ನವದೆಹಲಿ: ಅಧ್ಯಾತ್ಮದ ಸತ್ಯ ಅರಿಯಲು ಜನರು ಅನುಸರಿಸುತ್ತಿರುವ ಆರಾಧನೆಯ ಮಾರ್ಗಗಳು ಬೇರೆ-ಬೇರೆಯಾದರೂ, ಉದ್ದೇಶ ಒಂದೇ ಎಂಬುದನ್ನು ಎಲ್ಲರೂ ಅರಿಯಬೇಕು. ಇಂದಿನ ಸಂಘರ್ಷದ ಸಮಾಜಕ್ಕೆ ಅದರ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಚುತುರ್ವೇದಗಳ ಪೈಕಿ ಒಂದಾದ ಸಾಮವೇದದ ಉರ್ದು ಭಾಷಾನುವಾದ ಅವತರಣಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವತ್ ಮಾತನಾಡಿದರು.
ಈ ವೇಳೆ ಸಮಾಜದಲ್ಲಿ ಸರ್ವಧರ್ಮ ಸಮನ್ವಯದ ಅಗತ್ಯವನ್ನು ಪ್ರತಿಪಾದಿಸಿದ ಅವರು, ಶಿಖರವೊಂದನ್ನು ಹತ್ತಲು ಒಬ್ಬ ಒಂದು ಮಾರ್ಗ ಬಳಸಿದರೆ, ಮತ್ತೊಬ್ಬ ಮತ್ತೊಂದು ಮಾರ್ಗ ಅನುಸರಿಸುತ್ತಾನೆ. ಆದರೆ, ಶಿಖರದ ಗುರಿ ತಲುಪಿದಾಗ ಎಲ್ಲರೂ ಬರುತ್ತಿರುವುದು ಇದೇ ಗುರಿ ತಲುಪಲು ಎಂಬುದು ಅರ್ಥವಾಗುತ್ತದೆ. ಅದೇ ರೀತಿ ಸತ್ಯವನ್ನು ಜನರು ಬೇರೆ-ಬೇರೆ ರೀತಿ ಅರ್ಥೈಸಿಕೊಂಡರೂ, ನಮ್ಮೆಲ್ಲರನ್ನು ಮುನ್ನಡೆಸುವ ಭಗವಂತನನ್ನು ಬೇರೆ-ಬೇರೆ ಹೆಸರಿನಲ್ಲಿ ಕರೆದರೂ, ಅದರ ಉದ್ದೇಶ ಒಂದೇ ಎಂಬುದನ್ನು ನಾವು ಅರಿಯಬೇಕು ಎಂದಿದ್ದಾರೆ.