Advertisement
ಹೌದು, ಮಲಪ್ರಭಾ ಎಡದಂಡೆ ಹಾಗೂ ಘಟಪ್ರಭಾ ಬಲದಂಡೆ ಕಾಲುವೆಗಳು ನಿರ್ಮಾಣಗೊಂಡು 17 ವರ್ಷಕಳೆದಿವೆ. ಈ ಕಾಲುವೆಗಾಗಿ ಭೂಮಿ ಕೊಟ್ಟ ರೈತರು, ಇಂದಿಗೂನೀರು ಬರಲಿದೆ ಎಂದು ಬಕಪಕ್ಷಿಯಂತೆ ಕಾದು ಸುಸ್ತಾದರೆ ಹೊರತು ನೀರೇ ಬರಲಿಲ್ಲ. ನವಿಲುತೀರ್ಥ ಡ್ಯಾಂನಿಂದಮಲಪ್ರಭಾ ಎಡದಂಡೆ (ಬಾಳೇಕುಂದ್ರಿ ಕಾಲುವೆ) ಹಾಗೂಹಿಡಕಲ್ ಡ್ಯಾಂನಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ನೀರಾವರಿ ಕಲ್ಪಿಸಲು ಕರ್ನಾಟಕ ನೀರಾವರಿ ನಿಗಮದಿಂದ ಯೋಜನೆ ಕೈಗೊಂಡಿದೆ. ಆದರೆ, ಗೋಕಾಕ ತಾಲೂಕಿನ ಕೊನೆಹಳ್ಳಿಗಳು ಮತ್ತು ಬಾದಾಮಿ ತಾಲೂಕು ಕಾಕನೂರವರೆಗೆ ಮಾತ್ರ ಈ ಎರಡೂ ಕಾಲುವೆ ಜಾಲಕ್ಕೆ ನೀರು ಬರುತ್ತಿತ್ತು. ಕಾಲುವೆಯ ಕೊನೆ ಅಂಚಿನವರೆಗೂ ಒಮ್ಮೆಯೂ ನೀರುಹರಿದಿಲ್ಲ. ಹೀಗಾಗಿ ಹೊಲದಲ್ಲಿ ನೀರಾವರಿ ಕಾಲುವೆ ಇದ್ದರೂರೈತರು ಮಾತ್ರ ನೀರಿಲ್ಲದೇ ಒಣ ಕಾಲುವೆ ನೋಡುತ್ತ ಕಾಲ ಕಳೆಯುವ ಪ್ರಸಂಗವಿತ್ತು.
Related Articles
Advertisement
ಹೆರಕಲ್ ಬಳಿ ಜಾಕವೆಲ್: ಸಮುದ್ರ ಮಟ್ಟದಿಂದ 515 ಮೀ. ಎತ್ತರದಲ್ಲಿರುವ ಘಟಪ್ರಭಾ ನದಿ ಬಲದಂಡೆಯಹಳೆ ಹೆರಕಲ್ ಗ್ರಾಮದ ಬಳಿ ಜಾಕವೆಲ್ ಕಂ. ಪಂಪ್‌ಹೌಸ್ ನಿರ್ಮಿಸಿ ಆಲಮಟ್ಟಿ ಹಿನ್ನಿರಿನಿಂದ ನೀರನ್ನು ಎತ್ತಿ 28.40 ಕಿ.ಮೀ.ಎಂ.ಎಸ್. ಪೈಪ್‌ಲೈನ್ ಮೂಲಕ ಹೆರಕಲ್-ಅನಗವಾಡಿ ರಸ್ತೆ ಹೆದ್ದಾರಿ ಬದಿಯಲ್ಲಿ ಹಾಗೂ ವಿಜಯಪುರ-ಹುಬ್ಬಳ್ಳಿರಾಷ್ಟ್ರೀಯ ಹೆದ್ದಾರಿ 218 ರಸ್ತೆ ಬದಿಯಲ್ಲಿ ಸಮುದ್ರ ಮಟ್ಟದಿಂದ 584.40 ಮೀ ಎತ್ತರದಲ್ಲಿರುವ ಹೂಲಗೇರಿಬಳಿ ಡಿಲೆವರಿ ಚೆಂಬರ್ ನಿರ್ಮಿಸಿ 169.00ಕಿಮೀ ಬಲದಂಡೆಕಾಲುವೆಗೆ ನೀರು ಹರಿಸುವ ಮೂಲಕ ಮುಂದಿನ ಅಚ್ಚುಕಟ್ಟಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿತಗೊಂಡಿದೆ.
