Advertisement

ಬಿಜೆಪಿ ಮೇಲುಗೈ ತಡೆಯಲು ಕೈ ಜತೆ ಮೈತ್ರಿ

06:00 AM Jun 15, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಮೇಲುಗೈ ಸಾಧಿಸಲು ಅವಕಾಶ ನೀಡುವುದಿಲ್ಲ ಎಂದಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಈ ಕಾರಣಕ್ಕಾಗಿಯೇ ಕಾಂಗ್ರೆಸ್‌ ಜತೆಗಿನ ಮೈತ್ರಿ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

Advertisement

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಎಷ್ಟು ಸ್ಥಾನ ಗಳಿಸುತ್ತದೋ ಗೊತ್ತಿಲ್ಲ. ಸೀಟು ಗಳಿಕೆ ನಮಗೆ ಮುಖ್ಯವೂ ಇಲ್ಲ. ಕಾಂಗ್ರೆಸ್‌ ಜತೆ ಸೇರಿ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆ ಉಂಟುಮಾಡಲು ನಾವು ಮುಂದಾಗಬೇಕು. ಬಿಜೆಪಿ
ಸೋಲಿಸುವುದೇ ನಮ್ಮ  ಗುರಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಎಲ್ಲರೂ ಕೆಲಸ ಮಾಡಬೇಕೆಂದು ಹೇಳಿದರು.

ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಗುರುವಾರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಜೆಡಿಎಸ್‌ ಅಭ್ಯರ್ಥಿಗಳು ಹಾಗೂ ಶಾಸಕರೊಂದಿಗೆ ಸಭೆ ನಡೆಸಿದ ಅವರು, ವಿಧಾನಸಭೆ ಚುನಾವಣೆಗೆ ಮುನ್ನ ನಾವು ಬಿಜೆಪಿ ಜತೆ ಹೋಗುತ್ತೇವೆಂಬ ಊಹಾಪೋಹ ಸೃಷ್ಟಿ ಮಾಡಿ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ದರು. ಒಂದೊಮ್ಮೆ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಜತೆ ಹೋದರೆ ಬಹಿಷ್ಕಾರ ಹಾಕುವು ದಾಗಿ ಹೇಳಿದರೂ ಜನ ನಂಬಲಿಲ್ಲ. ನಮಗೆ ಹಿನ್ನಡೆಯಾಗಲು ಇದು ಕಾರಣವಾಯಿತೇ ಎಂಬುದು ಗೊತ್ತಾಗುತ್ತಿಲ್ಲ ಎಂದರು.

ಇದು ಆತ್ಮಾವಲೋಕನ ಸಮಯ: ವಿಧಾನಸಭೆ ಚುನಾವಣೆ ಫ‌ಲಿತಾಂಶ ತೀವ್ರ ನಿರಾಸೆ ತಂದಿದೆ. ಬಿಜೆಪಿಗೆ ಅತಿ ಹೆಚ್ಚಿನ ಸ್ಥಾನಗಳು ಬಂದಿವೆ. ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೂ ಕೇವಲ 38 ಸ್ಥಾನ ಮಾತ್ರ ಪಕ್ಷಕ್ಕೆ ಸಿಕ್ಕಿದೆ. ಸೀಟುಗಳ ಸಂಖ್ಯೆ ಒಂದೆಡೆಯಾದರೆ ಪಕ್ಷಕ್ಕೆ ಬಿದ್ದ ಶೇಕಡಾವಾರು ಮತಗಳೂ ಕುಸಿದಿವೆ. ಆದ್ದರಿಂದ ಜೆಡಿಎಸ್‌ಗೆ ಯಾವ ಕಾರಣದಿಂದ ಸೋಲಾಗಿದೆ? ಎಲ್ಲಿ ಎಡವಿದ್ದೇವೆ? ಜಿಲ್ಲೆಗಳಲ್ಲಿ ಪಕ್ಷದ ಸ್ಥಿತಿಗತಿ ಹೇಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದಾಗಿದೆ ಎಂದರು.

ಮಾಧ್ಯಮಗಳ ವಿರುದ್ಧ ಕಿಡಿ:
ಮಾಧ್ಯಮಗಳ ವಿರುದ್ಧವೂ ಕಿಡಿ ಕಾರಿದ ದೇವೇಗೌಡರು, ಸಚಿವ ಸಂಪುಟ ವಿಸ್ತರಣೆ ವೇಳೆ ಜೆಡಿಎಸ್‌ನಲ್ಲಿ ಗಲಾಟೆ ಎಂದರು. ಯಾವುದೇ ಘಟನೆ ನಡೆಯದಿ ದ್ದರೂ ದೇವೇಗೌಡರ ಮನೆಯಲ್ಲಿ ಗಲಾಟೆ ಯಾಗಿದೆ. ಎಚ್‌.ಡಿ.ರೇವಣ್ಣ, ಭವಾನಿ ರೇವಣ್ಣ ಮನೆ ಬಿಟ್ಟು ಹೋಗುತ್ತಾರೆ ಎಂದರು.

Advertisement

ಇದರಿಂದ ಬೇಸರಗೊಂಡು ಮಾಧ್ಯಮಗಳಿಗೆ ಮಾತ ನಾಡುವುದಿಲ್ಲ ಎಂದು ಹೇಳಿದೆ. ಇನ್ನು ಮುಂದಾದರೂ ನಮ್ಮ ಮನೆಯಲ್ಲಿ ಗಲಾಟೆಯಾಗಿದೆ, ರೇವಣ್ಣ, ಭವಾನಿ ಮನೆ ಬಿಡುತ್ತಾರಂತೆ ಎಂದೆಲ್ಲಾ ಹೇಳಬೇಡಿ. ನಾನು ಇರುವ
ತನಕ ಮಾತ್ರವಲ್ಲ, ನಂತರವೂ ಕುಟುಂಬ ಒಂದಾಗಿಯೇ ಇರುತ್ತದೆ ಎಂದು ಹೇಳಿದರು.

ಸಾಲ ಮನ್ನಾ: ಎಚ್‌ಡಿಕೆ ಪರ
ದೇವೇಗೌಡರ ಬ್ಯಾಟಿಂಗ್‌ ರೈತರ ಸಾಲಮನ್ನಾ ವಿಚಾರವಾಗಿ ಮುಖ್ಯಮಂತ್ರಿ ಪರ ಬ್ಯಾಟಿಂಗ್‌ ಮುಂದುವರಿಸಿದ ದೇವೇಗೌಡರು, ಚುನಾವಣೆ ಉತ್ಸಾಹದಲ್ಲಿ ಕುಮಾರಸ್ವಾಮಿ ರೈತರ ಎಲ್ಲಾ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, ಕೇವಲ 37 ಸ್ಥಾನ ಮಾತ್ರ ಬಂದಿದ್ದರಿಂದ ಮುಖ್ಯಮಂತ್ರಿಯಾದ ಕೂಡಲೇ ಸಾಲಮನ್ನಾ ಮಾಡಲು ಹೇಗೆ ಸಾಧ್ಯ. ಸಮ್ಮಿಶ್ರ ಸರ್ಕಾರ ಇರುವುದರಿಂದ ಕಾ ಗ್ರೆಸ್‌ನವರನ್ನೂ ಒಂದು ಮಾತು ಕೇಳಬೇಕಾಗುತ್ತದೆ. ಆದರೂ, ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಸಾಲಮನ್ನಾ ಕುರಿತು ಆರ್ಥಿಕ ಇಲಾಖೆ ಜತೆ ಚರ್ಚಿಸಿದ್ದಾರೆ. ರೈತರೊಂದಿಗೂ ಮಾತುಕತೆ ನಡೆಸಿ ಅವರ ಅಭಿಪ್ರಾಯ ಕೇಳಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿ ಸಾಲಮನ್ನಾ ಕುರಿತು ನಿರ್ಧಾರಕ್ಕೆ ಬರಬೇಕು. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಎಂದರು.

ಕಾಂಗ್ರೆಸ್‌ನವರು ಒಪ್ಪಲಿಲ್ಲ
ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯ ಮಂತ್ರಿ ಯಾಗುವುದು ನನಗೆ ಇಷ್ಟವಿರಲಿಲ್ಲ. ಕಾಂಗ್ರೆಸ್‌ ನವರು ಸರ್ಕಾರ ರಚನೆಗೆ ಬೆಂಬಲ ಕೊಡುತ್ತೇವೆ ಎಂದಾಗ, ನೀವೇ ಸರ್ಕಾರ ರಚಿಸಿ. ನಾವು ಬೆಂಬಲ ಕೊಡುತ್ತೇವೆ ಎಂದು ಹೇಳಿದೆ.

ಈ ಕುರಿತು ಎಷ್ಟು ಹೇಳಿದರೂ ಕಾಂಗ್ರೆಸ್‌ನವರು ಒಪ್ಪಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ, ನಾವು ಬೆಂಬಲ
ಕೊಡುತ್ತೇವೆ. ಐದು ವರ್ಷ ಸರ್ಕಾರ ರಚಿಸೋಣ. ಇಬ್ಬರೂ ಸೇರಿ ರಾಜ್ಯದಲ್ಲಿ ಬಿಜೆಪಿ ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳೋಣ ಎಂದುಹೇಳಿದರು. ಹೀಗಾಗಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಒಪ್ಪಿಕೊಂಡೆ ಎಂದು ದೇವೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next