ಜಿಲ್ಲಾ ವಕೀಲರ ಸಂಘ ಹಾಗೂ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಪಾವನಧಾಮ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ಷಾಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನಿಗೆ ಶಾಂತಿ, ನೆಮ್ಮದಿ ಸಿಗಲು ಅಧ್ಯಾತ್ಮವೊಂದೇ ರಾಜಮಾರ್ಗ, ಆರೊಗ್ಯ ಸದೃಢವಾಗಿರಲು ಯೋಗವೇ ಔಷಧ ಎಂದು ಪ್ರತಿಪಾದಿಸಿದರು. ಪಾವನಧಾಮದ ಮುಖ್ಯಸ್ಥರಾದ ಪ್ರತಿಮಾ ಸಹೋದರಿ
ಸಾನ್ನಿಧ್ಯ ವಹಿಸಿ ಮಾತನಾಡಿ, ನಿತ್ಯ ರಾಜಯೋಗದಿಂದ ಉತ್ತಮ ಸ್ವಾಸ್ಥ್ಯ ಪ್ರಾಪ್ತವಾಗುತ್ತದೆ. ಅದು ಬುದ್ಧಿಗೆ ಯೋಗ ನೀಡುತ್ತದೆ. ಪರಮಾತ್ಮನ ಸನ್ನಿ ಧಿಗೆ ಕರೆದೊಯ್ಯುವ ಮಾರ್ಗ ಇದಾಗಿದ್ದು, ದೈನಂದಿನ ಬದುಕಿನಲ್ಲಿ ಕೆಲವು ಕ್ಷಣಗಳಾದರೂ ಅಧ್ಯಾತ್ಮದೊಂದಿಗೆ ಬೆಸೆಯಬೇಕು ಎಂದು ಸಲಹೆ ನೀಡಿದರು. ಜ್ಯೋತಿ ಸಹೋದರಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೆ ಆದ ವಿಶಿಷ್ಟ ಸ್ಥಾನವಿದೆ. ಒಂದೊಂದು ಹಬ್ಬ ಒಂದು ಶಕ್ತಿ, ಯುಕ್ತಿ ಭರಿಸುವ ಉತ್ಸವಗಳಾಗಿವೆ. ಆದರೆ ರಕ್ಷಾಬಂಧನವು ಈ ಎಲ್ಲಾ ಹಬ್ಬಗಳಿಗಿಂತ ಭಿನ್ನವಾಗಿದ್ದು, ಪರಸ್ಪರ ಮಾನವನ ಸಂಬಂಧಗಳನ್ನು ಬಲಿಷ್ಟಗೊಳಿಸುವ ಉತ್ಸವ ಇದಾಗಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಕೆ.ಎಚ್. ಪಾಟೀಲ ಮಾತನಾಡಿ, ಜೀವನದಲ್ಲಿ ಸತ್ಯತೆ, ನಿರ್ಮಲತೆ, ಸರಳತೆ ಹಾಗೂ ಸಮೃದ್ಧಿ ಪ್ರಾಪ್ತವಾಗಲು ಸಜ್ಜನರ ಸಂಘ ಅಗತ್ಯ ಎಂದು ಹೇಳಿದರು. ಬ್ರಹ್ಮಕುಮಾರಿ ಸಹೋದರಿಯರು ನ್ಯಾಯಾ ಧೀಶರು ಹಾಗೂ ವಕೀಲರಿಗೆ ರಕ್ಷೆ ಕಟ್ಟಿ ಸಿಹಿ ಹಂಚಿದರು. ಹೆಚ್ಚುವರಿ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿ.ನಂಜುಂಡಯ್ಯ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಜೀವನರಾವ್ ಕುಲಕರ್ಣಿ, ನ್ಯಾಯಾಧೀಶರಾದ ಯಮನಪ್ಪ, ರಾಘವೇಂದ್ರ ಆರ್., ನಾಗೇಂದ್ರ ಬಿರಾದಾರ ಮತ್ತಿತರರು ಇದ್ದರು. ಪೊಲೀಸ್ ವರಿಷ್ಠಾಧಿಕಾರಿ ಕಚೇರಿ: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬ್ರಹ್ಮಕುಮಾರ ಈಶ್ವರೀಯ ವಿದ್ಯಾಲಯದಿಂದ ರಕ್ಷಾಬಂಧನ
ಆಚರಿಸಲಾಯಿತು. ಪ್ರತಿಮಾ ಸಹೋದರಿ ಮಾತನಾಡಿ, ಪೊಲೀಸ್ ಸೇವೆ ಒತ್ತಡದಿಂದ ಕೂಡಿದ್ದು, ಇದರಿಂದ ಮುಕ್ತಿ ಪಡೆಯಬೇಕಾದರೆ ಅಧ್ಯಾತ್ಮದತ್ತ ವಾಲುವುದು ಅಗತ್ಯ ಎಂದರು. ಸನ್ಮಾನ ಸ್ವೀಕರಿಸಿದ ನಿರ್ಗಮಿತ ಎಸ್‌ಪಿ ಪ್ರಕಾಶ ನಿಕ್ಕಂ ಮಾತನಾಡಿ, ಕರ್ತವ್ಯಕ್ಕೆ ಹಾಜರಾದ ಬಳಿಕ ಪೊಲೀಸರಿಗೆ ಮನೆ ಸಂಪರ್ಕ ತನ್ನಿಂದ ತಾನೆ ಕಳೆದು ಹೋಗುತ್ತಿದೆ. ಸಹೋದರಿಯರ ಸುವಿಚಾರ ನಮ್ಮೆಲ್ಲರಿಗೆ ದಾರಿ ದೀಪವಾಗಲಿ ಎಂದರು. ಹೆಚ್ಚುವರಿ ಎಸ್‌ಪಿ ಶ್ರೀಹರಿಬಾಬು, ಬ್ರಹ್ಮಕುಮಾರಿಯ ಮಂಗಲಾ ಸಹೋದರಿ, ಶ್ವೇತಾ ಸಹೋದರಿ, ಶಿವಪ್ಪ ಇದ್ದರು.
Advertisement