Advertisement
2021 ರ ಡಿಸೆಂಬರ್ ನಲ್ಲಿ ತೆರೆಗೆ ಬಂದ ಅಲ್ಲು ಅರ್ಜುನ್ ಅವರ ʼಪುಷ್ಪʼ ರಿಲೀಸ್ ಗೂ ಮುನ್ನ ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಚಿತ್ರ ಬಿಡುಗಡೆಯಾದ ಬಳಿಕ ಮೊದಲಿದ್ದ ಹೈಪ್ ಹೆಚ್ಚಾಯಿತು. ಮಾಸ್ ಪ್ರೇಕ್ಷಕರನ್ನು ಚಿತ್ರ ಗಮನ ಸೆಳೆಯಿತು.
Related Articles
Advertisement
ಈ ಸಾಲಿಗೆ ಇತ್ತೀಚೆಗೆ ಬಂದ ಕನ್ನಡದ “777 ಚಾರ್ಲಿ”,“ಜೇಮ್ಸ್” ಮಲಯಾಳಂನ “ಹೃದ್ಯಂ”, “ಜನಗಣಮನ”, ತಮಿಳಿನ “ವಲಿಮೈ”, “ಬೀಸ್ಟ್” ಟಾಲಿವುಡ್ ನ “ಸರ್ಕಾರು ವಾರಿ ಪಾಟ”, “ಬೀಮ್ಲಾ ನಾಯಕ್” ಸಿನಿಮಾಗಳು ಸೇರುತ್ತವೆ. ಆರ್ ಆರ್ ಆರ್, ಕೆಜಿಎಫ್ ನಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಮಾಡದಿದ್ದರೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಾಕಿದ ಹಣಕ್ಕಿಂತ ಹೆಚ್ಚಿನದನ್ನು ಪಡೆದುಕೊಳ್ಳುವಲ್ಲಿ ಯಶಸ್ಸಾಗಿದೆ.
ದೊಡ್ಡ ಸಿನಿಮಾಗಳು ಗಳಿಸಿದ್ದೆಷ್ಟು? : 2021 ರ ಅಂತ್ಯ ಹಾಗೂ ಈ ವರ್ಷ ಬಂದ ಸೌತ್ ಸಿನಿಮಾಗಳು ಬರೀ ಸೂಪರ್ ಹಿಟ್ ಮಾತ್ರವಾಗಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಕೋಟಿಗಟ್ಟಲೇ ಬಾಚಿಕೊಂಡ ಸಿನಿಮಾಗಳು ಕೂಡ ಆಗಿವೆ. “ಆರ್ ಆರ್ ಆರ್” ವಿಶ್ವದ್ಯಂತ 1 ಸಾವಿರ ಕೋಟಿಯನ್ನು ಗಳಿಸಿತ್ತು. ಹಾಗೆಯೇ ಯಶ್ ಅವರ “ಕೆಜಿಎಫ್ -2” 1,200 ಕೋಟಿಯನ್ನು ಬಾಚಿಕೊಂಡಿತ್ತು. “ವಿಕ್ರಮ್” ಚಿತ್ರ 400 ಕೋಟಿ ಕಲೆಕ್ಷನ್ ಮಾಡಿದೆ.
ಮಕಾಡೆ ಮಲಗಿದ ಬಾಲಿವುಡ್ : ನೆಪೋಟಿಸಂ, ಬಾಯ್ಕಾಟ್ ಹೀಗೆ ವಿವಾದಕ್ಕೆ ಸಿಲುಕಿದ ಬಾಲಿವುಡ್ ಸಿನಿಮಾಗಳು ಏನೇ ಮಾಡಿದರೂ, ಪ್ರೇಕ್ಷಕರಿಂದ ಶಹಬ್ಬಾಸ್ ಪಡೆದುಕೊಳ್ಳುತ್ತಿಲ್ಲ. ಹಾಗಂತ ಬಾಲಿವುಡ್ ನಲ್ಲಿ ಸಿನಿಮಾಗಳೇ ಬರುತ್ತಿಲ್ಲ ಎಂದಲ್ಲ. ಯಾವ ಸಿನಿಮಾಗಳ ಹಿಟ್ ಆಗಲೇ ಇಲ್ಲ ಎಂದರ್ಥ ಅರ್ಥವಲ್ಲ, ಕಾರ್ತಿಕ್ ಆರ್ಯನ್ ಅವರ ‘ಭೂಲ್ ಭುಲಯ್ಯ 2’ ಹಾಗೂ ಅನಿಲ್ ಕಪೂರ್ ಮುಖ್ಯ ಭೂಮಿಕೆಯ “ಜುಗ್ಜುಗ್ ಜಿಯೋʼ ಸಿನಿಮಾಗಳು 100 ಕೋಟಿ ಕ್ಲಬ್ ಸೇರಿದವು.
