Advertisement

ಆಲ್‌ರೌಂಡರ್‌ಗಳ ಪಾತ್ರನಿರ್ಣಾಯಕ

02:58 AM May 17, 2019 | Sriram |

ನವದೆಹಲಿ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಆಲ್ರೌಂಡರ್‌ ಪಾತ್ರ ನಿರ್ಣಾಯಕವಾಗಲಿದೆ ಎಂದು ಮಾಜಿ ಆಲ್ರೌಂಡರ್‌, 1983ರ ವಿಶ್ವಕಪ್‌ ಹೀರೋ ಮೊಹಿಂದರ್‌ ಅಮರ್‌ನಾಥ್‌ ಹೇಳಿದ್ದಾರೆ.

Advertisement

ತಂಡವೊಂದರ ಯಶಸ್ಸಿನಲ್ಲಿ ಆಲ್ರೌಂಡರ್‌ ನಿರ್ಣಾಯಕ ಪಾತ್ರ ಮಹತ್ವದ್ದಾಗಿರಲಿದೆ. ಬೌಲಿಂಗ್‌ ಮತ್ತು ಬ್ಯಾಟಿಂಗ್‌ಗಳೆರಡರಲ್ಲೂ ಆತ ಪರಿಣತನಾಗಿರಬೇಕು. ತಂಡಕ್ಕೆ ಹಿನ್ನಡೆಯಾದಾಗಲೆಲ್ಲ ಜವಾಬ್ದಾರಿಯುತ ಪ್ರದರ್ಶನ ನೀಡುವ ಕೌಶಲ ಆತನಲ್ಲಿರಬೇಕು’ ಎಂದು ಮೊಹಿಂದರ್‌ ಅಭಿಪ್ರಾಯಪಟ್ಟಿದ್ದಾರೆ.

ಓರ್ವ ಆಟಗಾರ ತನ್ನ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿದಾಗ ಆತನಿಂದ ಉತ್ತಮ ಆಟ ನಿರೀಕ್ಷಿಸಬಹುದು. ಆಟದಲ್ಲಿ ಏರುಪೇರು ಸಹಜ. ಇದನ್ನು ಅರ್ಥೈಸಿಕೊಳ್ಳುವ ಮನಸ್ಥಿತಿ ಹೊಂದಿದ್ದರಷ್ಟೇ ಯಶಸ್ಸು ಸಾಧ್ಯ’ ಎಂದರು. ಮೊಹಿಂದರ್‌ ಅಮರ್‌ನಾಥ್‌ ಭಾರತದ ಪರ 69 ಟೆಸ್ಟ್‌, 85 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇತ್ತೀಚೆಗೆ ಸಿಯೆಟ್ ಅಂತಾರಾಷ್ಟ್ರೀಯ ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next