Advertisement

ಕ್ರಿಸ್ಮಸ್ ಹಬ್ಬಕ್ಕೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಸ್ಪೆಷೆಲ್ ಗಿಫ್ಟ್  

02:54 PM Aug 03, 2021 | Team Udayavani |

ಹೈದರಾಬಾದ್ : ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ನಟಿಸುರವ ಬಹುನಿರೀಕ್ಷಿತ ಪುಷ್ಪ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ವರ್ಷದ ಕೊನೆಯಲ್ಲಿ ಪುಷ್ಪ ಬೆಳ್ಳಿ ಪರದೆ ಮೇಲೆ ಅರಳಲಿದ್ದು ಇಂದು ಅಧಿಕೃತ ಡೇಟ್ ಅನೌನ್ಸ್ ಆಗಿದೆ.

Advertisement

ಅಂದಹಾಗೆ ಪುಷ್ಟ ಸಿನಿಮಾ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಅವರು ತಮ್ಮ ಸಿನಿಮಾ ರಿಲೀಸ್ ಡೇಟ್ ನ್ನು ಟ್ವಿಟ್ ಮಾಡಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಅಲ್ಲು ಅರ್ಜುನ್ ಜೊತೆ ಕರುನಾಡ ಕ್ರಷ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ‘ಪುಷ್ಪ’ ತೆಲುಗು, ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ರಿಲೀಸ್ ಆಗಲಿದೆ. ನಟ ಧನಂಜಯ ಒಂದು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್‌ 13ರಂದು ರಿಲೀಸ್ ಆಗಬೇಕಿದ್ದ ಈ ಸಿನಿಮಾ ಈಗ ಕ್ರಿಸ್‌ಮಸ್‌ಗೆ ರಿಲೀಸ್ ಆಗಲಿದೆ.

ಡಿಸೆಂಬರ್ ನಲ್ಲಿ ಸ್ಟಾರ್ ಸಿನಿಮಾಗಳ ದಂಗಲ್ !

ಈ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಬಹುತೇಕ್ ಬಿಗ್ ಸ್ಟಾರ್ ಗಳ ಸಿನಿಮಾಗಳು ತೆರೆಯ ಮೇಲೆ ಮುಖಾಮುಖಿಯಾಗಲಿರುವುದು ಪಕ್ಕಾ ಆಗಿದೆ. ಬಾಲಿವುಡ್ ನಟ ಆಮೀರ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದ  ಡಿಸೆಂಬರ್ 24ರಂದು ತೆರೆಗೆ ಬರುವ ಸಾಧ್ಯತೆ ಇದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next