ಹೊಸದಿಲ್ಲಿ: ಪ್ರಸ್ತುತ, ಹಲವಾರು ಸರಕಾರಿ ಯೋಜನೆಗಳಿಗೆ, ಬ್ಯಾಂಕ್ ಖಾತೆಗಳಿಗೆ, ಮೊಬೈಲ್ ಸಂಖ್ಯೆಗಳಿಗೆ ನಿಮ್ಮ ಆಧಾರ್ ಸಂಖ್ಯೆಯ ಜೋಡಣೆ ಕಡ್ಡಾಯವಾಗಿದೆ. ಆದರೆ, ನಿಮಗೆ ಸಂಬಂಧಿಸಿದ ಎಷ್ಟು ಸವಲತ್ತುಗಳಿಗೆ ನೀವು ಆಧಾರ್ ಲಿಂಕ್ ಮಾಡಿದ್ದೀರಿ ಎಂಬುದನ್ನು ತಾಳೆ ಹಾಕಲು ಅಥವಾ ನೀವು ಲಿಂಕ್ ಮಾಡಿದ ಆಧಾರ್ ಸಂಖ್ಯೆ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಎಲ್ಲಾದರೂ ಸೋರಿಕೆಯಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಆಸ್ಪದ ಕಲ್ಪಿಸಿದೆ. ಅದರಂತೆ, ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು.
– https://resident.uidai.gov.in/notification-aadhaar ಈ ವೆಬ್ ವಿಳಾಸಕ್ಕೆ ಭೇಟಿ ನೀಡಿ.
– ವೆಬ್‌ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ ಕೇಳಲಾಗು ತ್ತದೆ. ನಿಗದಿತ ಜಾಗದಲ್ಲಿ ಆ ಸಂಖ್ಯೆ ನಮೂದಿಸಿ.
– ನಂತರ, ಅದೇ ಪುಟದಲ್ಲಿ ದಿನಾಂಕ, ಸಮಯ, ಆಧಾರ್ ದೃಢೀಕರಣ ನಮೂನೆಗಳಿಗೆ ಸಂಬಂಧಪಟ್ಟಂತೆ ಇರುವ ಖಾಲಿ ಸ್ಥಳಗಳನ್ನು ತುಂಬಿರಿ.
– ಆನಂತರ, ಜನರೇಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ.