Advertisement

ಒಂಟಿ ಮಹಿಳೆ ಕೊಂದ ಆರೋಪಿ 6 ವರ್ಷದ ಬಳಿಕ ಸೆರೆ

06:41 AM Jan 04, 2019 | |

ಬೆಂಗಳೂರು: ಒಂಟಿ ಮಹಿಳೆಯ ಮನೆಗೆ ನುಗ್ಗಿ ಆಕೆಯನ್ನು ಹತ್ಯೆಗೈದು ಚಿನ್ನಾಭರಣ ದೋಚಿದ್ದ ತಂಡದ ಸದಸ್ಯನೊಬ್ಬನನ್ನು 6 ವರ್ಷಗಳ ಬಳಿಕ ಕೆಂಪೇಗೌಡನಗರ ಪೊಲೀಸರು ಬಂಧಿಸಿದ್ದಾರೆ. ಕೆಂಪೇಗೌಡನಗರ ನಿವಾಸಿ ರಾಘವೇಂದ್ರ (35) ಬಂಧಿತ ಆರೋಪಿ. ಈತ ತನ್ನ ಇತರೆ ಸಹಚರರ ಜತೆ ಸೇರಿಕೊಂಡು 2013ರಲ್ಲಿ ಕೆಂಪೇಗೌಡ ನಗರದ ಮಾನಸ ಎಂಬುವವರನ್ನು ಕೊಲೆಗೈದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

Advertisement

2013ರಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದ ಮಾನಸ ಅವರ ಮನೆಗೆ ನುಗ್ಗಿದ್ದ ರಾಘವೇಂದ್ರ ಮತ್ತು ಸಹಚರರು, ಚಿನ್ನಾಭರಣ ಕಳವು ಮಾಡಲು ಯತ್ನಿಸಿತ್ತು. ಇದಕ್ಕೆ ಮಾನಸ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಆಕ್ರೋಶಗೊಂಡ ಆರೋಪಿಗಳು ಉಸಿರುಗಟ್ಟಿಸಿ ಆಕೆಯನ್ನು ಕೊಲೆಗೈದು, ಮನೆಯಲ್ಲಿದ್ದ 400 ಗ್ರಾಂ. ಚಿನ್ನಾಭರಣ ಹಾಗೂ ಒಂದು ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು.

ಕೃತ್ಯದಲ್ಲಿ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಹೀಗಾಗಿ ಪ್ರಕರಣವನ್ನು ತಟಸ್ಥವಾಗಿಡಲಾಗಿತ್ತು. ಆದರೆ, ಇತ್ತೀಚೆಗೆ ದರೋಡೆ ಪ್ರಕರಣವೊಂದರ ತನಿಖೆ ವೇಳೆ ಮಾನಸ ಕೊಲೆ ಪ್ರಕರಣದ ಸುಳಿವು ಸಿಕ್ಕಿತ್ತು. ಅದನ್ನು ಆಧರಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮೂರು ವರ್ಷದ ಹಿಂದೆ ತಾನೇ ಕೊಲೆ ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next