Advertisement

ಜಾತ್ರೆೆ,ರಥೋತ್ಸವ ಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅನುಮತಿ ನೀಡಿ : ಮನವಿ

07:30 PM Mar 21, 2022 | Team Udayavani |

ಉಡುಪಿ: ಕಾಪು ಮಾರಿಗುಡಿ ಜಾತ್ರೆೆ ಸೇರಿದಂತೆ ಕರಾವಳಿಯ ಉತ್ಸವ, ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುಮತಿ ನೀಡಬೇಕು ಎಂದು ಬೀದಿಬದಿ ವ್ಯಾಪಾರಿಗಳ ಹಾಗೂ ಜಾತ್ರೆೆ ವ್ಯಾಪಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರೀಫ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

Advertisement

ಹಿಜಾಬ್ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಮುಸ್ಲಿಂ ವ್ಯಾಪಾರಿಗಳು ಬಂದ್ ಮಾಡಿದ್ದಕ್ಕೆೆ ಹಿಂದೂಗಳ ಧಾರ್ಮಿಕ ಉತ್ಸವದಲ್ಲಿ ವ್ಯಾಪಾರ ವಹಿವಾಟಿಗೆ ನಿರ್ಬಂಧ ಹಾಕಲಾಗುತ್ತಿದೆ. ನಾವೆಲ್ಲ ಬೀದಿಬದಿ ವ್ಯಾಪಾರಿಗಳಾಗಿದ್ದು ಬಂದ್‌ಗೆ ಬೆಂಬಲ ನೀಡಿರಲಿಲ್ಲ. ಆದರೂ ನಮ್ಮ ವ್ಯಾಾಪಾರಕ್ಕೆೆ ಅಡ್ಡಿಪಡಿಸಲಾಗುತ್ತಿದೆ. ದಶಕಗಳಿಂದಲೂ ಹಿಂದೂಗಳ ಧಾರ್ಮಿಕ ಉತ್ಸವ, ಜಾತ್ರೆೆಯಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ಸೌಹಾರ್ದಯುತವಾಗಿ ಬದುಕುತ್ತಿದ್ದೇವೆ. ಇತ್ತೀಚೆಗೆ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇತ್ತೀಚೆಗೆ ನಡೆದ ರಥೋತ್ಸವವೊಂದರಲ್ಲೂ ವ್ಯಾಪಾರಕ್ಕೆೆ ಅನುಮತಿ ನೀಡಿರಲಿಲ್ಲ. ಕಾಪು ಮಾರಿ ಜಾತ್ರೆೆಗೂ ನಿರ್ಬಂಧ ವಿಧಿಸಲಾಸಲಾಗುತ್ತಿದೆ. ಹಲವು ವರ್ಷಗಳಿಂದ ಮಾರಿ ಜಾತ್ರೆೆಯಲ್ಲಿ ವ್ಯಾಪಾರ ಮಾಡಿಕೊಂಡು ಬಂದಿದ್ದು, ಹಿಂದಿನಂತೆಯೇ ಅವಕಾಶ ನೀಡಬೇಕು. ಹಿಂದೂಗಳ ಭಾವನೆಗೆ ಧಕ್ಕೆೆಯಾಗದಂತೆ ನಡೆದುಕೊಂಡಿದ್ದೇವೆ. ಮುಂದೆಯೂ ನಡೆದುಕೊಳ್ಳುತ್ತೇವೆ ಎಂದರು.

ಒಕ್ಕೂಟದ ಇಬ್ರಾಹಿಂ ತೌಫಿಕ್, ಹಮೀದ್ ನೇಜಾರು, ಶಾಹಿದ್ ನೇಜಾರು, ಯಾಸಿನ್ ಕೆಮ್ಮಣ್ಣು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next