Advertisement
ಎಡಿಜಿಪಿಯಾದ ನಂತರ ರಾಜ್ಯದ ಎಲ್ಲ ವಿಭಾಗೀಯ ಹಾಗೂ ಜಿಲ್ಲಾ ಕೇಂದ್ರಗಳಿಗೆ ಅಲೋಕಕುಮಾರ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ಮಹತ್ವದ ಸಭೆಗಳನ್ನು ನಡೆಸುತ್ತಿರುವುದರ ಜತೆಗೆ ಕಠಿಣ ಸೂಚನೆಗಳನ್ನು ನೀಡುತ್ತಿರುವುದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸ್ಪಂದಿಸುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
Related Articles
Advertisement
ಜುಲೈ 18ರಂದು ಸಂಜೆ 4ಕ್ಕೆ ಕಲಬುರಗಿ ಮಹನಾಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಡಿಜಿಪಿ ಅಲೋಕಕುಮಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಬಹುದಾಗಿದೆ.
ಅಪರಾಧ ಪ್ರಕರಣಗಳು ಹೆಚ್ಚಳ
ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತಾಲಯ ಆದ ನಂತರ ಅಪರಾಧ ಪ್ರಕರಣಗಳು ಕಡಿಮೆ ಆಗಬೇಕು. ಆದರೆ ಉಲ್ಟಾ ಜಾಸ್ತಿಯಾಗಿರುವುದನ್ನು ಅಂಕಿ-ಅಂಶಗಳೇ ನಿರೂಪಿಸುತ್ತಿವೆ. ಕೊಲೆಗಳಂತೂ ರಾಜಾರೋಷವಾಗಿ ನಡೆಯುತ್ತಿವೆ. ಯುವಕರಂತೂ ಯಾರ ಭಯವಿಲ್ಲದೇ ನಿರ್ಭಯವಾಗಿ ಅಪರಾಧ ಪ್ರಕರಣಗಳಲ್ಲಿ ಆಸಕ್ತಿ ತೋರುತ್ತಿರುವುದು ಭಯ ಮೂಡಿಸುತ್ತಿದೆ. ಯುವಕರ ತ್ರಿಬಲ್ ರೈಡ್ ಸಾಮಾನ್ಯ ಎನ್ನುವಂತಾಗಿದೆ. ಇದೇ ಕಾರಣಕ್ಕೆ ಅಪಘಾತಗಳು ನಿಯಂತ್ರಣ ಇಲ್ಲ ಎನ್ನುವಂತೆ ನಡೆಯುತ್ತಿವೆ. ಒಟ್ಟಾರೆ ಅಪರಾಧಿಗಳಿಗೆ ಪೊಲೀಸರ ಭಯಯೇ ಇಲ್ಲ ಎನ್ನುವಂತಾಗಿದೆ.
ಕಳೆದ ಆರು ತಿಂಗಳ ಅವಧಿಯಲ್ಲಿ ಕಲಬುರಗಿ ಮಹಾನಗರದಲ್ಲಿ 18 ಕೊಲೆಗಳಾಗಿವೆ. ಕಳೆದ ವರ್ಷ 38 ಹಾಗೂ ಅದರ ಹಿಂದಿನ ವರ್ಷ 27 ಕೊಲೆಗಳಾಗಿದ್ದವು. ಅದೇ ರೀತಿ ಪ್ರಸ್ತುತ ಆರು ತಿಂಗಳ ಅವಧಿಯಲ್ಲಿ 45 ಮನೆ ಹಾಗೂ ದರೋಡೆ ಪ್ರಕರಣಗಳು ನಡೆದಿದ್ದರೆ ಕಳೆದ ವರ್ಷ 86, ಅದರ ಹಿಂದಿನ ವರ್ಷ 68 ಪ್ರಕರಣಗಳು ನಡೆದಿದ್ದವು. ಇದು ಪೊಲೀಸ್ ಆಯುಕ್ತಾಲಯವಾಗಿದ್ದರೂ ಅಪರಾಧ ಸಂಖ್ಯೆಗಳು ಕಡಿಮೆಯಾಗದೇ ಹೆಚ್ಚಳವಾಗಿರುವುದು ನಿರೂಪಿಸುತ್ತದೆ.
ಕಳೆದೆರಡು ವರ್ಷಗಳಿಂದ ರೌಡಿಗಳಿಗೆ ಭಯ ಹುಟ್ಟಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯಾಚರಣೆ ನಡೆದಿರುವುದನ್ನು ಕಾಣಬಹುದಾಗಿದೆ. ರೌಡಿ ಪರೇಡ್ ನಡೆಸಿ ಎಚ್ಚರಿಕೆ ನೀಡುವುದಕ್ಕೆ ಮಾತ್ರ ಸಿಮೀತ ಎನ್ನುವಂತಾಗಿದೆ.
ಗಾಣಗಾಪುರ ನಕಲಿ ವೆಬ್ಸೈಟ್
ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಅರ್ಚಕರು ನಕಲಿ ವೆಬ್‌ಸೈಟ್ ತೆರೆದು ಸರ್ಕಾರಕ್ಕೆ ಬೊಕ್ಕಸಕ್ಕೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿದೆ. ಆದರೆ ತನಿಖೆಗೆ ಸಂಬಂಧಿಸಿದಂತೆ ಸರಿಯಾದ ನಿಟ್ಟಿನಲ್ಲಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಸರಿಯಾದ ದಾಖಲೆಗಳನ್ನು ತನಿಖಾಧಿಕಾರಿ ನಿರ್ವಹಿಸುತ್ತಿಲ್ಲ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಎಡಿಜಿಪಿಯವರು ನಿಗಾ ವಹಿಸುವುದು ಅಗತ್ಯವಾಗಿದೆ.
ಎಸ್ಪಿ ಹಾಗೂ ಐಜಿಯಾಗಿದ್ದಾಗ ನೇರವಾಗಿ ಕೆಲಸ ಮಾಡಬಹುದಾಗಿದೆ. ಆದರೆ ಈ ಎಡಿಜಿಪಿಯಾಗಿ ಕೆಲಸ ಮಾಡಿಸಬೇಕಿದೆ. ಕಲಬುರಗಿ ಜಿಲ್ಲೆ ಹಾಗೂ ಮಹಾನಗರ ಕಾನೂನು ಸುವ್ಯವಸ್ಥೆ ಕುರಿತಾಗಿ ಸುದೀರ್ಘ ಸಭೆ ನಡೆಸಿ ಸಮಾಲೋಚಿಸಲಾಗುವುದು. –ಅಲೋಕಕುಮಾರ, ಎಡಿಜಿಪಿ
-ಹಣಮಂತರಾವ ಭೈರಾಮಡಗಿ