Advertisement

ಪೊಲೀಸ್‌ ದೌರ್ಜನ್ಯ ಆರೋಪ; ಪ್ರತಿಭಟನೆ

01:13 PM Dec 27, 2021 | Team Udayavani |

ಚಿಂಚೋಳಿ: ತಾಲೂಕಿಗೆ ಶವ ಸಂಸ್ಕಾರಕ್ಕೆ ಹೊರಟಿದ್ದ ಜೀಪು ನಿಲ್ಲಿಸಿ ದಂಡ ವಿಧಿಸಿದ ಸುಲೇಪೇಟ ಪೊಲೀಸರಿಗೆ ಹಣ ನೀಡಿ ರಸೀದಿ ಪಡೆದು ಬರುವಾಗ ಕಾನ್‌ಸ್ಟೇಬಲ್‌ವೊಬ್ಬರು ಜೀಪು ಚಾಲಕನಿಗೆ ಲಾಠಿಯಿಂದ ಥಳಿಸಿರುವುದನ್ನು ಖಂಡಿಸಿ ಪಸ್ತಪುರ ಗ್ರಾಮಸ್ಥರು ದಸ್ತಾಪುರ ಗ್ರಾಮದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

Advertisement

ತಾಲೂಕಿನ ಪಸ್ತಪುರ ಗ್ರಾಮಸ್ಥರು ಪಟ್ಟಣದಲ್ಲಿ ಶವ ಸಂಸ್ಕಾರದಲ್ಲಿ ಭಾಗವಹಿಸಲು ಜೀಪಿನಲ್ಲಿ ಬರುತ್ತಿದ್ದ ವೇಳೆಯಲ್ಲಿ ದಸ್ತಾಪುರ ಗ್ರಾಮದ ಹತ್ತಿರ ಪೊಲೀಸರು ಜೀಪು ನಿಲ್ಲಿಸಿ ದಂಡ ವಸೂಲಿ ಮಾಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಆಗ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬರು ಲಾಠಿಯಿಂದ ಥಳಿಸಿದ್ದಾರೆ ಎಂದು ದೂರಿದ ಗ್ರಾಮಸ್ಥರು ಚಿಂಚೋಳಿ ಕಲಬುರಗಿ ರಾಜ್ಯ ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿ, ಎರಡು ತಾಸು ವಾಹನ ಸಂಚಾರ ಸ್ಥಗಿತಗೊಳಿಸಿದ್ದರು.

ಸಿಪಿಐ ಜಗದೀಶ ಜಿ.ಕೆ, ಪಿಎಸ್‌ಐ ಸುಖಾನಂದಸಿಂಗ್‌ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಪೊಲೀಸ್‌ ಕಾನ್‌ ಸ್ಟೇಬಲ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಜೆಡಿಎಸ್‌ ಮುಖಂಡ ಸಂಜೀವನ್‌ ಯಾಕಾಪುರ, ಬಸವರಾಜ ಬಾಲಿ, ಜಗನ್ನಾಥ ಧುತ್ತರಗಿ, ಸನ್ನಿ ಜಾಬಶೆಟ್ಟಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next