Advertisement

ಮೂಲಭೂತ ಸೌಕರ್ಯ ನೀಡಿಲ್ಲ ಎಂದು ಆರೋಪಿಸಿ ಚಿಕ್ಕ ಏಲಚಟ್ಟಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

01:40 PM May 10, 2023 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಚಿಕ್ಕ ಏಲಚೆಟ್ಟಿ ಗ್ರಾಮಸ್ಥರು ಗ್ರಾಮಕ್ಕೆ ಮೂಲಭೂತ ಸೌಕರ್ಯ ನೀಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ಚುನಾವಣೆ ಮತದಾನ ಬಹಿಷ್ಕಾರ ಮಾಡಿದ್ದಾರೆ.

Advertisement

ಬಾಚಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಿಕ್ಕ ಏಲಚೆಟ್ಟಿ ಗ್ರಾಮದಲ್ಲಿ 101 ಅರ್ಹ ಮತದಾರರಿದ್ದಾರೆ. ಆದರೆ, ಗ್ರಾಮಕ್ಕೆ ಸರಿಯಾದ ರಸ್ತೆ ಹಾಗೂ ಬಸ್ ಸೌಕರ್ಯ ಇಲ್ಲವೆಂದು ಗ್ರಾಮಸ್ಥರು ಅಸಮಾಧಾನಗೊಂಡು ಮತದಾನ ಬಹಿಷ್ಕಾರಿಸಿದ್ದಾರೆ.

ಇನ್ನೂ ಮಾಹಿತಿ ಅರಿತ ತಹಸೀಲ್ದಾರ್ ಶ್ರೀಶೈಲ ಎಂ.ತಳವಾರ್ ಚಿಕ್ಕ ಏಲಚೆಟ್ಟಿ ಗ್ರಾಮಕ್ಕೆ ಭೇಟಿ ನೀಡಿ‌ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು. ಇದಕ್ಕೆ ಬಗ್ಗದ ಗ್ರಾಮಸ್ಥರು ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು‌. ಈ ವೇಳೆ ದೂರವಾಣಿ ಮೂಲಕ ಗ್ರಾಮಸ್ಥರ ಜೊತೆ ಜಿಲ್ಲಾಧಿಕಾರಿ ರಮೇಶ್ ಮಾತನಾಡಿ, ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಗ್ರಾಮಸ್ಥರು ಎಲ್ಲರ ಸಭೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇನ್ನೂ ಮಧ್ಯಾಹ್ನ ಒಂದು ಗಂಟೆಯಾದರು ಚಿಕ್ಕ ಏಲಚೆಟ್ಟಿ ಗ್ರಾಮದಲ್ಲಿ ಒಂದು ಮತದಾನವೂ ಕೂಡ ನಡೆದಿಲ್ಲ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next