Advertisement

ಶೇ.90 ಮೊಬೈಲ್‌ ಸ್ಥಳೀಯ

08:45 AM Nov 02, 2018 | Team Udayavani |

ಹೊಸದಿಲ್ಲಿ: ದೇಶೀಯ ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಶೇ. 90ರಷ್ಟು ಫೋನುಗಳು ಸ್ಥಳೀಯವಾಗಿಯೇ ಉತ್ಪಾದನೆಯಾಗುತ್ತದೆ ಎಂದು ‘ಟೆಕ್‌ 2’ ಹೇಳಿದೆ. ಸೈಬರ್‌ ಮೀಡಿಯಾ ರಿಸರ್ಚ್‌ (ಸಿಎಂಆರ್‌) ಎಂಬ ಸಂಶೋಧನಾ ವರದಿಯನ್ನಾಧರಿಸಿ ಮಾಡಲಾಗಿರುವ ಈ ವರದಿಯಲ್ಲಿ, ಸ್ಮಾರ್ಟ್‌ ಫೋನ್‌ಗಳ ಬೇಡಿಕೆ ಗಗನಮುಖೀಯಾಗಿ ಏರುತ್ತಿರುವ ಹಿನ್ನೆಲೆಯಲ್ಲಿ, ಅತಿ ಕಡಿಮೆ ಬೆಲೆಗೆ ಗರಿಷ್ಠ ಫೀಚರ್ಸ್‌ ಇರುವ ಮೊಬೈಲ್‌ಗ‌ಳನ್ನು ತಯಾರಿಸುವ ಉದ್ದೇಶದಿಂದ ಅನೇಕ ಅಂತಾರಾಷ್ಟ್ರೀಯ ಕಂಪೆನಿಗಳು ಭಾರತದಲ್ಲೇ ತಮ್ಮ ತಯಾರಿಕಾ ಘಟಕಗಳನ್ನು ಸ್ಥಾಪಿಸಿ, ಆಮದು ವೆಚ್ಚವನ್ನು ಕಡಿಮೆ ಮಾಡಿಕೊಂಡಿವೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next