ಈ ಯೋಜನೆಯಿಂದಾಗಿ 169 ಕಿ.ಮೀ. ಘಟಪ್ರಭಾ ಬಲದಂಡೆ ಕಾಲುವೆ ಹಾಗೂ ಕೆರಕಲಮಟ್ಟಿ, ಮುಚಖಂಡಿ, ಬಾಗಲಕೋಟೆ, ಮಲ್ಲಾಪುರ, ಕಮತಗಿ, ಇಂಗಳಗಿ ವಿತರಣಾ ಕಾಲುವೆಗಳಿಗೂ ನೀರು ಸರಬರಾಜು ಮಾಡಲು ಸಾಧ್ಯವಿದೆ.
ಬಾದಾಮಿ, ಬಾಗಲಕೋಟೆ, ಬೀಳಗಿ ಕ್ಷೇತ್ರದ ಹೂಲಗೇರಿ, ಕಗಲಗೊಂಬ, ಸೂಳಿಕೇರಿ, ನೀರಲಕೇರಿ, ಶಿರೂರ, ಕಮತಗಿ, ಮಲ್ಲಾಪುರ, ನೀಲನಗರ, ಇಂಗಳಗಿ, ಕೆರಕಲಮಟ್ಟಿ, ಗಂಗನಬೂದಿಹಾಳ, ಬಂದಕೇರಿ, ಜಲಗೇರಿ ತಾಂಡಾ,ಕಲಬಂದಕೇರಿ, ಮುಚಖಂಡಿ, ಬಾಗಲಕೋಟೆ ಸೇರಿದಂತೆ 17 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.
ಬಜೆಟ್‌ಗೂ ಮುನ್ನ ಹಣ: ಪ್ರಸಕ್ತ ಸಾಲಿನ ರಾಜ್ಯದ ಬಜೆಟ್ ಅನ್ನು ಸೋಮವಾರವಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅದಕ್ಕೂ ಮುನ್ನ ಅಂದರೆ ಮಾ. 6ರಂದು ಕೆರೂರ ಏತ ನೀರಾವರಿ ಯೋಜನೆಗೆ ಹಣ ನೀಡಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕೆರೂರ ಏತ ನೀರಾವರಿ ಯೋಜನೆಗೆ ಒಟ್ಟು 525 ಕೋಟಿ ಹಣದ ಅವಶ್ಯಕತೆ ಇದ್ದು,ಈ ಕುರಿತು ಸಮಗ್ರ ಯೋಜನಾ ವರದಿ ಸಲ್ಲಿಕೆಯಾಗಿದೆ.ಈ ಯೋಜನೆಯನ್ನು ಮೂರು ಹಂತದಲ್ಲಿ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 310 ಕೋಟಿ, 2ನೇ ಹಂತದಲ್ಲಿ 110 ಕೋಟಿ ಹಾಗೂ 3ನೇ ಹಂತದಲ್ಲಿ 105 ಕೋಟಿ ಅನುದಾನ ನೀಡಲಾಗುತ್ತಿದೆ. ಸಧ್ಯ ಮೊದಲ ಹಂತದ 310 ಕೋಟಿ ಮೊತ್ತದ ಟೆಂಡರ್ ಕರೆಯಲು ಆದೇಶ ಕೂಡ ನೀಡಲಾಗಿದೆ.
ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆ: ಕೆರೂರ ಏತ ನೀರಾವರಿಯೋಜನೆಯನ್ನು ಸೂಕ್ಷ್ಮ ನೀರಾವರಿ ಪದ್ಧತಿಗೆ ಅಳವಡಿಸಲುನಿರ್ಧರಿಸಲಾಗಿದೆ. ಈ ಮೊದಲು ಈ ಯೋಜನೆಗೆ 3.10 ಟಿಎಂಸಿ ಅಡಿ ನೀರಿನ ಬೇಡಿಕೆ ಸಲ್ಲಿಸಲಾಗಿತ್ತು. ಕಾಲುವೆಮೂಲಕ ನೀರಾವರಿ ಕಲ್ಪಿಸುವ ಬದಲು ಸೂಕ್ಷ್ಮ ನೀರಾವರಿ ಪದ್ಧತಿಯಿಂದ ನೀರಿನ ಉಳಿತಾಯ ಕೂಡ ಆಗಲಿದೆ. ಅಲ್ಲದೇಬಾದಾಮಿ, ಬಾಗಲಕೋಟೆ ಹಾಗೂ ಬೀಳಗಿ ಮತಕ್ಷೇತ್ರವ್ಯಾಪ್ತಿಯ 16 ಸಾವಿರ ಹೆಕ್ಟೇರ್ ಭೂಮಿಗೆ ಸೂಕ್ಷ್ಮ ನೀರಾವರಿ ಪದ್ಧತಿ ಒದಗಿಲು ಈ ಯೋಜನೆಯಡಿ ಒಟ್ಟು 2 ಟಿಎಂಸಿ ಅಡಿ ನೀರನ್ನು ಕೃಷ್ಣಾ ಭಾಗ್ಯ ಜಲ ನಿಗಮ, 3ನೇ ಹಂತದ ಯೋಜನೆಯಡಿ ಒಪ್ಪಿಗೆ ನೀಡಿದೆ.
ಕೆರೂರ ಏತ ನೀರಾವರಿ ಯೋಜನೆಯಿಂದ ಬಾದಾಮಿ,ಬೀಳಗಿ ಕ್ಷೇತ್ರದ 16 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡಲಿದೆ. ಈ ಯೋಜನೆಗಾಗಿ ಹಲವು ವರ್ಷಗಳಿಂದ ನಿರಂತರ ಪ್ರಯತ್ನನಡೆದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕಬಜೆಟ್‌ನಲ್ಲಿ ಘೋಷಣೆ ಕೂಡ ಆಗಿತ್ತು. ಪ್ರವಾಹ,ಕೊರೊನಾ ಹಿನ್ನೆಯಲ್ಲಿ ಅನುದಾನ ನೀಡಲು ಆಗಿರಲಿಲ್ಲ.ಇದೀಗ ಯೋಜನೆಗೆ ಮೊದಲ ಹಂತದಲ್ಲಿ 310ಕೋಟಿ ಮಂಜೂರು ಮಾಡಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ. ಈ ಭಾಗದ ರೈತರ ಬಹುದಿನಗಳ ಬೇಡಿಕೆ ಈಡೇರಿದೆ. -ಮುರುಗೇಶ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ
ರೈತರ ಇದೊಂದು ಬಹುದಿನಗಳ ಬೇಡಿಕೆ ಇದಾಗಿತ್ತು.ಸಿದ್ದರಾಮಯ್ಯ ಅವರು ಬಾದಾಮಿಕ್ಷೇತ್ರದಿಂದ ಆಯ್ಕೆಯಾದ ದಿನದಿಂದಲೂ ಇದಕ್ಕಾಗಿ ನಿರಂತರ ಪ್ರಯತ್ನಿಸುತ್ತಿದ್ದರು.2019-20ನೇ ಸಾಲಿನ ಘೋಷಣೆಯಾಗಿದ್ದರೂ ಯೋಜನೆಗೆ ಹಣ ಕೊಟ್ಟಿರಲಿಲ್ಲ. ಈ ಬಾರಿ ನೀರಾವರಿಸಚಿವರಾಗಿದ್ದ ರಮೇಶ ಜಾರಕಿಹೊಳಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ನಿರಂತರ ಒತ್ತಡತಂದು, ಹಣ ತರುವಲ್ಲಿ ಸಿದ್ದರಾಮಯ್ಯನವರುಯಶಸ್ವಿಯಾಗಿದ್ದಾರೆ. ಇದರಿಂದ ಕ್ಷೇತ್ರದ ರೈತರಭೂಮಿಗೆ ನೀರು ದೊರೆಯಲಿದೆ. ಹೊಳಬಸು ಶೆಟ್ಟರ, ಕಾಂಗ್ರೆಸ್ ಮುಖಂಡ, ಸಿದ್ದರಾಮಯ್ಯ ಅವರ ಆಪ್ತ, ಗುಳೇದಗುಡ್ಡ
-ಶ್ರೀಶೈಲ ಕೆ. ಬಿರಾದಾರ