Advertisement
ತಾಲೂಕಿನಲ್ಲಿ ಸುಮಾರು 85 ಸಾವಿರ ಜನಸಂಖ್ಯೆ ಇದೆ. ತಾಲೂಕು ಕೇಂದ್ರ ಆಲೂರಿನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದ ಪೊಲೀಸ್ ಠಾಣೆ ಇದೆ. ಕೆಂಚಮ್ಮನ ಹೊಸಕೋಟೆ ಹೋಬಳಿ ಕೇಂದ್ರದಲ್ಲಿ ಹೊರ ಪೊಲೀಸ್ ಠಾಣೆ ಇದೆ. ಎರಡು ವರ್ಷಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಮಹಿಳಾ ಪೊಲೀಸ್ ಪೇದೆ, ಸಹಾಯಕ ಮತ್ತು ಸಬ್ ಇನ್ಸ್ ಪೆಕ್ಟರ್, ಪೇದೆಗಳಿದ್ದರು. ಅವರೆಲ್ಲ ವರ್ಗಾವಣೆಗೊಂಡ ನಂತರ ಮಹಿಳಾ ಸಿಬ್ಬಂದಿಗಳಿಲ್ಲದೆ, ಆರೋಪಕ್ಕೊಳಗಾದ ಮಹಿಳೆಯರ ವಿಚಾರಣೆ ನಡೆಸಲು ಸರಿಯಾಗಿ ಆಗುತ್ತಿಲ್ಲ ಎಂಬ ಕೂಗೂ ನಾಗರಿಕರಿಂದ ಕೇಳಿಬಂದಿದೆ.
Related Articles
Advertisement
ಮಹಿಳೆಯರು ಮೊದಲೇ ಪೊಲೀಸ್ ಎಂದರೆ ಭಯಭೀತರಾಗುತ್ತಾರೆ. ಅದೂ ಅಲ್ಲದೆ ಠಾಣೆಗೆ ಹೋಗಲು ಮುಜುಗರಕ್ಕೆ ಒಳಗಾಗುತ್ತಾರೆ. ಠಾಣೆಗೆ ಹೋದ ನಂತರ ಪುರುಷ ಸಿಬ್ಬಂದಿ ಗಳೊಡನೆ ವಿಷಯ ಹಂಚಿಕೊಳ್ಳಲು ಬಹುತೇಕ ಹಿಂಜರಿಯುತ್ತಾರೆ. ಮಹಿಳಾ ಪೊಲೀಸ್ ಸಿಬ್ಬಂದಿಗಳಿದ್ದರೆ,
ಅವರಿಗೆ ಪ್ರಕರಣ ಕುರಿತು ನಿಸ್ಸಂದೇಹವಾಗಿ ಹಂಚಿಕೊಳ್ಳಬಹುದು. 2-3 ವರ್ಷಗಳಿಂದ ಮಹಿಳಾ ಸಿಬ್ಬಂದಿಗಳೇ ಇಲ್ಲ ಎನ್ನುವ ಮಾತುಗಳಿವೆ ಆಲೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು ಠಾಣೆಗೆಮಹಿಳಾ ಪೊಲೀಸ್ ಸಿಬ್ಬಂದಿ ನೇಮಿಸುವಂತೆ ಗಮನ ನೀಡಬೇಕು ಎಂದು ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ರಮೇಶ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಆಲೂರು ಠಾಣೆಗೆ ಮಹಿಳಾಪೊಲೀಸ್ ಸಿಬ್ಬಂದಿ ನೇಮಿಸುವ ಮೂಲಕ ಮಹಿಳೆಯರಿಗೆ ನೆರವಾಗಬೇಕು.●ಉಮಾ ರವಿಪ್ರಕಾಶ್, ಬಿಜೆಪಿ ಮುಖಂಡ
2-3 ವರ್ಷಗಳ ಹಿಂದೆ ಠಾಣೆ ಮುಖ್ಯಸ್ಥರ ಗಮನಕ್ಕೆ ತರಲಾಯಿತಾದರೂಇದುವರೆವಿಗೂ ಮಹಿಳಾ ಸಿಬ್ಬಂದಿಗಳ ನೇಮಕವಾಗಿಲ್ಲ. ಈ ಭಾಗದಲ್ಲಿ ಕೂಲಿಕಾರ್ಮಿಕರೇ ಹೆಚ್ಚು ಇರುವುದರಿಂದ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಮಹಿಳೆಯರುತಮಗಾಗುವ ಸಮಸ್ಯೆಗಳ ಬಗ್ಗೆ ಪುರುಷಸಿಬ್ಬಂದಿಗಳ ಹತ್ತಿರ ಹೇಳಿಕೊಳ್ಳಲು ಸಾದ್ಯವಿಲ್ಲ. ಹೀಗಾಗಿ ಮಹಿಳಾ ಪೊಲೀಸ್ ಸಿಬ್ಬಂದಿ ನೇಮಕ ಅಗತ್ಯ●ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