Advertisement

ಆಲಮಟ್ಟಿಯಿಂದ 2.20 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ

04:14 PM Aug 17, 2020 | Suhan S |

ಆಲಮಟ್ಟಿ: ಕೃಷ್ಣಾ ನದಿ ಉಪನದಿಗಳು ಮತ್ತು ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಆರ್ಭಟ ಹೆಚ್ಚಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಆಲಮಟ್ಟಿ ಶಾಸ್ತ್ರಿ ಜಲಾಶಯದಿಂದ 2.20 ಲಕ್ಷ ಕ್ಯೂಸೆಕ್‌ ನೀರು ಹೊರಬಿಡಲಾಗುತ್ತಿದೆ.

Advertisement

ಇತ್ತೀಚೆಗಷ್ಟೇ ಮಳೆ ಆರ್ಭಟ ತಗ್ಗಿದ್ದರಿಂದ ಜಲಾಶಯದ ಎಲ್ಲ ಗೇಟ್‌ ಬಂದ್‌ ಮಾಡಿ ನೀರು ಸಂಗ್ರಹ ಮಾಡಿಕೊಳ್ಳಲು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದರು. ಆದರೆ ಮಹಾರಾಷ್ಟ್ರದ ಸತಾರಾ, ಸಾಂಗ್ಲಿ, ಕೊಲ್ಹಾಪುರ, ರತ್ನಗಿರಿ ಜಿಲ್ಲೆಗಳು ಮತ್ತು ರಾಜ್ಯದ ಬೆಳಗಾವಿ ಜಿಲ್ಲೆ ಸೇರಿದಂತೆ ಕೃಷ್ಣಾ ಜಲಾನಯನ ಹಾಗೂ ಅದರ ಉಪನದಿಗಳಾಗಿರುವ ವೇದಗಂಗಾ, ದೂಧಗಂಗಾ, ತರಾಳಿ, ಘಟಪ್ರಭಾ ನದಿ ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಅಲ್ಲದೇ ಮಲಪ್ರಭಾ ನದಿಯೂ ತುಂಬಿ ಹರಿಯುತ್ತಿದ್ದು ಆಲಮಟ್ಟಿ ಜಲಾಶಯದ ಹಿಂಭಾಗ ಮತ್ತು ಮುಂಭಾಗದ ಪ್ರದೇಶದಲ್ಲಿ ಎಲ್ಲಿ ನೋಡಿದರೂ ನೀರೇ ಕಾಣುವಂತಾಗಿದೆ. 123.081 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ರವಿವಾರ ಸಂಜೆ 114.50 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,34,790 ಒಳಹರಿವು ಇದ್ದು, 2.20 ಲಕ್ಷ ಕ್ಯೂಸೆಕ್‌ ನೀರು ಹೊರಬಿಡಲಾಗುತ್ತಿದೆ.

ಹೂಳು ತೆರವುಗೊಳಿಸಿ: ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಸವಸಾಗರ ಹಿನ್ನೀರು ಪ್ರದೇಶದಲ್ಲಿ ಎರಿ ಮಣ್ಣಿನಲ್ಲಿ ಹರಿದು ಬರುವ ಮಲಪ್ರಭಾ ನದಿ ಹೂಳು ಜಲಾಶಯದಲ್ಲಿ ಸಂಗ್ರಹವಾಗಿದ್ದು ಸರ್ಕಾರ ಹೂಳು ತೆರವುಗೊಳಿಸಿದರೆ 33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 14 ಟಿಎಂಸಿ ಅಡಿ ಹೂಳು ತುಂಬಿರುವ ಬಗ್ಗೆ ಮಾಹಿತಿಯಿದ್ದು ಕೂಡಲೇ ಹೂಳು ತೆರವುಗೊಳಿಸುವುದರಿಂದ ಅವಳಿ ಜಿಲ್ಲೆಯ ಸುಮಾರು 50 ಗ್ರಾಮಗಳನ್ನು ರಕ್ಷಿಸಿದಂತಾಗುತ್ತದೆ. ಇಲ್ಲದಿದ್ದರೆ ಬರುವ ದಿನಗಳಲ್ಲಿ ಆ ಎಲ್ಲ ಗ್ರಾಮಗಳನ್ನು ಸ್ಥಳಾಂತರಗೊಳಿಸಬೇಕಾಗುತ್ತದೆ. ಆದ್ದರಿಂದ ಪ್ರವಾಹದ ವೇಳೆಯಲ್ಲಿಯೇ ನೂತನ ತಾಂತ್ರಿಕ ಯಂತ್ರ ಬಳಸಿಕೊಂಡು ಹೂಳು ತೆರವುಗೊಳಿಸಬೇಕು ಎಂದು ಬಾಧಿತಗೊಳ್ಳುವ ಅರಳದಿನ್ನಿ, ಯಲಗೂರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next