ಹಾಸನ: ಚುನಾವಣೆಯಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮತದಾರರಿಗೆ ಹಂಚಲು ಅಕ್ರ ಮವಾಗಿ ಹಣ, ಉಡುಗೊರೆ ಸಾಗಿಸುವುದನ್ನು ತಡೆಯಲು ಚುನಾವಣಾ ಆಯೋಗವು ಜಾರಿಗೊಳಿ ಸಿರುವ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದೆ.
ನೀತಿ ಸಂಹಿತೆಯ ಕಟ್ಟುನಿಟ್ಟಿನ ಪಾಲನೆಗಾಗಿ ಅಯಾಯ ಜಿಲ್ಲಾಡಳಿತಗಳು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿವೆ. ಆ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ನಡವಳಿಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ಅಂತಹ ಸ್ಪಷ್ಟ ದೂರೊಂದು ಚುನಾವಣಾ ಆಯೋಗಕ್ಕೆ ಜಿಲ್ಲೆಯಿಂದ ರವಾನೆಯಾಗಿದ್ದು, ಕಿರುಕುಳ ನೀಡಿದ ಚೆಕ್‌ಪೋಸ್ಟ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಆಗ್ರಹಿಸಿ ದ್ದಾರೆ.
ದೂರು ದಾಖಲು: ಹೊಳೆನರಸೀಪುರ ಪಟ್ಟಣದ ರಾಘವೇಂದ್ರ ಮಠದ ಎದುರು, ಕೋಟೆ ಮುಖ್ಯ ರಸ್ತೆ ನಿವಾಸಿ ಎಸ್.ವಿ.ಶ್ರೇಯಸ್ ಆಚಾರ್ ಎಂಬವರು ಮಂಗಳವಾರ ರಾತ್ರಿ 11.10ರ ವೇಳ ಗೆ ಮೈಸೂರಿನಿಂದ ಹೊಳೆನರಸೀಪುರಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ದೊಡ್ಡಹಳ್ಳಿ ಚೆಕ್‌ಪೋಸ್ಟ್‌ನ ಸಿಬ್ಬಂದಿ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಹೊಳೆನರಸೀಪುರ ಚುನಾವಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ಪಿಡಿಒ ಅಂಜನಪ್ಪ ವಿರುದ್ಧ ದೂರು: ಶ್ರೇಯಸ್ ಆಚಾರ್ ಅವರ ಕಾರನ್ನು ತಡೆದು ತಪಾಸಣೆ ಮಾಡಿದ ಚೆಕ್‌ಪೋಸ್ಟ್ ಸಿಬ್ಬಂದಿ 20 ಸಾವಿರ ರೂ. ನಗದು ಇರಿಸಿಕೊಂಡಿದ್ದ ಶ್ರೇಯಸ್ ಆಚಾರ್ ಅವರನ್ನು ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗವು ನಿಗದಿಪಡಿಸಿ ಮಿತಿಗಿಂತ ಕಡಿಮೆ ಮೊತ್ತ ತಮ್ಮ ಬಳಿ ಇರುವ ಬಗ್ಗೆ ಅಚಾರ್ ಅವರು ವಿವರಣೆ ನೀಡಿದರೂ ಚೆಕ್‌ಪೋಸ್ಟ್ ಸಿಬ್ಬಂದಿ ಅವರ ಕಾರಿನ ಡಿಕ್ಕಿ ತೆಗೆದು ಬ್ಯಾಗ್ ತಪಾಸಣೆ ನಡೆಸಿ ಅನುಚಿತವಾಗಿ ವರ್ತಿಸಿದ್ದಾರೆ. ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಒ ಅಂಜನಪ್ಪ ಅವರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಸಿಆರ್‌ಪಿಎಫ್ ಯೋಧರನ್ನೂ ಬಳಸಿಕೊಂಡು ಕಿರುಕುಳ ನೀಡಿದರು.ಅಂಜನಪ್ಪ ಅವರು ಬಹುಶಃ ಪಾನಮತ್ತ ರಾಗಿದ್ದರು ಎಂದು ದೂರಿನಲ್ಲಿ ವಿವರ ನೀಡಿದ್ದಾರೆ.
ತೀವ್ರ ತೊಂದರೆ ಅನುಭವಿಸಿದ್ದೇವೆ: ಅಂಜನಪ್ಪ ಅವರು ಸುಮಾರು 10 ನಿಮಿಷಗಳ ಕಾಲ ಕಾರಿನ ತಪಾಸಣೆ ಮತ್ತು ನಿಂದನೆ ಮಾಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಮತ್ತೂಬ್ಬ ಚೆಕ್‌ಪೋಸ್ಟ್‌ನ ಮತ್ತೂಬ್ಬ ಉಸ್ತುವಾರಿಯಾಗಿದ್ದ ಪಿಡಿಒ ಸಂತೋಷ್ ಅವರೂ ನನ್ನನ್ನು ಮತ್ತು ನನ್ನ ಕಾರಿನ ಚಾಲಕ ಹೇಮರಾಜು ಅವರನ್ನೂ ನಿಂದಿಸಿ ಪೊಲೀಸರು ಮತ್ತು ಸಿಆರ್ ಪಿಎಫ್ ಸಿಬ್ಬಂದಿ ಹಾದಿ ತಪ್ಪಿಸಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿತಾವನೆ ನಡೆಸಿದರು. ಚೆಕ್‌ಪೋಸ್ಟ್ ಸಿಬ್ಬಂದಿ ನಡವಳಿಕೆಯಿಂದ ನಾವು ಕಿರು ಕುಳ ಅನುಭವಿಸಿದ್ದೇವೆ ಎಂದು ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ವೀಡಿಯೋ, ಸಿಸಿ ಟಿವಿ ತುಣುಕುಗಳನ್ನು ಬಳಸಿ ತನಿಖೆ ನಡೆಸಬೇಕು. ನನನ್ನು ವಿಚಾರಣೆಗೆ ಕರೆದರೆ ಸಾಕ್ಷ್ಯಗಳನ್ನು ಒದಗಿಸುವುದಾಗಿಯೂ ಹೇಳಿರುವ ಶ್ರೇಯಸ್ ಆಚಾರ್ ಅವರು ಅನುಚಿತವಾಗಿ ವರ್ತಿಸಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.