Advertisement

ಇನ್ನು ಪಿಂಚಣಿಗೆ ಪತಿ ಬದಲು ಮಕ್ಕಳನ್ನು ನಾಮನಿರ್ದೇಶನ ಮಾಡಲು ಅವಕಾಶ

09:06 PM Jan 02, 2024 | Pranav MS |

ನವದೆಹಲಿ: ವೈವಾಹಿಕ ಭಿನ್ನಾಭಿಪ್ರಾಯವಿರುವ ಸಂದರ್ಭಗಳಲ್ಲಿ ಮಹಿಳಾ ಸರ್ಕಾರಿ ಉದ್ಯೋಗಿಯು ತನ್ನ ಪತಿಯ ಬದಲು, ತನ್ನ ಮಗು ಅಥವಾ ಮಕ್ಕಳ ಹೆಸರನ್ನು ಕುಟುಂಬ ಪಿಂಚಣಿಗೆ ನಾಮನಿರ್ದೇಶನ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Advertisement

ಕೇಂದ್ರೀಯ ನಾಗರಿಕ ಸೇವೆಗಳ(ಪಿಂಚಣಿ) ನಿಯಮಗಳು, 2021ರ ನಿಯಮ 50ರ ಪ್ರಕಾರ, ಸರ್ಕಾರಿ ಉದ್ಯೋಗಿ ಅಥವಾ ನಿವೃತ್ತ ಸರ್ಕಾರಿ ಉದ್ಯೋಗಿಯ ಮರಣದ ನಂತರ ಕುಟುಂಬ ಪಿಂಚಣಿಯನ್ನು ಮಂಜೂರು ಮಾಡಬಹುದಾಗಿದೆ. ಪ್ರಸ್ತುತ, ಸರ್ಕಾರಿ ಉದ್ಯೋಗಿ ಮರಣ ಹೊಂದಿದರೆ, ಪಿಂಚಣಿಯನ್ನು ಪತಿ/ಪತ್ನಿಗೆ ಮೊದಲು ನೀಡಲಾಗುತ್ತದೆ. ಮೃತ ಸರ್ಕಾರಿ ಉದ್ಯೋಗಿಯ ಸಂಗಾತಿ ಕುಟುಂಬ ಪಿಂಚಣಿಗೆ ಅನರ್ಹರಾದರೆ ಅಥವಾ ಮೃತಪಟ್ಟರೆ, ಇತರೆ ಕುಟುಂಬದ ಸದಸ್ಯರು ಪಿಂಚಣಿಗೆ ಅರ್ಹರಾಗುತ್ತಾರೆ.

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಇದೀಗ ನಿಯಮಗಳಿಗೆ ತಿದ್ದುಪಡಿ ತಂದಿದೆ. ವೈವಾಹಿಕ ಭಿನ್ನಾಭಿಪ್ರಾಯವಿರುವ ಸಂದರ್ಭಗಳಲ್ಲಿ ಮಹಿಳಾ ಸರ್ಕಾರಿ ಉದ್ಯೋಗಿಯು ತನ್ನ ಮಗು ಅಥವಾ ಮಕ್ಕಳನ್ನು ಕುಟುಂಬ ಪಿಂಚಣಿಗೆ ನಾಮಿನಿಯನ್ನಾಗಿ ನೇಮಿಸಬಹುದು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next