ಮುಂಬೈ: ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಜನಪ್ರಿಯ ಶೋಗಳಲ್ಲಿ ಒಂದಾಗಿದ್ದು, ಈಗಾಗಲೇ ಸೆಲೆಬ್ರಿಟಿಗಳಾದ ರಣ್ ವೀರ್ ಸಿಂಗ್, ಅಲಿಯಾ ಭಟ್, ವಿಜಯ್ ದೇವರ ಕೊಂಡ, ಅನನ್ಯ ಪಾಂಡೆ, ಅಕ್ಷಯ್ ಕುಮಾರ್, ಸಮಂತ್ ರುತ್ ಪ್ರಭು, ಅಮೀರ್ ಖಾನ್, ಕರೀನಾ ಕಪೂರ್ ಖಾನ್, ಕತ್ರಿನಾ ಕೈಫ್ ಸೇರಿಂದತೆ ಹಲವಾರು ನಟ-ನಟಿಯರು ಶೋನಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ:ಐದು ಸಲ ಗೆದ್ದೆ, ಅಲ್ಲೂ ಇಲ್ಲ, ಇಲ್ಲೂ ಮಂತ್ರಿ ಸ್ಥಾನವೂ ಕೊಡಲಿಲ್ಲ! ಎನ್ ವೈ ಜಿ ಅಸಮಧಾನ
ಇದೀಗ ಮುಂಬರು ಕಾಫಿ ವಿತ್ ಕರಣ್ ಎಂಟನೇ ಸೀಸನ್ ಅಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಪ್ರಸಾರವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ವರದಿಯ ಪ್ರಕಾರ, ಸೀಸನ್ 8ರಲ್ಲಿ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಹವಾ ಎಬ್ಬಿಸಿರುವ ಕೆಜಿಎಫ್ ನಟ ಯಶ್, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ, ಪುಪ್ಪ ಖ್ಯಾತಿಯ ಅಲ್ಲು ಅರ್ಜುನ್, ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಈ ಬಾರಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಬಾಲಿವುಡ್ ಹಂಗಾಮ ವರದಿ ತಿಳಿಸಿದೆ.
ಕಾಫಿ ವಿತ್ ಕರಣ್ ಸೀಸನ್ 7ರಂತೆ ಹೊಸ ಸೀಸನ್ (8ರಲ್ಲಿ) ನಲ್ಲಿ ವೀಕ್ಷಕರಿಗಾಗಿ ಹೊಸ ಅನುಭವ ನೀಡುವಂತಹ ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸುವ ಶೋ ಇದಾಗಿರಲಿದೆ ಎಂದು ಮೂಲಗಳು ಹೇಳಿವೆ.
ಈವರೆಗಿನ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ, ನಟಿಯರೇ ಹೆಚ್ಚಾಗಿ ಭಾಗವಹಿಸಿದ್ದರು. ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಗಳಿಸಿದ ಪರಿಣಾಮ ಸೀಸನ್ 8ರಲ್ಲಿ ದಕ್ಷಿಣ ಭಾರತದ ಸ್ಟಾರ್ ನಟ, ನಟಿಯರನ್ನು ಆಹ್ವಾನಿಸಲು ಕರಣ್ ತಂಡ ನಿರ್ಧರಿಸಿರುವುದಾಗಿ ವರದಿ ವಿವರಿಸಿದೆ.
ಕಾಫಿ ವಿತ್ ಕರಣ್ ಶೋನಲ್ಲಿ ಸ್ಯಾಂಡಲ್ ವುಡ್ ನ ಯಶ್, ರಿಷಬ್ ಶೆಟ್ಟಿ ಹಾಗೂ ತೆಲುಗಿನ ಅಲ್ಲು ಅರ್ಜುನ್ ಭಾಗವಹಿಸುವ ಕುರಿತು ಕರಣ್ ಜೋಹರ್ ಈವರೆಗೂ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ ಎಂದು ವರದಿ ತಿಳಿಸಿದೆ.