Advertisement

ಹೆಬ್ರಿ-ಭಗವದ್ಗೀತೆ ಅಧ್ಯಾತ್ಮ ಜಗತ್ತಿನ ಹೃದಯ: ಕೇಮಾರು ಶ್ರೀ

03:31 PM Jul 09, 2024 | Team Udayavani |

ಹೆಬ್ರಿ: ಭಗವದ್ಗೀತೆಯು ಆಧ್ಯಾತ್ಮ ಜಗತ್ತಿನ ಹೃದಯ. ಮಕ್ಕಳ ಕೈಯಲ್ಲಿ ಮೊಬೈಲ್‌ ಕೊಡುವುದರ ಬದಲು ಭಗವದ್ಗೀತೆಯ ಪುಸ್ತಕವನ್ನು ನೀಡಬೇಕು. ಆ ಮೂಲಕ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸಿಕೊಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಬಂಟ ಸಮಾಜ ದೈವ, ದೇವಸ್ಥಾನಗಳ ಜೀರ್ಣೋದ್ಧಾರ ಮಾಡುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಕೇಮಾರು ಸಾಂದೀಪನಿ ಸಾಧನಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.

Advertisement

ಅವರು ಜು.7ರಂದು ಬಜಗೋಳಿ ಬಸ್‌ಸ್ಟಾಂಡ್‌ ಬಳಿಯ ಸುಮಾ ಕಾಂಪ್ಲೆಕ್‌ Õನಲ್ಲಿ ಕಾರ್ಕಳ ಬಂಟ್ಸ್‌ ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿಯ ಬಜಗೋಳಿ ಇದರ ನೂತನ ಶಾಖೆಯನ್ನು ಉದ್ಘಾಟಿಸಿ, ಬಳಿಕ ತುಡಾರ್‌ ಕಾಂಪ್ಲೆಕ್ಸ್‌ನ ಶ್ರೀ ಸಾಯಿ ಸಭಾಭವನದ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ತಾಲೂಕಿನಾದ್ಯಂತ ಶಾಖೆ
ಕಾರ್ಕಳ ಬಂಟ್ಸ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಆರ್ಥಿಕ ಸಂಸ್ಥೆಗಳು ಕೇವಲ ವ್ಯವಹಾರ ನಡೆಸುವುದು ಮಾತ್ರ ಮಾಡದೆ ಅದರ ಜತೆ ಜನತೆಗೆ ಉತ್ತಮ ಸೇವೆ ನೀಡಿದರೆ ಮಾತ್ರ ಆ ಸಂಸ್ಥೆ ಯಶಸ್ಸಿಯಾಗುತ್ತೆ. ಬಜಗೋಳಿಯಲ್ಲಿ ಎಲ್ಲರ ಸಹಕಾರದಿಂದ ಬಂಟರ ಸಹಕಾರಿ ಸಂಘವಾಗಿದ್ದು ಮುಂದಿನ ದಿನಗಳಲ್ಲಿ
ತಾಲೂಕಿನಾದ್ಯಂತ ಶಾಖೆಗಳನ್ನು ತೆರಯಲಾಗುವುದು ಎಂದರು.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ಭದ್ರತಾ ಕೊಠಡಿ ಉದ್ಘಾಟಿಸಿ, ಜಿಲ್ಲೆಯಲ್ಲಿ ಒಟ್ಟು 750 ಸಹಕಾರಿ ಸಂಘಗಳು, 2,600 ಶಾಖೆಗಳನ್ನು ಹೊಂದುವ ಮೂಲಕ ಆರ್ಥಿಕ ವ್ಯವಹಾರವನ್ನು ನಡೆಸುತ್ತಿದೆ ಎಂದರು. ಕರ್ನಾಟಕ ಸ್ಟೋನ್‌ ಮತ್ತು ಕ್ರಷರ್‌ ಅಶೋಸಿಯೇಶನ್‌ ರಾಜ್ಯಾಧ್ಯಕ್ಷ ಡಾ| ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿದರು.

