Advertisement
ಗನ್ ಹಿಡಿದು ಐವತ್ತು ಮಂದಿಯ ಜೊತೆ ಕಾಲೇಜಿಗೆ ಬಂದು ದಾಂಧಲೆ ನಡೆಸಿದ್ದಾರೆ ಎನ್ನುವ ಪ್ರಕರಣದಡಿ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಹಾಗೂ ಅಲಯನ್ಸ್ ಮಾಜಿ ಕುಲಪತಿ ಮಧುಕರ್ ಅಂಗೂರ್ ಮೇಲೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನೇಕಲ್ ತಾಲೂಕಿನ ಅಲಯನ್ಸ್ ಯೂನಿವರ್ಸಿಟಿಯ ಸಹೋದರರಿಬ್ಬರ ಗದ್ದುಗೆಯ ಗುದ್ದಾಟ ಮತ್ತೂಮ್ಮೆ ಬೀದಿಗೆ ಬಂದಿದ್ದು, ಇದಕ್ಕೆ ಸ್ಯಾಂಡಲ್ ಬಹುಬೇಡಿಕೆಯ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಭಾಗಿಯಾಗಿರುವುದು ಹಲವು ಅನುಮಾನ ಗಳಿಗೆ ಕಾರಣವಾಗಿದೆ.
Related Articles
Advertisement
ಜೊತೆಗೆ ರಾಜ್ಯ ನಾಯಕರೊಬ್ಬರು ನಾನು ನಿಮ್ಮ ಜೊತೆಗಿದ್ದೇನೆ ಅಲೆಯನ್ಸ್ ಹೋಗಿ ಎಂದು ಕಳುಸಿಕೊಟ್ಟ ಬಳಿಕ ಪ್ರಭಾವಿ ಸಚಿವರೊಬ್ಬರು ಒತ್ತಡ ಹೇರಿ ಮಧುಕರ್ ಹಾಗೂ ಸ್ವರ್ಣಲತಾ ಬಂಧನಕ್ಕೆ ಒತ್ತಡ ಹೇರಿದ್ದಾರೆ ಎನ್ನಲಾಗಿದ್ದು, ಇದೇ ಸಂದರ್ಭದಲ್ಲಿ ಶೈಲಾ ಛಬ್ಬಿ ಸುಧೀರ್ ಜೊತೆಗೆ ಸಚಿವ ಶ್ರೀರಾಮುಲು ಇರುವ ಫೋಟೋ ಕೂಡ ಇದೇ ಸಮಯದಲ್ಲಿ ಹೊರ ಬಿದ್ದಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ತಾಲೂಕಿನಲ್ಲಿ ಶಾಂತಿ ಕದಡುವ ಕೆಲಸ: ಅಲಯನ್ಸ್ ಯೂನಿವರ್ಸಿಟಿ ಒಂದಿಲ್ಲೊಂದು ಗಲಾಟೆ, ಗದ್ದಲಕ್ಕೆ ಪ್ರತಿ ಬಾರಿಯೂ ಸುದ್ದಿಯಲ್ಲಿದೆ. ಯೂನಿವರ್ಸಿಟಿಯ ಪಾರುಪತ್ಯಕ್ಕಾಗಿ ಹಲವು ಬಾರಿ ಗಲಾಟೆಗಳು ನಡೆದಿದ್ದು, ಈ ಬಾರಿ ಸ್ಯಾಂಡಲ್‌ವುಡ್ ನಟಿ ತಾಯಿಯು ಸಹ ಭಾಗಿಯಾಗಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನೂ ಅಲಯನ್ಸ್ ಗಲಾಟೆ ಮತ್ತಷ್ಟು ಗಂಭೀರವಾದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇವೇ ಎಂದು ಹೇಳಲಾಗುತ್ತಿದ್ದು, ಪೊಲೀಸರು ಇವೆಲ್ಲಕ್ಕೂ ಕಡಿವಾಣ ಹಾಕಬೇಕಿದೆ. ಆನೇಕಲ್ ತಾಲೂಕಿನಲ್ಲಿ ಶಾಂತಿ ಕದಡುವ ಕೆಲಸ ಪದೇ ಪದೆ ಆಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಗೊಂದಲದ ವಾತಾವರಣ ಸೃಷ್ಟಿಸಿದ ವಿಚಾರವಾಗಿ ಅಲಯನ್ಸ್ ಕಾಲೇಜಿಗೆ ಆನೇಕಲ್ ಪೊಲೀಸರು ಭೇಟಿ ಕೊಟ್ಟು ಸ್ಥಳ ಮಹಾಜರು ನಡೆಸಿದ್ದೇವೆ. ಪ್ರಕರಣ ದಾಖಲಿಸಿ, ಈಗಾಗಲೇ ಮಧುಕರ್ ಅಂಗೂರ್ ಅವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.●ಮಲ್ಲಿಕಾರ್ಜುನ ಬಾಲದಂಡೆ,
ಬೆಂಗಳೂರು ಗ್ರಾಮಾಂತರ ಎಸ್ಪಿ ಗಲಾಟೆ: 15 ಮಂದಿ ವಿರುದ್ಧ ಪ್ರಕರಣ ದಾಖಲು ದಶಕಗಳ ಇತಿಹಾಸ ಇರುವ ಅಲಯನ್ಸ್ ಯೂನಿವರ್ಸಿಟಿ ಗದ್ದುಗೆಗಾಗಿ ಅಂಗೂರ್ ಸಹೋದರರ ಗುದ್ದಾಟ ನಡೆಯುತ್ತಿದೆ. ಹಲವು ಕೊಲೆಗಳೊಂದಿಗೆ ರಕ್ತಸಿಕ್ತ ಇತಿಹಾಸವನ್ನೂ ಹೊಂದಿರುವ ಯೂನಿವರ್ಸಿಟಿ ವಿಚಾರವಾಗಿ ಹಲವು ಗಲಾಟೆಗಳು ನಡೆದಿದ್ದವು. ಇದೀಗ ಮತ್ತೂಮ್ಮೆ ಕಾಲೇಜಿನಲ್ಲಿ ಗಲಾಟೆ ನಡೆದಿದ್ದು, ಯೂನಿವರ್ಸಿಟಿಯ ರಿಜಿಸ್ಟ್ರಾರ್ ನಿವೇದಿತಾ ಮಿಶ್ರಾ ರವರು ನೀಡಿದ ದೂರಿನ ಅನ್ವಯ ಅಲಯನ್ಸ್ ಯೂನಿವರ್ಸಿಟಿ ಒಳಗೆ ಶಸ್ತ್ರಾಸ್ತ್ರಗಳನ್ನ ಹಿಡಿದು ಅಕ್ರಮ ಪ್ರವೇಶ ಮಾಡಿದ ಮಧುಕರ್, ಸ್ವರ್ಣಲತಾ, ರವಿವಿಕುಮಾರ್, ಪದ್ಮನಾಭ್, ಮೋಹನ್, ಪೊಣಚ್ಚ ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ಇಂಡಿಯನ್ ಆಮ್ಸ್ì ಆಕ್ಟ್ 1959(25)ರ ಅಡಿ ಪ್ರಕರಣವನ್ನ ದಾಖಲಿಸಿಕೊಂಡು 1 ಪಿಸ್ತೂಲ್, 4 ಬಂದೂಕು, 20 ಜೀವಂತ ಗುಂಡು ವಶಕ್ಕೆ ಪಡೆದುಕೊಂಡಿದ್ದಾರೆ.