Advertisement

ಟಿ20 ವಿಶ್ವಕಪ್‌: ಬಟ್ಲರ್‌ ಬ್ಯಾಟಿಂಗಿಗೆ ನಡುಗಿದ ಆಸೀಸ್‌

11:32 PM Oct 30, 2021 | Team Udayavani |

ದುಬಾೖ: ಇಂಗ್ಲೆಂಡಿನ ವೇಗದ ಬೌಲಿಂಗ್‌ ಮತ್ತು ಬಟ್ಲರ್‌ ಅವರ ಬ್ಯಾಟಿಂಗ್‌ ಅಬ್ಬರಕ್ಕೆ ನಡುಗಿದ ಆಸ್ಟ್ರೇಲಿಯ ಶನಿವಾರ ರಾತ್ರಿಯ ಟಿ20 ವಿಶ್ವಕಪ್‌ ಮುಖಾಮುಖಿಯಲ್ಲಿ 8 ವಿಕೆಟ್‌ಗಳ ಸೋಲನುಭ ವಿಸಿದೆ. ಇತ್ತ ಇಂಗ್ಲೆಂಡ್‌ ಹ್ಯಾಟ್ರಿಕ್‌ ಗೆಲುವು ದಾಖಲಿಸಿ ಸೆಮಿಫೈನಲ್‌ ಹಾದಿ ಮತ್ತಷ್ಟು ಸುಗಮಗೊಳಿಸಿದೆ.

Advertisement

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 125 ರನ್ನಿಗೆ ಆಲೌಟಾಯಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಆರಂಭಕಾರ ಜಾಸ್‌ ಬಟ್ಲರ್‌ (ಅಜೇಯ 71 ರನ್‌, 5 ಬೌಂಡರಿ, 5 ಸಿಕ್ಸರ್‌) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 11.4 ಓವರ್‌ಗಳಲ್ಲಿ 2 ವಿಕೆಟ್‌ನಷ್ಟಕ್ಕೆ 126 ರನ್‌ ಪೇರಿಸಿ ಗೆಲುವಿನ ನಗೆ ಬೀರಿತು.

ಜೋರ್ಡನ್‌ 3 ವಿಕೆಟ್‌, ಕ್ರಿಸ್‌ ವೋಕ್ಸ್‌ ಮತ್ತು ಟೈಮಲ್‌ ಮಿಲ್ಸ್‌ ತಲಾ 2 ವಿಕೆಟ್‌ ಉರುಳಿಸಿ ಇಂಗ್ಲೆಂಡಿಗೆ ಮೇಲುಗೈ ಒದಗಿಸಿದರು. ಇವರೆಲ್ಲರೂ ಸೇರಿ ಕಪ್ತಾನನ ಬೌಲಿಂಗ್‌ ಆಯ್ಕೆಯ ನಿರ್ಧಾರವನ್ನು ಸಮರ್ಥಿಸಿದರು.

ಇದನ್ನೂ ಓದಿ:ಆಸ್ಟ್ರೇಲಿಯ ಕ್ರಿಕೆಟ್‌ ದಿಗ್ಗಜ ಅಲನ್‌ ಡೇವಿಡ್ಸನ್‌ ನಿಧನ

ಆರಂಭದಿಂದಲೇ ಆಸ್ಟ್ರೇಲಿಯದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಅದುರುತ್ತ ಹೋಯಿತು. ಪವರ್‌ ಪ್ಲೇಯಲ್ಲೇ 3 ವಿಕೆಟ್‌ ಉದುರಿಸಿಕೊಂಡ ಆಸೀಸ್‌ ತೀವ್ರ ಸಂಕಟಕ್ಕೆ ಸಿಲುಕಿತು. ಸ್ಕೋರ್‌ಬೋರ್ಡ್‌ನಲ್ಲಿ ಕೇವಲ 21 ರನ್‌ ದಾಖಲಾಗಿತ್ತು. ಆಗ ವೋಕ್ಸ್‌ ಮತ್ತು ಜೋರ್ಡನ್‌ ಘಾತಕ ದಾಳಿ ಸಂಘಟಿಸಿದರು. ವಾರ್ನರ್‌ (1), ಸ್ಮಿತ್‌ (1) ಮತ್ತು ಮ್ಯಾಕ್ಸ್‌ವೆಲ್‌ (6) ಪಟಪಟನೆ ಉದುರಿದರು.

Advertisement

ಆದರೆ ಒಂದು ತುದಿಯಲ್ಲಿ ಆರಂಭಕಾರ ಆರನ್‌ ಫಿಂಚ್‌ ಗಟ್ಟಿಯಾಗಿ ನಿಂತಿದ್ದರು. ಅವರಿಗೆ ಆ್ಯಶrನ್‌ ಅಗರ್‌ (20) ಉತ್ತಮ ಬೆಂಬಲವಿತ್ತರು. 6ನೇ ವಿಕೆಟಿಗೆ 47 ರನ್‌ ಒಟ್ಟುಗೂಡಿದ್ದರಿಂದ ಆಸೀಸ್‌ ಸ್ಕೋರ್‌ ನೂರರ ಗಡಿ ದಾಟಿತು. ಫಿಂಚ್‌ 19ನೇ ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿ 44 ರನ್‌ ಹೊಡೆದರು (49 ಎಸೆತ, 4 ಬೌಂಡರಿ).

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-20 ಓವರ್‌ಗಳಲ್ಲಿ 125 (ಫಿಂಚ್‌ 44, ಅಗರ್‌ 20, ವೇಡ್‌ 18, ಜೋರ್ಡನ್‌ 17ಕ್ಕೆ 3, ವೋಕ್ಸ್‌ 23ಕ್ಕೆ 2, ಮಿಲ್ಸ್‌ 45ಕ್ಕೆ 2). ಇಂಗ್ಲೆಂಡ್‌-11.4 ಓವರ್‌ಗಳಲ್ಲಿ 126( ಬಟ್ಲರ್‌ ಅಜೇಯ 71, ರಾಯ್‌ 22, ಜಾನಿ ಬೇರ್‌ಸ್ಟೊ ಅಜೇಯ 16, ಆ್ಯಸ್ಟನ್‌ ಅಗರ್‌ 15ಕ್ಕೆ 1. ಪಂದ್ಯಶ್ರೇಷ್ಠ: ಕ್ರಿಸ್‌ ಜೋರ್ಡನ್‌

Advertisement

Udayavani is now on Telegram. Click here to join our channel and stay updated with the latest news.

Next