ಈ ಸಂದರ್ಭದಲ್ಲಿ, ಮಹಾವೀರ ಜೈನ್‌ ಬಜಗೋಳಿ, ಡಾ| ವೆಂಕಟಗಿರಿ ರಾವ್‌, ಉದ್ಯಮಿ ಆನಂದ ಎಂ.ಶೆಟ್ಟಿ ಮಂಜೆಮನೆ ಪುಣೆ, ಉಮೇಶ್‌ ರಾವ್‌ ಬಜಗೋಳಿ, ಮುಡಾರು ಗ್ರಾ.ಪಂ.ಅಧ್ಯಕ್ಷ ಶ್ರುತಿ ಡಿ.ಅತಿಕಾರಿ, ನಲ್ಲೂರು ಗ್ರಾ. ಪಂ. ಅಧ್ಯಕ್ಷ ಅಶೋಕ್‌ ಪೂಜಾರಿ, ಕಟ್ಟಡದ ಮಾಲಕ ಸುಂದರ ಶೆಟ್ಟಿ ನಲ್ಲೂರು, ಕಾರ್ಕಳ ಮಡಿವಾಳ ಸಂಘದ ಅಧ್ಯಕ್ಷ ಉದಯ ಸಾಲಿಯಾನ್‌,
ಮಾಳ-ಕೆರ್ವಾಶೆ ವಿಎಸ್‌ಎಸ್‌ ಬ್ಯಾಂಕ್‌ನ ಅಧ್ಯಕ್ಷ ಅನಿಲ್‌.ಎಸ್‌.ಪೂಜಾರಿ, ಉದ್ಯಮಿ ಭಾಸ್ಕರ ಶೆಟ್ಟಿ ಪುಣೆ ,ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಸೀತಾನದಿ ವಿಟಲ ಶೆಟ್ಟಿ, ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಸುಹಾಸ್‌ ಹೆಗ್ಡೆ ನಂದಳಿಕೆ, ಮಾಲಿನಿ ಎನ್‌. ರೈ ಸಾಣೂರು, ಸುಧೀರ್‌ ಹೆಗ್ಡೆ, ಸುರೇಂದ್ರ ಶೆಟ್ಟಿ, ಪ್ರಶಾಂತ್‌ ಶೆಟ್ಟಿ, ಕೆ. ನವೀನ್‌ಚಂದ್ರ ಶೆಟ್ಟಿ,ರಮೇಶ್‌ ಶೆಟ್ಟಿ, ಸಚೇಂದ್ರ ಶೆಟ್ಟಿ,ಎಂ. ಪ್ರಸನ್ನ ಶೆಟ್ಟಿ, ಪ್ರದೀಪ್‌ ಕುಮಾರ್‌ ಶೆಟ್ಟಿ, ಸುನೀತಾ ಸಿರಿಯಣ್ಣ ಶೆಟ್ಟಿ, ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಿಶೋರ್‌, ವಿನಯ ಅರುಣ್‌ ಶೆಟ್ಟಿ, ಬಂಟರ ಸಂಘಟನೆಯ ಪ್ರಮುಖರಾದ ಶ್ಯಾಮ್‌ ಶೆಟ್ಟಿ, ರತ್ನಾಕರ ಶೆಟ್ಟಿ ಮುಡಾರು ಉಪಸ್ಥಿತರಿದ್ದರು.

Advertisement

ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಕೃಷ್ಣ ಎಂ.ಶೆಟ್ಟಿ ವರದಿ ವಾಚಿಸಿದರು. ಸೊಸೈಟಿಯ ಉಪಾಧ್ಯಕ್ಷ ಮಂಜುನಾಥ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿ,ಪ್ರಶಾಂತ್‌ ಶೆಟ್ಟಿ ನಲ್ಲೂರು ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಸುಧಾಕರ ಶೆಟ್ಟಿ ಮುಡಾರು ವಂದಿಸಿದರು.

ಉದಯ ಶೆಟ್ಟಿ ಸಜ್ಜನ ರಾಜಕಾರಣಿ
ತಾನು ದುಡಿದ ಒಂದು ಪಾಲನ್ನು ಸಮಾಜಕ್ಕೆ ನೀಡುವ ಅಪರೂಪದ ಸಜ್ಜನ ರಾಜಕಾರಣಿಗಳಲ್ಲಿ ಮುನಿಯಾಲು ಉದಯ ಶೆಟ್ಟಿ ಮುಂಚೂಣಿಯಲ್ಲಿದ್ದಾರೆ . ನಿರಂತರವಾಗಿ ಜನರೊಂದಿಗೆ ಬೆರೆತು ಜನರ ಕಷ್ಟಗಳಿಗೆ ಸಹಾಯ ನೀಡುವ ಉದಯ ಶೆಟ್ಟಿ ಅವರು ಹೆಬ್ರಿ ಕಾರ್ಕಳ ಪ್ರದೇಶದಲ್ಲಿ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.ಬಜಗೋಳಿಯ ಶಾಖೆಯಂತೆ ಇನ್ನು ಹತ್ತು ಹಲವಾರು ಶಾಖೆಗಳಾಗಲಿ.

*ಕೇಮಾರು ಶ್ರೀ.

 

Advertisement

Udayavani is now on Telegram. Click here to join our channel and stay updated with the latest news.

Next