Advertisement

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

07:31 PM Oct 17, 2021 | Team Udayavani |

ಜಾಲ್ನಾ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‌ ಸೋಂಕು ಕಡಿಮೆಯಾಗುತ್ತಿದ್ದು, ಲಸಿಕೆ  ಪ್ರಕ್ರಿಯೆಯು  ವೇಗಗೊಳಿಸಲಾಗಿದೆ.   ಹಂತ  ಹಂತವಾಗಿ ಹೊಟೇಲ್‌, ಮಾಲ್‌, ಶಾಲೆ, ಮಂದಿರ  ಮತ್ತು  ಚಿತ್ರಮಂದಿರಗಳನ್ನು  ತೆರೆಯಲು ಸರಕಾರ ಅನುಮತಿ ನೀಡಿದೆ. ಅದೇ ರೀತಿ  ಒಂದು ಡೋಸ್‌ ಪಡೆದ ನಾಗರಿಕರಿಗೆ ದೀಪಾವಳಿಯ ನಂತರ  ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ನೀಡುವ ಸೂಚನೆಯನ್ನು  ಆರೋಗ್ಯ ಸಚಿವ  ರಾಜೇಶ್‌ ಟೋಪೆ ನೀಡಿದ್ದಾರೆ.

Advertisement

ದೇವಸ್ಥಾನಗಳನ್ನು ತೆರೆಯಲಾಗಿದ್ದು.  ಅನೇಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಇದರಿಂದ ಹೆಚ್ಚಿನ ಜನಸಂದಣಿಯು ಕಾಣಲಾರಂಭಿಸಿದೆ. ಇವೇಲ್ಲವನ್ನು ಗಮನಿಸಿ ದೀಪಾವಳಿ ನಂತರ ಕೊರೊನಾ ಪ್ರಕರಣಗಳು ಕಡಿಮೆಯಾದರೆ, ಕಾರ್ಯಪಡೆಯ ಸಲಹೆಯಂತೆ ಒಂದು ಡೋಸ್‌ ಕೊರೊನಾ ಲಸಿಕೆ ತೆಗೆದುಕೊಂಡ ವ್ಯಕ್ತಿಯು  ಮುಕ್ತ ವಲಯದಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಸಚಿವ ರಾಜೇಶ್‌ ಟೋಪೆ ತಿಳಿಸಿದ್ದಾರೆ.

18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ  ರೈಲು ಪ್ರವೇಶ:

ಮುಂಬಯಿ ಸ್ಥಳೀಯ ರೈಲುಗಳಿಗೆ ಪ್ರಯಾಣ ಮತ್ತು ವಿಶೇಷ ಸೌಲಭ್ಯಗಳ ಕುರಿತು ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈಗ 18 ವರ್ಷದೊಳಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಡ ಮುಂಬಯಿ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಮೊದಲು ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಯಿತು. ಪ್ರಸ್ತುತ, ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮಾತ್ರ ಕೋವಿಡ್‌ -19 ವಿರುದ್ಧ ಲಸಿಕೆ ಹಾಕಲಾಗುತ್ತಿದೆ. ಮುಂಬಯಿಯಲ್ಲಿ  ಶಾಲಾ -ಕಾಲೇಜುಗಳು ತೆರೆಯಲ್ಪಡುವುದರಿಂದ ಸರಕಾರ ಈ ಕ್ರಮ ಕೈಗೊಂಡಿದೆ. ಇದರಲ್ಲಿ ವಿಶೇಷವಾಗಿ ಜೂನಿಯರ್‌ ಕಾಲೇಜು ವಿದ್ಯಾರ್ಥಿಗಳು ಸೇರಿದ್ದಾರೆ. ಇದರಿಂದ ಅವರು ವೈಯಕ್ತಿಕವಾಗಿ ಶಾಲಾ-ಕಾಲೇಜಿಗೆ ಹಾಜರಾಗಬಹುದು ಎಂದು ಸಚಿವ ಟೋಪೆ ಹೇಳಿದ್ದಾರೆ.

ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರ ಜತೆಗೆ, ಲಸಿಕೆ ಪಡೆಯುವ ಮತ್ತು  ನಿರ್ದಿಷ್ಟ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು  ವೈದ್ಯರ ಪ್ರಮಾಣಪತ್ರವನ್ನು ತೋರಿಸುವ ಮೂಲಕ ರೈಲ್ವೇ ಸೌಲಭ್ಯದ ಪ್ರಯೋಜನ ಪಡೆಯಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next