Advertisement

ಅತ್ತ ಇತ್ತ ಸುತ್ತಮುತ್ತ ಗಿರಕಿ ಹೊಡೆಯುತ್ತೆ ಆಕಾಶ ಗುಬ್ಬಿ 

12:05 PM Jul 15, 2017 | |

ಚಿರ್ರ ರ್ರ ರ್ರ ,ಚಿರ್ರ ರ್ರ ರ್ರ .ಚಿರ್ರ ರ್ರ ರ್ರ  ಎಂದು ಕೂಗುತ್ತ ಹಾರುತ್ತದೆ.Alpine Swift (Tachymarptis melba )   RM -Bulbul + ಮಳೆ ಮೋಡ ತುಂಬಿದಾಗ ನೆಲಮಟ್ಟಕ್ಕೆ ಬಂದರೂ, ಕೀಟ ಹಿಡಿದೂ ಅದೇ ವೇಗದಲ್ಲಿ ಹಾರುತ್ತದೆ. ಜಗತ್‌ ಪ್ರಸಿದ್ದ ಜೋಗದ ಕಲ್ಲು ಬಂಡೆಗಳಲ್ಲಿ ಇದು ಗೂಡನ್ನು ಕಟ್ಟುತ್ತದೆ.  

Advertisement

 ಈ ಆಕಾಶ ಗುಬ್ಬಿ ಸ್ವಿಫ್ಟ್ ಮತ್ತು ಮಾರ್ಟಿನ್‌ ಅತಿ ಸಮೀಪದ ಲಕ್ಷಣದ ಹಕ್ಕಿಗಳು. ಇವು ಅತ್ಯಂತ ಕುತೂಹಲಕಾರಿ ಮತ್ತು ವಿಸ್ಮಯಗಳನ್ನು ಹೊಂದಿದ ಹಕ್ಕಿಗಳು. ಅದರಲ್ಲಿಯೂ ಸ್ವಿಫ್ಟ್ ಅಥವಾ ಆಕಾಶ ಗುಬ್ಬಿಯಂತೂ ಅನೇಕ ವಿಸ್ಮಯಗಳನ್ನು ಹೊಂದಿದೆ. ಇವು ಜೀವಿತದ ಬಹುಭಾಗವನ್ನು ಆಕಾಶದಲ್ಲೇ ಕಳೆಯುವುದರಿಂದ ಇದಕ್ಕೆ ಆಕಾಶ ಗುಬ್ಬಿ ಎಂಬ ಹೆಸರು ಬಂದಿದೆ. ಇಲ್ಲಿ ವಿವರಿಸಿರುವ ಬೆಟ್ಟದ ಆಕಾಶ ಗುಬ್ಬಿ,  ಬೆಟ್ಟ, ಕಲು, ಪಾರೆ ಪರ್ವತ ಶ್ರೇಣಿಗಳಲ್ಲೆ  ಇವು ಹೆಚ್ಚಾಗಿರುವುದರಿಂದ ಇದಕ್ಕೆ ಬೆಟ್ಟದ ಆಕಾಶ ಗುಬ್ಬಿ ಎಂದು ಹೆಸರಿಸಲಾಗಿದೆ. 

ಇದರ ರೆಕ್ಕೆಯ ಅಗಲ 57 ಸೆಂ.ಮೀ. ಭಾರ 100 ಗ್ರಾಂ. ಈ ಗುಂಪಿನಲ್ಲಿ ಸಾದಾ ಆಕಾಶ ಗುಬ್ಬಿ- ಕ್ರಿಸ್ಟೆಡ್‌ ಟ್ರೀ  ಸ್ವಿಫ್ಟ್, ಹೌಸ್‌ ಸ್ವಿಫ್ಟ್, ತಾಳೆ ಆಕಾಶ ಗುಬ್ಬಿ, ತಂತಿ ಬಾಲದ ಆಕಾಶ ಗುಬ್ಬಿ- ವಾಯರ್‌ ಟೇಲ್‌ ಸ್ವಿಫ್ಟ್, ಪಾಳು ಅಂಬರ ಗುಬ್ಬಿ – ಈ ಎಲ್ಲಾ ಜಾತಿಯ ತಳಿಗಳು ನಮ್ಮಲ್ಲಿಇವೆ.   ಇವೆಲ್ಲಾ ಹಾರುತ್ತಿರುವಾಗಲೇ ಚಿಕ್ಕ ಕೀಟ,  ಕ್ರಿಮಿಗಳನ್ನು ಹಿಡಿದು ತಿನ್ನುತ್ತವೆ. ಇವು ಬಹು ದೂರದವರೆಗೆ ವಲಸೆ ಹೋಗುತ್ತದೆ.  ತುಂಬಾ ವೇಗವಾಗಿ ಅಂದರೆ ಗಂಟೆಗೆ 150-200 ಕೀ.ಮೀ ವೇಗದಲ್ಲಿ ಹಾರುತ್ತಾ ತನಗೆ ಬೇಕಾದಂತೆ ಮೇಲೆ, ಕೆಳಗೆ ,ಅತ್ತ ,ಇತ್ತ ಹೇಗೆ ಬೇಕಾದರೂ ಗಿರಕಿ ಹೊಡೆಯುವ ಸಾಮರ್ಥ ಇದಕ್ಕಿದೆ. 

ಈ ಪಕ್ಷಿಯ ಬಗ್ಗೆ ಸಂಶೋಧನೆ ಕೂಡ ನಡೆದಿದೆ.  ಹಗುರವಾದ ಸೆನ್ಸರ್‌ ಅಳವಡಿಸಿ ಬೆರ್ನ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದ್ದು ಏನೆಂದರೆ- 200 ದಿನಗಳ ಕಾಲ ಎಲ್ಲೂ ನಿಲ್ಲದೇ, ರಾತ್ರಿ ಸಹ ಹಾರಿದ್ದು ಇದರ ಸೆನ್ಸರ್‌ ನಲ್ಲಿ ದಾಖಲಾಗಿದೆ. ಸೂರ್ಯನ ಬೆಳಕು, ಚಲನವಲನ, ಹವಾಮಾನದಲ್ಲಾಗುವ ವ್ಯತ್ಯಾಸವನ್ನೂ ಸಹ ಇದು ತಿಳಿಯುವ ಸಾಮರ್ಥ್ಯ ಹೊಂದಿದೆ. ಇದರದ್ದು ಬುಲ್‌ ಬುಲ್‌ ಇಲ್ಲವೇ ಮೈನಾ ಹಕ್ಕಿಯಷ್ಟೇ ಗಾತ್ರ. ವಿಶಾಲ, ಚೂಪಾದ ರೆಕ್ಕೆ ಇದಕ್ಕಿದೆ. ಚಿಕ್ಕ ಚುಂಚು, ಆದರೆ ದೊಡ್ಡ ಬಾಯಿ. 

