ಮುಂಬೈ: ಹಾರ್ದಿಕ್ ಪಾಂಡ್ಯ ಅವರು ಗುಜರಾತ್ ಟೈಟಾನ್ಸ್ ನಿಂದ ಅವರ ಹಳೆಯ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಗೆ ಹೈ-ಪ್ರೊಫೈಲ್ ವರ್ಗಾವಣೆ ಎಲ್ಲರ ಗಮನವನ್ನು ಸೆಳೆಯಿತು. ಹಾರ್ದಿಕ್ ಪಾಂಡ್ಯ ಅವರು ಗುಜರಾತ್ ಟೈಟಾನ್ಸ್ ತಂಡವನ್ನು 2022 ರಲ್ಲಿ ಗೆಲುವಿಗೆ ಮತ್ತು 2023 ರಲ್ಲಿ ರನ್ನರ್ ಅಪ್ ಸ್ಥಾನಕ್ಕೆ ಮುನ್ನಡೆಸಿದ್ದರು. ಆದರೆ ಈ ಬಾರಿ ತನ್ನ ನಾಯಕತ್ವದ ಗುಜರಾತ್ ತೊರೆದು ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡ ಸೇರಿ ಅಚ್ಚರಿಗೆ ಕಾರಣವಾಗಿದ್ದರು.
ಹಾರ್ದಿಕ್ ಪಾಂಡ್ಯ ಅವರನ್ನು ಕಳೆದುಕೊಂಡ ಗುಜರಾತ್ ಮತ್ತೊಂದು ಸ್ಟಾರ್ ಆಟಗಾರನನ್ನು ಕಳೆದುಕೊಳ್ಳುವ ಭೀತಿಯಲ್ಲಿತ್ತು. ಅದು ಮೊಹಮ್ಮದ್ ಶಮಿ. ಅವರು ಒಂದು ಫ್ರಾಂಚೈಸಿಯು ತಮ್ಮ ಪ್ರಮುಖ ವಿಕೆಟ್ ಟೇಕರ್ ಮೊಹಮ್ಮದ್ ಶಮಿ ಅವರನ್ನು ಕೂಡ ಸಂಪರ್ಕಿಸಿದ್ದಾರೆ ಎಂದು ಗುಜರಾತ್ ಟೈಟಾನ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರ್ನಲ್ ಅರವಿಂದರ್ ಸಿಂಗ್ ಬಹಿರಂಗಪಡಿಸಿದರು.
ಇದನ್ನೂ ಓದಿ:Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 88 ಅಂಕ ಇಳಿಕೆ; ಲಾಭಗಳಿಸಿದ ಷೇರು ಯಾವುದು?
“ಪ್ರತಿ ಫ್ರಾಂಚೈಸಿಗೆ ಅಗ್ರ ಆಟಗಾರರನ್ನು ಹೊಂದುವ ಹಕ್ಕಿದೆ. ಆದರೆ ಐಪಿಎಲ್ ಫ್ರಾಂಚೈಸ್ ನೇರವಾಗಿ ಆಟಗಾರನನ್ನು ಸಂಪರ್ಕಿಸುವ ವಿಧಾನವು ತಪ್ಪಾಗಿದೆ. ಜಿಟಿ ಟೀಂ ಮ್ಯಾನೇಜ್ಮೆಂಟ್ ಈ ವಿಧಾನದಿಂದ ಸಂತೋಷವಾಗಿಲ್ಲ. ಈ ಐಪಿಎಲ್ ತಂಡ ನಮ್ಮ ಕೋಚಿಂಗ್ ಸಿಬ್ಬಂದಿಯನ್ನು ಸಂಪರ್ಕಿಸಿದ್ದು ತಪ್ಪು. ಅವರಿಗೆ ವರ್ಗಾವಣೆ ಬೇಕಿದ್ದರೆ ನಮ್ಮೊಂದಿಗೆ ಮೊದಲೇ ಮಾತನಾಡಬಹುದಿತ್ತು. ನಾವು ನಂತರ ಅಪ್ರೋಚ್ ಬಗ್ಗೆ ತಿಳಿದುಕೊಡೆವು” ಎಂದು ಅರವಿಂದರ್ ಸಿಂಗ್ ಹೇಳಿದರು.
ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡ ಸೇರಿದ ಬಳಿಕ ಗುಜರಾತ್ ಟೈಟಾನ್ಸ್ ತಂಡವು ನೂತನ ನಾಯಕನನ್ನು ಆಯ್ಕೆ ಮಾಡಿದೆ. ಆರಂಭಿಕ ಆಟಗಾರ ಶುಭಮನ್ ಗಿಲ್ ಅವರು ಗುಜರಾತ್ ತಂಡದ ಹೊಸ ನಾಯಕನಾಗಿದ್ದಾರೆ.