Advertisement

ಏಳು ರಸ್ತೆಗೆ ಅನುದಾನ ಮಂಜೂರು: ಶಕುಂತಳಾ

04:00 PM Oct 29, 2017 | |

ವಿಟ್ಲ: ಲೋಕೋಪಯೋಗಿ ಇಲಾಖೆಯ 50-54 ಯೋಜನೆಯಡಿ ಒಂದು ಬಾರಿ ಅಭಿವೃದ್ಧಿ ಶೀರ್ಷಿಕೆಯಡಿ ರಸ್ತೆ ಅಭಿವೃದ್ಧಿ ಪಡಿಸುವ ಹೊಸ ಯೋಜನೆಯಡಿಯಲ್ಲಿ ಈ ಕ್ಷೇತ್ರದ ಏಳು ರಸ್ತೆಯ ಅಭಿವೃದ್ಧಿಗಾಗಿ ಅನುದಾನ ಮಂಜೂರಾಗಿತ್ತು. ಆರು ರಸ್ತೆಗಳ ಗುದ್ದಲಿ ಪೂಜೆ ಈಗಾಗಲೇ ನೆರವೇರಿಸಲಾಗಿದೆ. ಬದನಾಜೆ-ಕುಂಡಡ್ಕ-ಪರಿಯಾಲ್ತಡ್ಕ ರಸ್ತೆಗೂ 1.20 ಕೋ.ರೂ. ಅನುದಾನ ಮಂಜೂರಾಗಿತ್ತು. ಆದರೆ ಅಷ್ಟೊಂದು ಕಡಿಮೆ ಮೊತ್ತದಲ್ಲಿ ಈ ರಸ್ತೆ ಅಭಿವೃದ್ಧಿಪಡಿಸಲು ಕಷ್ಟ ಎಂದು ಎಂಜಿನಿಯರ್‌ ಅವರು ತಿಳಿಸಿದ ಹಿನ್ನೆಲೆಯಲ್ಲಿ ಅಳಕೆಮಜಲಿಗಾಗಿ ಮಂಜೂರಾದ ಒಂದು ಕೋ.ರೂ. ಅನುದಾನವನ್ನು ಈ ರಸ್ತೆಗೆ ಬಳಸಲಾಗಿದೆ. ಆದುದರಿಂದ ಟೆಂಡರ್‌ ಪ್ರಕಟಿಸಲು ತಡವಾಗಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

Advertisement

ವಿಟ್ಲ-ವಿಟ್ಲಮುಟ್ನೂರು ಗ್ರಾಮ ಸಂಪರ್ಕಿಸುವ ಬದನಾಜೆ-ಕುಂಡಡ್ಕ- ಪರಿಯಾಲ್ತಡ್ಕ ರಸ್ತೆಗೆ ಶನಿವಾರ ಬದನಾಜೆಯಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಅಪಪ್ರಚಾರ
ಇದರ ಲಾಭ ಗಳಿಸಲು ಕೆಲವರು ಪ್ರತಿಭಟನೆ ಆಯೋಜಿಸಿದರು. ಹಿಂದಿನ ಅವಧಿಗಳಲ್ಲಿ ಬಿಜೆಪಿಗೆ ಈ ರಸ್ತೆ ಅಭಿವೃದ್ಧಿ ಮಾಡಿಸಲು ಸಾಧ್ಯವಾಗಲಿಲ್ಲ. ಈಗ ನಾನು ಅನುದಾನ ಮಂಜೂರು ಮಾಡಿಸಿರುವ ವಿಚಾರ ತಿಳಿದ ಬಳಿಕ ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಭಟನೆಗೆ ಮಣಿದು ರಸ್ತೆ ನಿರ್ಮಾಣವಾಯಿತೆಂದು ಅಪಪ್ರಚಾರಮಾಡುವ ಕೆಟ್ಟ ಯೋಚನೆ ಇವರದು ಎಂದು ಆರೋಪಿಸಿದರು.

ಜಿ.ಪಂ. ರಸ್ತೆಗೆ ಲೋಕೋಪಯೋಗಿ ಇಲಾಖೆ ಅನುದಾನ ಮಂಜೂರು ಮಾಡಿಸಿ ರಸ್ತೆ ಅಭಿವೃದ್ಧಿಗೆ ಪ್ರಯತ್ನಿಸಿದ್ದೇನೆ ಎನ್ನುವ ತೃಪ್ತಿ ನನಗಿದೆ. ಇದೇ ರಸ್ತೆಗೆ ಕೆಲ ವರ್ಷಗಳ ಹಿಂದೆ ಪಿಎನ್‌ಜಿಎಸ್‌ವೈ ಮೂಲಕ ಆರೂವರೆ ಕೋ.ರೂ. ಬಿಡುಗಡೆ ಮಾಡುವಂತೆ ಬರೆದಿದ್ದು, ಅದು ಮಂಜೂರಾಗಿಲ್ಲ. ಇದೀಗ ಕುಂಡಡ್ಕ-ನಾಟೆಕಲ್ಲುರಸ್ತೆ ಅಭಿವೃದ್ಧಿಗಾಗಿ ಪುನಃ 3 ಕೋ. ರೂ. ಬಿಡುಗಡೆಗೊಳಿಸುವಂತೆ ಪತ್ರ ಬರೆದಿದ್ದೇನೆ ಬದನಾಜೆ-ಕುಂಡಡ್ಕ- ಪರಿಯಾಲ್ತಡ್ಕ ರಸ್ತೆ ಕಾಮಗಾರಿ ಕೂಡಲೇ ಆರಂಭಗೊಳ್ಳುತ್ತದೆ. ರಸ್ತೆ ಕಾಮಗಾರಿ ಪೂರ್ತಿಯಾಗುತ್ತದೆ ಎಂದರು.

ಕಾಂಗ್ರೆಸ್‌ ತೊರೆಯುವ ಪ್ರಶ್ನೆಯೇ ಇಲ್ಲ
ಬಿಜೆಪಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್‌ ನನ್ನನ್ನು ಕರೆದು ಸೀಟು ನೀಡಿ ಶಾಸಕಿಯನ್ನಾಗಿ ಮಾಡಿ ಬಳಿಕ ನನಗೆ ಉನ್ನತ ಸ್ಥಾನ ನೀಡಿದ ಪಕ್ಷ. ಚುನಾವಣೆಯಲ್ಲಿ ಈ ಪಕ್ಷದಲ್ಲಿ 18 ಮಂದಿ ಸ್ಪರ್ಧಿಸಲು ಸಿದ್ಧವಾಗಿದ್ದಾಗ ನನಗೆ ಸ್ಪರ್ಧಿಸಲು ಅವಕಾಶ ನೀಡಿದರು. ಆದ್ದರಿಂದ ನನ್ನ ಸ್ವಾಭಿಮಾನ ಬಿಡುವುದಿಲ್ಲ. ಇನ್ನು ಮುಂದೆ ನಾನು ಯಾವತ್ತಿದ್ದರೂ ಕಾಂಗ್ರೆಸ್‌ನಲ್ಲೇ ಇರುವವಳು. ನಾನು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ.
-ಶಕುಂತಳಾ ಶೆಟ್ಟಿ, ಶಾಸಕಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next