Advertisement

SC; ಅಲೋಪತಿ, ಆಯುರ್ವೇದ: ಸಮಾನ ಸ್ಟೈಪಂಡ್‌ಗೆ ನಕಾರ

01:08 AM Jan 10, 2024 | Team Udayavani |

ಹೊಸದಿಲ್ಲಿ: ಅಲೋಪತಿ ಪಿಜಿ ವಿದ್ಯಾರ್ಥಿ ಗಳು ನಿರ್ವಹಿಸುವಂತಹದ್ದೇ ಕರ್ತವ್ಯಗಳನ್ನು ಅಯುರ್ವೇದ ಪಿಜಿ ವಿದ್ಯಾರ್ಥಿಗಳು ನಿರ್ವಹಿಸುವುದಿಲ್ಲ. ಹಾಗಾಗಿ ಇಬ್ಬರಿಗೆ ಪಾವತಿ ಸುವ ಸ್ಟೈಪಂಡ್‌ ಸಮನಾಗಿ ಇರಬೇಕೆಂದು ಹೇಳಲಾಗದು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

Advertisement

ಈ ಮೂಲಕ ಇಬ್ಬರಿಗೂ ಸಮಾನ ಸ್ಟೈಪಂಡ್‌ ನೀಡಬೇಕೆಂಬ ಮಧ್ಯಪ್ರದೇಶ ಹೈಕೋರ್ಟ್‌ ಆದೇಶವನ್ನು ವಜಾ ಮಾಡಿ ದೆ. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮಧ್ಯ ಪ್ರದೇಶ ಸರಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಬಿ.ಆರ್‌.ಗವಾಯ್‌ ಮತ್ತು ನ್ಯಾ| ಸಂದೀಪ್‌ ಮೆಹ್ತಾ ಅವರಿದ್ದ ನ್ಯಾಯಪೀಠ, ಆಯು ರ್ವೇದ ವೈದ್ಯರ ಪ್ರಾಮುಖ್ಯ ಮತ್ತು ಪರ್ಯಾಯ ಅಥವಾ ಸ್ಥಳೀಯ ವೈದ್ಯಕೀ ಯ ಪದ್ಧತಿಗಳನ್ನು ಉತ್ತೇಜಿಸುವ ಅಗತ್ಯ ಗುರುತಿಸುವಾಗಲೂ, ಎರಡೂ ವರ್ಗದ ವೈದ್ಯರು ಸಮಾನ ವೇತನಕ್ಕೆ ಅರ್ಹರಾಗ ಲು ಸಮಾನ ಕೆಲಸವನ್ನು ನಿರ್ವಹಿಸುತ್ತಿಲ್ಲ ಎಂಬ ಅಂಶವನ್ನು ನಾವು ಮರೆಯುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಅಲೋ ಪತಿ ಪಿಜಿ ವಿದ್ಯಾರ್ಥಿಗಳ ರೀತಿಯಲ್ಲೇ ತಮಗೂ ಸಮಾನ ಸ್ಟೈಪಂಡ್‌ ನೀಡಬೇಕೆಂದು ಕೋರಿ ಮಧ್ಯಪ್ರದೇಶದ ಅಯುರ್ವೇದ ವಿದ್ಯಾರ್ಥಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಅದ ನ್ನು ಹೈಕೋರ್ಟ್‌ ಮಾನ್ಯ ಮಾಡಿತ್ತು. ಆ ಆದೇಶವನ್ನು ಸುಪ್ರೀಂ ರದ್ದುಗೊಳಿಸಿದೆ. ಕರ್ನಾಟಕದಲ್ಲಿ ಅಲೋಪತಿ ಪಿಜಿ ವಿದ್ಯಾರ್ಥಿಗಳಿಗೆ ಸ್ಟೈಪಂಡ್‌ ಸರಾಸರಿ 45,000 ರೂ. ಇದ್ದರೆ, ಅಯುರ್ವೇದ ವಿದ್ಯಾರ್ಥಿಗಳಿಗೆ 30,000ರೂ. ಇದೆ.

Advertisement

Udayavani is now on Telegram. Click here to join our channel and stay updated with the latest news.

Next