ಇದರಿಂದಾಗಿಯೇ ಹಾರುವಾಗ ಬಾಯಿ ತೆರೆದು ಕೀಟ ಹಿಡಿದು ತಿನ್ನುವುದು. ಇದರ ಬೆನ್ನು ಮತ್ತು ರೆಕ್ಕೆ ಕಂದುಗಪ್ಪು ಬಣ್ಣದಿಂದ ಕೂಡಿರುತ್ತದೆ. ಹೊಟ್ಟೆ ಭಾಗದಲ್ಲಿ ಮಾಸಲು ಬಿಳಿ ಬಣ್ಣ ಇದೆ. ಮುಖದ ಕೆಳಗಡೆ ಬಿಳಿ, ಕುತ್ತಿಗೆ ಮತ್ತು ಹೊಟ್ಟೆ ಮಧ್ಯದಲ್ಲಿ ಕುತ್ತಿಗೆ ಕೆಳಗಡೆ ಕಪ್ಪು ಪಟ್ಟಿ ಇದೆ. ಇದು ಹಾರುವಾಗ ರೆಕ್ಕೆ ಬಿಲ್ಲಿನಂತೆ ಭಾಗುತ್ತದೆ.  ಭಾರತ, ಪಾಕಿಸ್ತಾನ, ಶ್ರೀಲಂಕಾ, ಬರ್ಮಾ, ದೇಶಗಳಲ್ಲಿ ಕಾಣಸಿಗುತ್ತದೆ. ಇದು ವಲಸೆ ಹಕ್ಕಿ. ಉನ್ಮತ್ತ ವೇಗದಿಂದ ಹಾರುವ ಹಕ್ಕಿ. ಮನಬಂದಂತೆ ಹಾರಬಲ್ಲದು. ವೇಗ ಹೆಚ್ಚಿಸ ಬಲ್ಲದು.  ಪ್ರಪಂಚದಲ್ಲೇ ಇಂತಹ ವಿಚಿತ್ರ ಹಾರಿಕೆಯ ಹಕ್ಕಿ ಅಪರೂಪ. 

Advertisement

ಹಾರುತ್ತಲೇ ವಂಶಾಭಿವೃದ್ದಿ ಮಾಡಿಕೊಳ್ಳುತ್ತದೆ. ಚಿರ್ರ ರ್ರ ರ್ರ ,ಚಿರ್ರ ರ್ರ ರ್ರ .ಚಿರ್ರ ರ್ರ ರ್ರ  ಎಂದು ಕೂಗುತ್ತ ಹಾರುತ್ತದೆ. ಮಳೆ ಮೋಡ ತುಂಬಿದಾಗ ನೆಲಮಟ್ಟಕ್ಕೆ ಬಂದರೂ, ಕೀಟ ಹಿಡಿದೂ ಅದೇ ವೇಗದಲ್ಲಿ ಹಾರುತ್ತದೆ. ಜಗತ್‌ ಪ್ರಸಿದ್ದ ಜೋಗದ ಕಲ್ಲು ಬಂಡೆಗಳಲ್ಲಿ ಇದು ಗೂಡನ್ನು ಕಟ್ಟುತ್ತದೆ.  ಡಿಸೆಂಬರ್‌ ನಿಂದ ಜನವರಿವರೆಗೆ ಇದು ಗೂಡು ಮಾಡುವ ಸಮಯ.  ಜೊಲ್ಲಿನ ಸಹಾಯದಿಂದ ಹುಲ್ಲು ಕಡ್ಡಿ, ಜೇಡರ ಬಲೆ ಮಣ್ಣು ಇತ್ಯಾದಿ ಸೇರಿಸಿ ಅಂಟಿಸಿ ಗೂಡು ಕಟ್ಟುತ್ತದೆ. ಅಲ್ಲಿ ಬಿಳಿ ಬಣ್ಣದ ಹೊಳಪಿಲ್ಲದ 2-4 ಮೊಟ್ಟೆ ಇಡುತ್ತದೆ.  ಗಂಡು ಹೆಣ್ಣು ಎರಡೂ ಸೇರಿ ಮರಿಗಳ ಪಾಲನೆ ಪೋಷಣೆ ಮಾಡುವುದು. 7ರಿಂದ 20 ದಿನದಲ್ಲಿ ಮರಿ ಬಲಿತು ದೊಡ್ಡದಾಗುತ್ತದೆ. ಮರಿ, ತಂದೆ ತಾಯಿಯ ಜೊತೆ ಎಷ್ಟು ಸಮಯ ಇರುತ್ತದೆ ಎನ್ನುವುದು ತಿಳಿದಿಲ್ಲ. ಸಾಮಾನ್ಯವಾಗಿ ಇವು ಗುಂಪು, ಗುಂಪಾಗಿಯೇ ಬದುಕುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next