್ಟ್ರಾನಿಕ್‌ ವಸ್ತುಗಳು ಬೇಕೆ? ಸೀರೆ, ಬಟ್ಟೆ ಬೇಕೆ? ಬಂಗಾರ ಆಭರಣ ಕೊಳ್ಳಬೇಕೆ? ನಮ್ಮನ್ನು ಸಂಪರ್ಕಿಸಿ ನಿಮಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ!

ಕೋವಿಡ್‌ 2ನೇ ಅಲೆಯ ನಿಯಂತ್ರಣಕ್ಕೆ ಒಂದುವರೆ ತಿಂಗಳಿಂದ ಜಾರಿ ಮಾಡಿರುವ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಮೊಬೈಲ್‌, ಇಲೆಕ್ಟ್ರಾನಿಕ್‌, ಬಟ್ಟೆ ಹಾಗೂ ಇತರ ಅಂಗಡಿಗಳ ವರ್ತಕರು ವ್ಯಾಪಾರಕ್ಕಾಗಿ ಕಂಡುಕೊಂಡ ಪರ್ಯಾಯ ಮಾರ್ಗವಿದು. ಲಾಕ್‌ಡೌನ್‌ ಕಾರಣ ಜಿಲ್ಲಾದ್ಯಂತ ಇರುವ ಚಿನ್ನ-ಬೆಳ್ಳಿ ಅಂಗಡಿ, ಸೀರೆ, ಬಟ್ಟೆ, ಮೊಬೈಲ್‌ ಅಂಗಡಿಗಳು ಬಾಗಿಲು ಮುಚ್ಚಿವೆ. ಆದರೂ ಗ್ರಾಹಕರನ್ನು ಸೆಳೆಯಲು ಮೊಬೈಲ್‌, ಆನ್‌ಲೈನ್‌ ಬಳಕೆಗೆ ವರ್ತಕರು ಮುಂದಾಗಿದ್ದಾರೆ.

ಅಂಗಡಿ, ಶೋರೂಂ ಶಟರ್ಸ್‌ ಬೀಗ ಹಾಕಿದ್ದರೂ ಅದರ ಮುಂದೆ ಎದ್ದುಕಾಣುವಂತೆ ಮೊಬೈಲ್‌ ನಂಬರ್‌ ಹಾಕಿ, ಗ್ರಾಹಕರೇ ಒಂದು ಕರೆಮಾಡಿ ನಿಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ಎಂದು ಬರೆದು ಅಂಟಿಸಿದ್ದಾರೆ. ಇದಲ್ಲದೇ ಹೊಸ ಖರೀದಿಯ ಜತೆಗೆ ಹಳೆಯ ಮೊಬೈಲ್‌, ಲ್ಯಾಪ್‌ಟಾಪ್‌ ರಿಪೇರಿ ಕಾರ್ಯ ಸಾಗಿದೆ. ಆದರೆ ರಿಪೇರಿಗಾಗಿ ನಿಗದಿಗಿಂತ ಅ ಧಿಕ ಹಣ ಆಕರಣೆ ಮಾಡಲಾಗುತ್ತಿದ್ದು, ತುರ್ತು ಇದ್ದವರು ದುಪ್ಪಟ್ಟು ನೀಡುವಂತಾಗಿದೆ.

ಮನೆಯಲಿಯೇ ಸಂಗ್ರಹ

Advertisement

ಬಹುತೇಕ ವ್ಯಾಪಾರಿಗಳು ಅಂಗಡಿಯಲ್ಲಿದ್ದ ವಸ್ತುಗಳನ್ನು ಮನೆಗೆ ಕೊಂಡೊಯ್ದು ಸಂಗ್ರಹ ಮಾಡಿಕೊಂಡಿದ್ದಾರೆ. ನಿತ್ಯ ಅಗತ್ಯ ಸಾಮಗ್ರಿ ಖರೀದಿಸಲು ಇರುವ ಸಮಯದಲ್ಲಿಯೇ ಬೇಡಿಕೆ ಸಲ್ಲಿಸುವ ಗ್ರಾಹಕರಿಗೆ ಮೊಬೈಲ್‌ನಲ್ಲೋ, ಸಾಮಾಜಿಕ ಜಾಲತಾಣದ ಮೂಲಕವೋ ವ್ಯಾಪಾರ ಕುದುರಿಸಿಕೊಂಡು ಅವರ ಮನೆಗೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದಕ್ಕೆ ಉತ್ತಮ ಸ್ಪಂದನೆ ಲಭಿಸಿದೆ.

ಇನ್ನು ಕಳೆದ 2-3 ದಿನಗಳ ಹಿಂದೆ ಟಿಕಾರೆ ರಸ್ತೆಯ ಕೆಲ ಮೊಬೈಲ್‌ ಅಂಗಡಿಗಳ ಕಳ್ಳತನವೂ ಆಗಿದೆ. ಲಕ್ಷಾಂತರ ಮೌಲ್ಯದ ಮೊಬೈಲ್‌ಗ‌ಳನ್ನು ಕಳ್ಳರು ದೋಚಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಮೊಬೈಲ್‌ ಅಂಗಡಿ ಮಾಲೀಕರು ಅಂಗಡಿಗಳಲ್ಲಿನ ಮೊಬೈಲ್‌ಗ‌ಳನ್ನು ಸುರಕ್ಷಿತ ಸ್ಥಳಕ್ಕೆ ಹಸ್ತಾಂತರ ಮಾಡಿದ್ದು, ಕೆಲವರು ಮನೆಗೆ ತಂದಿಟ್ಟುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next