ಆದರೆ ಬೆರಳಣಿಕೆಯ ಎರಡೇ ಎರಡು ಸಿನಿಮಾಗಳು ಮಾತ್ರ ಗಮನ ಸೆಳೆದದ್ದು ಬಿಟ್ಟರೆ ಉಳಿದ ಸಿನಿಮಾಗಳು ಸೌತ್ ಚಿತ್ರಗಳ ಮುಂದೆ ಮಕಾಡೆ ಮಲಗಿದೆ.
ಸೂಪರ್ ಹಿಟ್ ನಡುವೆ ಫ್ಲಾಪ್ ಸಾಲಿಗೆ ಸೇರಿದ ಸೌತ್ ಸಿನಿಮಾಗಳು:
ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಸಿನಿರಂಗದ ಮೇಲೆ ಸವಾರಿ ಮಾಡಲು ಆರಂಭಿಸಿದೆ. ಆದರೆ ಸಾಲು ಸಾಲು ಸಿನಿಮಾಗಳು ನಡುವೆಯೂ ದಕ್ಷಿಣ ಭಾರತದ ಸಿನಿಮಾಗಳಿಗೂ ದೊಡ್ಡ ಮಟ್ಟದ ಸೋಲುಗಳಾಗಿವೆ. ಬಿಗ್ ಸ್ಟಾರ್ ಚಿತ್ರಗಳೂ ಸೋತಿವೆ.
ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಇಬ್ಬರು ಜೊತೆಯಾಗಿ ಕಾಣಸಿಕೊಂಡರೆ ಸಿನಿಮಾ ಖಂಡಿತ ಹಿಟ್ ಅಂದುಕೊಳ್ಳಬಹುದು ಆದರೆ ಅದು “ಆಚಾರ್ಯ”ದಲ್ಲಿ ಅದು ಸುಳ್ಳಾಯಿತು. ಚಿತ್ರ ಹೀನಾಯವಾಗಿ ಸೋತಿತು. ಇದರೊಂದಿಗೆ ಪ್ರಭಾಸ್ ಅವರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ “ರಾಧೆಶ್ಯಾಮ್” ಒಂದಷ್ಟು ದಿನ ಥಿಯೇಟರ್ ನಲ್ಲಿ ತಿರುಗಿ ಮಾಯಾವಾಯಿತು. ಇದು ಪ್ರಭಾಸ್ ಗೆ ಸಾಹೋ ಬಳಿಕ ಮತ್ತೊಂದು ದೊಡ್ಡ ಮಟ್ಟದ ಸೋಲು ತಂದುಕೊಟ್ಟ ಸಿನಿಮಾ. ಇನ್ನೊಂದೆಡೆ ಮೋಹನ್ ಲಾಲ್ ಅವರ “ಅರಟ್ಟು” ಚಿತ್ರವೂ ಪ್ರೇಕ್ಷಕರ ಮನದಲ್ಲಿ ಅಚ್ಚಾಗಿ ಉಳಿಯಲು ವಿಫಲವಾಯಿತು.
ರಾಮ್ ಪೋತಾನಿ ಅವರ “ದಿ ವಾರಿಯರ್”, ನಾಗಚೈತನ್ಯ ಅವರ “ಥ್ಯಾಂಕ್ಯೂ” ಕನ್ನಡದ “ಬೈರಾಗಿ” ಚಿತ್ರವೂ ಅಷ್ಟಕಷ್ಟೇ ಎನ್ನುವಷ್ಟರ ಮಟ್ಟಿಗೆ ಗಮನ ಸೆಳೆಯಿತು.
2022 ರಲ್ಲಿ ಇನ್ನೂ ಇದೆ ಬಹುನಿರೀಕ್ಷೆ: ಸೋಲು – ಗೆಲುವಿನ ಸಾಗುತ್ತಿರುವ ಸೌತ್ ಸಿನಿಮಾ ರಂಗದಲ್ಲಿ. ಇತ್ತೀಚೆಗೆ ಕನ್ನಡದ ಪ್ಯಾನ್ ಇಂಡಿಯಾ ʼವಿಕ್ರಾಂತ್ ರೋಣ”, ವಿಜಯ್ ದೇವರಕೊಂಡ ಅವರ ʼಲೈಗರ್” ಹಿಂದಿಯ “ಲಾಲ್ ಸಿಂಗ್ ಚಡ್ಡಾ”, “ರಕ್ಷಾ ಬಂಧನ್” ಸಿನಿಮಾಗಳು ಇನ್ನು ಥಿಯೇಟರ್ ನಲ್ಲಿವೆ. ಅವು ಅಂತಿಮವಾಗಿ ಎಷ್ಟು ಕಲೆಕ್ಷನ್ ಮಾಡುತ್ತವೆ ಎನ್ನುವುದನ್ನು ಕಾದು ನೋಡಬೇಕು.ಈ ವರ್ಷ ದೊಡ್ಡ ಸಿನಿಮಾಗಳು ರಿಲೀಸ್ ಆಗಲು ಬಾಕಿಯಿದೆ. ಅವುಗಳಲ್ಲಿ ದೊಡ್ಡ ಸಿನಿಮಾವೆಂದರೆ ಮಣಿ ರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್”.