Advertisement

ವನಿತಾ ವಿಶ್ವಕಪ್‌: ದಕ್ಷಿಣ ಆಫ್ರಿಕಾ ಹ್ಯಾಟ್ರಿಕ್‌ ವಿನ್‌

11:02 PM Mar 14, 2022 | Team Udayavani |

ಮೌಂಟ್‌ ಮೌಂಗನುಯಿ: ದಕ್ಷಿಣ ಆಫ್ರಿಕಾದ ಆಲ್‌ರೌಂಡ್‌ ಪ್ರದರ್ಶನಕ್ಕೆ ಇಂಗ್ಲೆಂಡ್‌ ನೆಲಕಚ್ಚಿದೆ. 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ ಹರಿಣಗಳ ಪಡೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ನೆಗೆದಿದೆ.

Advertisement

ಇದು ದಕ್ಷಿಣ ಆಫ್ರಿಕಾಕ್ಕೆ ಒಲಿದ ಹ್ಯಾಟ್ರಿಕ್‌ ಗೆಲುವು. ಇನ್ನೊಂದೆಡೆ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮೂರೂ ಪಂದ್ಯಗಳಲ್ಲಿ ಮುಗ್ಗರಿಸಿ 7ನೇ ಸ್ಥಾನಕ್ಕೆ ಕುಸಿಯಿತು. ಅದೀಗ ಎಲ್ಲ 4 ಪಂದ್ಯಗಳನ್ನು ಸೋತ ಪಾಕಿಸ್ಥಾನಕ್ಕಿಂತ ಒಂದು ಮೆಟ್ಟಿಲು ಮೇಲಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡನ್ನು ಹರಿಣಗಳ ಪಡೆ 9ಕ್ಕೆ 235 ರನ್ನಿಗೆ ಹಿಡಿದು ನಿಲ್ಲಿಸಿತು. ಬಳಿಕ 49.2 ಓವರ್‌ಗಳಲ್ಲಿ 7 ವಿಕೆಟಿಗೆ 236 ರನ್‌ ಹೊಡೆದು ಗೆದ್ದು ಬಂದಿತು. ಇದು 2000ದ ಬಳಿಕ ಇಂಗ್ಲೆಂಡ್‌ ಎದುರಿನ ವಿಶ್ವಕಪ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸಾಧಿಸಿದ ಮೊದಲ ಗೆಲುವು. ಈ ಕೂಟದ ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಪಡೆ ಬಾಂಗ್ಲಾದೇಶ (32 ರನ್‌) ಮತ್ತು ಪಾಕಿಸ್ಥಾನವನ್ನು (6 ರನ್‌) ಮಣಿಸಿತ್ತು.

ಕಾಪ್‌ 5 ವಿಕೆಟ್‌
ಬಲಗೈ ಮಧ್ಯಮ ವೇಗಿ ಮರಿಜಾನ್‌ ಕಾಪ್‌ 45ಕ್ಕೆ 5 ವಿಕೆಟ್‌ ಉಡಾಯಿಸಿ ಇಂಗ್ಲೆಂಡನ್ನು ಸಾಮಾನ್ಯ ಮೊತ್ತಕ್ಕೆ ತಡೆದು ನಿಲ್ಲಿಸಿದರು. ಇದು ಕಾಪ್‌ ಅವರ ಜೀವನಶ್ರೇಷ್ಠ ಬೌಲಿಂಗ್‌. ಟಾಮಿ ಬ್ಯೂಮಂಟ್‌ (62) ಮತ್ತು ಆ್ಯಮಿ ಜೋನ್ಸ್‌ (53) ಹೊರತುಪಡಿಸಿದರೆ ಉಳಿದವರಿಂದ ದೊಡ್ಡ ಮೊತ್ತ ಸಂದಾಯವಾಗಲಿಲ್ಲ. ಹಿಂದಿನೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯ ಮತ್ತು ವೆಸ್ಟ್‌ ಇಂಡೀಸ್‌ ಕೂಡ ಇಂಗ್ಲೆಂಡಿಗೆ ಸೋಲುಣಿಸಿತ್ತು.

ಚೇಸಿಂಗ್‌ ವೇಳೆಯೂ ಕಾಪ್‌ ಉಪಯುಕ್ತ ಕೊಡುಗೆ ಸಲ್ಲಿಸಿದರು (32). ಓಪನರ್‌ ಲಾರಾ ವೋಲ್ವಾರ್ಟ್‌ 35ನೇ ಓವರ್‌ ತನಕ ನಿಂತು ಸರ್ವಾಧಿಕ 77 ರನ್‌ ಹೊಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Advertisement

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-9 ವಿಕೆಟಿಗೆ 235 (ಬ್ಯೂಮಂಟ್‌ 62, ಜೋನ್ಸ್‌ 53, ಡಂಕ್ಲಿ 26, ಕಾಪ್‌ 45ಕ್ಕೆ 5, ಕ್ಲಾಸ್‌ 23ಕ್ಕೆ 2). ದಕ್ಷಿಣ ಆಫ್ರಿಕಾ-49.2 ಓವರ್‌ಗಳಲ್ಲಿ 7 ವಿಕೆಟಿಗೆ 236 (ವೋಲ್ವಾರ್ಟ್‌ 77, ಲುಸ್‌ 36, ಕಾಪ್‌ 32, ಶ್ರಬೊÕàಲ್‌ 34ಕ್ಕೆ 2). ಪಂದ್ಯಶ್ರೇಷ್ಠ: ಮರಿಜಾನ್‌ ಕಾಪ್‌.

Advertisement

Udayavani is now on Telegram. Click here to join our channel and stay updated with the latest news.

Next