Advertisement

ಮೈತ್ರಿ ಸರ್ಕಾರಕ್ಕೆ ಸಿದ್ದುವಿನದೇ ನೇತೃತ್ವ

12:32 AM May 20, 2019 | Lakshmi GovindaRaj |

ಮೈಸೂರು: ರಾಜ್ಯದಲ್ಲಿನ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರಕ್ಕೆ ಯಾವುದೇ ಸಂಕಷ್ಟವಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಸರ್ಕಾರ ಮುನ್ನಡೆಯುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Advertisement

ನಗರದಲ್ಲಿ ಭಾನುವಾರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ಚಿಂಚೋಳಿಯಲ್ಲಿ ಚುನಾವಣೆ ವೇಳೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು ಎಂದು ನಾನು ನೀಡಿದ್ದ ಹೇಳಿಕೆಯನ್ನು ಮಾಧ್ಯಮದವರು ತಿರುಚಿ, ಅದನ್ನು ಸಿದ್ದರಾಮಯ್ಯ ಹಾಗೂ ಖರ್ಗೆ ನಡುವೆ ಬಿರುಕು ತರುವ ಯತ್ನ ಅಂತ ಸ್ಟೋರಿ ಮಾಡಿದರು.

ಇಂದು ಬೆಳಗ್ಗೆ ಸಚಿವ ಪುಟ್ಟರಂಗಶೆಟ್ಟಿ ಅವರು ಸಿಎಂ ಸ್ಥಾನದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಇದ್ದಾರೆ. ನಾನು ಸಿದ್ದರಾಮಯ್ಯ ಅವರನ್ನು ಆ ಸ್ಥಾನದಲ್ಲಿ ಇಟ್ಟು ನೋಡುತ್ತೇನೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನು? ಅವರು ಸಿದ್ದರಾಮಯ್ಯ ನೆರಳಲ್ಲಿ ಬೆಳೆದು ಬಂದವರು. ಹಾಗಾಗಿ, ಆ ರೀತಿ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.

“ನಾವು ದೇವಸ್ಥಾನಗಳಿಗೆ ಹೋದರೆ ಚುನಾವಣೆಗಾಗಿ ಟೆಂಪಲ್‌ ರನ್‌ ಅಂತಿರಾ. ಮೋದಿಯವರು ಕೇದಾರನಾಥ, ಬದರಿನಾಥದಲ್ಲಿ ಈಶ್ವರನ ತಪಸ್ಸು ಮಾಡಿದರೆ ಏನೂ ಇಲ್ಲ. ಮೇ 23ರ ಬಳಿಕ ಅವರ ಖುರ್ಚಿ ಅಳ್ಳಾಡುತ್ತೆ ಅಂತ ಹೋಗಿ ಅವರು ತಪಸ್ಸಿಗೆ ಕೂತ್ಕೊಂಡಿರೋದು’ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next