ಕೆಲವು ಗ್ರಾ.ಪಂ.ಗಳು ತಮಗೆ ಲಾಭವಾಗಬೇಕು ಎಂಬು ದಕ್ಕಾಗಿ ಕೈಗಾರಿಕಾ ಕಟ್ಟಡಗಳಿಗೆ ನಿಗದಿತ ಮಾನ ದಂಡವನ್ನು ಬಿಟ್ಟು ಇಚ್ಛಾ ನುಸಾರ ತೆರಿಗೆ ವಸೂಲು ಮಾಡುತ್ತಿವೆ ಎಂಬ ದೂರಿತ್ತು. ಈ ಹಿನ್ನೆಲೆಯಲ್ಲಿ ಕೈಗಾರಿಕೆ ಸ್ನೇಹಿ ನೀತಿಯನ್ವಯ ಮತ್ತು ತೆರಿಗೆಯಲ್ಲಿ ಏಕರೂಪತೆ ತರುವುದಕ್ಕಾಗಿ ಸರಕಾರ ಈ ಸೂಚನೆ ನೀಡಿದೆ.
Advertisement
ಸರಕಾರದ ಸೂಚನೆಯ ಪ್ರಕಾರ ಅತಿ ಸಣ್ಣ ಕೈಗಾರಿಕೆ ಅಥವಾ ಇತರ ಅತಿಸಣ್ಣ ಘಟಕಗಳಿಗೆ ಮತ್ತು ಸಣ್ಣ ಕೈಗಾರಿಕೆ ಅಥವಾ ಇತರ ಸಣ್ಣ ಘಟಕಗಳಿಗೆ ಶೇ.0.4 ತೆರಿಗೆ ವಿಧಿಸಲು ಮಾತ್ರ ಅವಕಾಶವಿದೆ. ಮಧ್ಯಮ ಕೈಗಾರಿಕೆ ಅಥವಾ ಮಧ್ಯಮ ಘಟಕಗಳಿಗೆ ಶೇ.0.5 ಮತ್ತು ಭಾರೀ ಕೈಗಾರಿಕೆ ಅಥವಾ ಭಾರೀ ಘಟಕಗಳಿಗೆ ಶೇ 0.6ರಷ್ಟು ಮಾತ್ರ ಅವಕಾಶವಿದೆ.
ಖಾಲಿ ಇರುವ ಜಾಗದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಬಳಸುವ ಭಾಗಕ್ಕೆ ಶೇ.0.05 ತೆರಿಗೆ ವಿಧಿಸಲು ಸರಕಾರ ಅವಕಾಶ ನೀಡಿದೆ. ಬಳಸದೆ ಇರುವ ಖಾಲಿ ಜಾಗಕ್ಕೆ ಶೇ.0.02 ವಿಧಿಸಲು ಸೂಚಿಸಲಾಗಿದೆ. ರಸ್ತೆ, ಆಲಂಕಾರಿಕ ಉದ್ಯಾನವನ, ಪರಿಸರ ಸಂರಕ್ಷಣೆ ಮತ್ತು ಹಸುರೀಕರಣಕ್ಕಾಗಿ ಉಳಿಸಿರುವ ಜಾಗಕ್ಕೆ ತೆರಿಗೆ ವಿಧಿಸ ಬಾರದು ಎಂದು ಸ್ಪಷ್ಟಪಡಿಸಿದೆ. ಗ್ರಾಮ ಪಂಚಾಯತ್‌ಗಳು ಕೈಗಾರಿಕೆಗಳ ಕಟ್ಟಡ ಗಳಿಗೆ ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂ.ರಾಜ್ ಅಧಿನಿಯಮ 1993ರ ಪ್ರಕರಣ 199 ಮತ್ತು ಅನುಸೂಚಿ-4ರಲ್ಲಿ ನಿರ್ದಿಷ್ಟಪಡಿಸಿರುವ ಕನಿಷ್ಠ ದರವಾದ ಶೇ.0.4ರಿಂದ ಗರಿಷ್ಠ ಶೇ.0.6ರವರೆಗೆ ಮಾತ್ರ ವಿಧಿಸಿ ಕರ ನಿರ್ಧರಣೆ ಮಾಡಲು ಈ ಹಿಂದೆಯೇ ತಿಳಿಸಿತ್ತು. ಆದರೆ ಅದನ್ನು ಕೆಲವು ಗ್ರಾ.ಪಂಗಳು ಪಾಲಿಸುತ್ತಿಲ್ಲ ಎಂದು ಕೈಗಾರಿಕಾ ವಲಯದಿಂದ ಆಕ್ಷೇಪ ವ್ಯಕ್ತವಾಗಿತ್ತು.
Related Articles
ಕೈಗಾರಿಕಾ ಪ್ರದೇಶಗಳ ಆಸ್ತಿ ತೆರಿಗೆ ಸಂಗ್ರಹಿಸುವ ಹೊಣೆಗಾರಿಕೆಯನ್ನು ಸರಕಾರ ಗ್ರಾ.ಪಂ.ಗಳ ಬದಲಿಗೆ ಕೆಐಎಡಿಬಿಗೆ ಇತ್ತೀಚೆಗೆ ವಹಿಸಿದೆ. ಹೀಗಾಗಿ ಕೈಗಾರಿಕಾ ಪ್ರದೇಶಗಳ ಆಸ್ತಿ ತೆರಿಗೆಯನ್ನು ಪಿಡಿಒಗಳು ನೇರವಾಗಿ ವಸೂಲು ಮಾಡಬಾರದು ಎಂದು ಸರಕಾರ ಸೂಚಿಸಿದೆ. ಬದಲಾಗಿ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ಪ್ರದೇಶಗಳ ಸ್ವತ್ತುಗಳ ಆಸ್ತಿ ತೆರಿಗೆಯನ್ನು ಲೆಕ್ಕಾಚಾರ ಮಾಡಿ ಘಟಕಗಳ ಪಟ್ಟಿಯೊಂದಿಗೆ ಕೆಐಎಡಿಬಿಗೆ ಸಲ್ಲಿಸಬೇಕು. ಕೆಐಎಡಿಬಿಯು ಆನ್‌ಲೈನ್ ಮೂಲಕ ತೆರಿಗೆ ಸಂಗ್ರಹಿಸಿ ಆಯಾ ಗ್ರಾ.ಪಂ.ಗಳಿಗೆ ಪಾವತಿಸಲಿದೆ.
Advertisement
ಕೈಗಾರಿಕೆಗಳಿಗೆ ಏಕರೂಪದ ತೆರಿಗೆಕೆಲವು ಗ್ರಾ.ಪಂ.ಗಳು ಕೈಗಾರಿಕಾ ಕಟ್ಟಡಗಳಿಗೆ ನಿಗದಿತ ದರವಲ್ಲದೆ ತಮ್ಮ ಇಚ್ಛಾನುಸಾರ ತೆರಿಗೆ ನಿಗದಿಪಡಿಸಿದ್ದರಿಂದ ಕೈಗಾರಿಕೆಗಳಿಗೆ ತೊಂದರೆ ಆಗುತ್ತಿದೆ. ಹೀಗಾಗಿ ತೆರಿಗೆಯಲ್ಲಿ ಏಕರೂಪತೆ ತರುವುದಕ್ಕಾಗಿ ಸರಕಾರ ಗ್ರಾ.ಪಂ.ಗಳಿಗೆ ಸೂಚನೆ ನೀಡಿದೆ.
– ಗೋಕುಲ್‌ದಾಸ್ ನಾಯಕ್,
ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ದ.
- ದಿನೇಶ್ ಇರಾ